ನವದೆಹಲಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ವಿಜಯ ಸಾಧಿಸಿದ ಪ್ರಿಯಂಕಾ ಜಾರಕಿಹೊಳಿ ಸೋಮವಾರ ಸಂಸತ್ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಮಂಗಳವಾರ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು ಕೃತಜ್ಞತೆ ಸಲ್ಲಿಸಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನವದೆಹಲಿಯ ನಿವಾಸದಲ್ಲಿ ಭೇಟಿಯಾದ ಸಂಸದೆ ಪ್ರಿಯಂಕಾ ಜಾರಕಿಹೊಳಿಗೆ ಅಭಿನಂದನೆ ಸಲ್ಲಿಸಿ, ಚಿಕ್ಕ ವಯಸ್ಸಿನಲ್ಲಿ ಸಂಸದೆಯಾಗುವ ಭಾಗ್ಯ ದೊರೆತಿದೆ. ತಂದೆ ಸತೀಶ್ ಜಾರಕಿಹೊಳಿ ಅವರಂತೆ ನಿನು ಕೂಡ ಸಮಾಜ ಸೇವೆ, ರಾಜಕೀಯದಲ್ಲಿ ಹೆಸರು ಮಾಡಬೇಕೆಂದು ಹೇಳಿ ಇದೇ ವೇಳೆ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ವಿನಯ ಕುಲಕರ್ಣಿ, ಶಾಸಕರಾದ ಆಸೀಫ್(ರಾಜು) ಸೇಠ್, ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ್, ಮಾಜಿ ಶಾಸಕರಾದ ಎಸ್.ಬಿ. ಘಾಟಗೆ, ಕೆಪಿಸಿಸಿ ಕಾರ್ಯದರ್ಶಿ ಸುನೀಲ್ ಹಣಮನ್ನವರ್, ಸತೀಶ್ ಶುಗರ್ಸ್ ನಿರ್ದೇಶಕ, ಯುವ ನಾಯಕ ರಾಹುಲ್ ಜಾರಕಿಹೊಳಿ, ಮುಖಂಡರಾದ ಮಹಾವೀರ ಮೊಹಿತೆ ಇದ್ದರು.