ಬೆಳಗಾವಿ: ಕೀಣಿಯೆ ಗ್ರಾಮದಲ್ಲಿ ಶ್ರೀ ಚೌರಾಶಿದೇವಿ ಯಾತ್ರೆಯ ನಿಮಿತ್ಯ ಶ್ರೀ ಬಾಲ ಹನುಮಾನ ಕುಸ್ತಿಗೀರ ಸಂಘಟನಾ ವತಿಯಿಂದ ಆಯೋಜಿಸಲಾಗಿದ್ದ ‘ಗ್ರಾಮೀಣ ಆಮದಾರ ಕೇಸರಿ’ ಕುಸ್ತಿ ಪಂದ್ಯಾವಳಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಚಾಲನೆ ನೀಡಿದರು. ಈ ವೇಳೆ ಸ್ಥಳೀಯ ಮುಖಂಡರು, ಕುಸ್ತಿಪಟುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.