ಬಳ್ಳಾರಿ :ಏ 22 ಲೋಕಸಭಾ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಿನ್ನೆ ಕೊರಲಗುಂದಿ ಗ್ರಾಮದಲ್ಲಿ ಗ್ರಾಮದ ಮುಖಂಡರಾದ ದೊಡ್ಡ ಕೇಶವರೆಡ್ಡಿ ಅವರು ಬಳ್ಳಾರಿ ಲೋಕ ಸಭಾ ಅಭ್ಯರ್ಥಿ ಶ್ರೀ ರಾಮುಲು ಪರ ಅಬ್ಬರದ ಪ್ರಚಾರವನ್ನು ಮಾಡಿದರು.
ಕೊರಲಗುಂದಿ ಗ್ರಾಮದ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡ ಕೇಶವರೆಡ್ಡಿ ಮತ್ತು ಬಿಮರೆಡ್ಡಿ ಅವರ ಮನೆಗೆ ಚೇಟಿ ನೀಡಿದಾಗ
ಕಟ್ಟೆರಾಮ ರೆಡ್ಡಿ, ವೈ ವಿರಪ್ಪ, ನಾಗಿರೆಡ್ಡಿ, ಗುರುಪಾದ ರೆಡ್ಡಿ ಶ್ರೀನಿವಾಸ್ ರೆಡ್ಡಿ ಇನಿತರರ ಉಪಸ್ಥಿತರಿದ್ದರು
ಉಪಹಾರ ಸೇವಿಸಿ ಸಾವಿರಾರು ಅಭಿಮಾನಿಗಳು ಕಾರ್ಯಕರ್ತ , ಗ್ರಾಮದ ಜನರೊಂದಿಗೆ ಪ್ರಚಾರಕ್ಕೆ ಸಾಗಿದ್ದು ಗ್ರಾಮವೆ ಕೇಸರಿ ಮಯವಗಿತ್ತು.
ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಕೊರಲಗುಂದಿ ದೊಡ್ಡ ಕೇಶವರೆಡ್ಡಿ ಅವರು ಶ್ರೀರಾಮುಲು ಅಂದರೆ ಕೆಲಸ ಕೆಲಸ ಅಂದರೆ ಶ್ರೀರಾಮುಲು ಕಾಂಗ್ರೆಸ್ ಕೊಡುಗೆ ನಮ್ಮ ಜಿಲ್ಲೆಗೆ ಎನೂ ಇಲ್ಲ ಎಲ್ಲಾ ಕಾಲಿ ಚೊಂಬು ರಾಮುಲು ಕೊಡುಗೆ ಸಣ್ಣದಲ್ಲ ನಮ್ಮನಿಮ್ಮೆಲ್ಲರ ಮನೆ ಮಗ ಎಂದು ನಮ್ಮ ನಿಮ್ಮಲ್ಲರನ್ನು ಬಿಟ್ಟು ಕೊಡಲ್ಲ.
ಗ್ಯಾರೆಂಟಿಗಳನ್ನು ನಂಬಿ ಕಾಂಗ್ರೆಸ್ ಗೆ ಮತ ನೀಡಿ ಮೋಸ ಹೋಗಬೇಡಿ, ಈ ಗ್ಯಾರೆಂಟಿಗಳು ಈ ಚುನಾವಣೆ ನಂತರ ನಿಲ್ಲುವುದು ಗ್ಯಾರೆಂಟಿ,ಪ್ರೀ ಕರೆಂಟ್ ಬಸ್ ಸೌಲಭ್ಯ ನೀಡಲು ಸರ್ಕಾರದ ಬಳಿ ಹಣ ಇಲ್ಲ. ಲೋಕಸಭಾ ಚುನವಣೆ ಅಂತ ಸಾಲ ಮಾಡಿ ನೀಡಿದೆ. ಚುನಾವಣೆ ನಂತರನಿಲ್ಲೋದು ಗ್ಯಾರೆಂಟಿ. ಅದಕ್ಕಾಗಿ ದೇಶದ ಭದ್ರತೆ, ಆರ್ಥಿಕ ಅಭಿವೃದ್ದಿ, ಉತ್ತಮ ರೈಲ್ವೇ ಸೌಲಭ್ಯಕ್ಕಾಗಿ ಬಿಜೆಪಿಗೆ ಮತ ನೀಡಿ, ಶ್ರೀರಾಮುಲು ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಆಗ್ತಾರೆ ಬಳ್ಳಾರಿ ನಗರ ಮತ್ತಷ್ಟು ಅಭಿವೃದ್ಧಿ ಆಗಲಿದೆ.
ಲೋಕಸಭಾ ಚುನಾವಣಾ ಅಭ್ಯರ್ಥಿ ಶ್ರೀ ರಾಮುಲು ಅವರು ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವ ಆಶಯವನ್ನು ಇಟ್ಟುಕೊಂಡು ಇಂದು ಪ್ರಚಾರವನ್ನು ನಡೆಸಿದ್ದಾರೆ ನಿವೆಲ್ಲಾರು ರಾಮುಲುಗೆ ಮತ ನೀಡಿ ಬಹುಮತಗಳಿಂದ ರಾಮುಲು ಅವರನ್ನು ಆರಿಸಿಕಳಿಸೊಣ ಎಂದರು.
ಕೊರಲಗುಂದಿ ಗ್ರಾಮದ ಪ್ರಚಾರದಲ್ಲಿ ಅಭ್ಯರ್ಥಿ ಶ್ರೀರಾಮುಲು, ಮಾಜಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಮುರಹರ ಗೌಡ, ರಾಮಲಿಂಗಪ್ಪ ಮಾಜಿ ಕಂಪ್ಲಿ ಶಾಸಕ ಸುರೇಶ್ ಬಾಬು, ಕೊರಗುಂದಿ ದೊಡ್ಡ ಕೇಶವ ರೆಡ್ಡಿ, ಐನಾಥ್ ರೆಡ್ಡಿ, ಬಿಜೆಪಿ ಎ.ಪಿ.ಎಂ.ಸಿ ಅಧ್ಯಕ್ಷ ಉಮೇಶ್ , ಗ್ರಾ.ಪಂ ಅಧ್ಯಕ್ಷ ರಾಘವ ರೆಡ್ಡಿ, ಜನತಾ ಬಜಾರ್ ಅಧ್ಯಕ್ಷರು ಪ್ರದೀಪ್ ರೆಡ್ಡಿ, ಶಿವಕುಮಾರ್ , ತಳವಾರ್ ಬಸವ, ರಮಣ ರೆಡ್ಡಿ, ಬಸವ ನಾಯಕ್, ಗುರುವ ರೆಡ್ಡಿ. ಇನ್ನೂ ಮುಂತಾದವರು ಭಾಗಿಯಾಗಿದ್ದರು.