ಬೆಳಗಾವಿ.ಆತ್ಮಹತ್ಯೆ ಮಾಡಿಕೊಂಡ ಮೃತ ಸರ್ಕಾರಿ ನೌಕರ ರುದ್ರಣ್ಣ ಯಡವನ್ನವರ ಅವರ ಮನೆಗೆ ಸಾಂತ್ವನ ಹೇಳಲು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಜಗದೀಶ್ ಶೆಟ್ಟರ ಹಾಗೂ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಮುರುಗೇಂದ್ರಗೌಡ ಪಾಟೀಲ,ಪಂಚನಗೌಡ ದೇಮನಗೌಡ್ರ ಅವರು ತೆರಳಿ ಮೃತ ಸರ್ಕಾರಿ ನೌಕರ ರುದ್ರಣ್ಣಅವರ ತಾಯಿ ಹಾಗೂ ಅವರ ಹೆಂಡತಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಭಾ.ಜ.ಪಾ ಮುಖಂಡರಾದ ಯಲ್ಲೇಶ ಕೊಲಕಾರ, ವೀರಭದ್ರ ಪೂಜಾರಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು