ಬೆಳೆಗೆ ಉತ್ತಮ ಬೆಲೆ ದೊರೆತರೆ ಮಾತ್ರ ರೈತರ ಆತ್ಮಹತ್ಯೆ ನಿಲ್ಲುತ್ತವೆ – ಸಂಸದ ಕಡಾಡಿ

Chandrashekar Pattar
ಬೆಳೆಗೆ ಉತ್ತಮ ಬೆಲೆ ದೊರೆತರೆ ಮಾತ್ರ ರೈತರ ಆತ್ಮಹತ್ಯೆ ನಿಲ್ಲುತ್ತವೆ – ಸಂಸದ ಕಡಾಡಿ
Oplus_131074
WhatsApp Group Join Now
Telegram Group Join Now

ಮೂಡಲಗಿ: ‘ಭಾರತವು ಕೃಷಿ ಸಂಸ್ಕೃತಿಯ ದೇಶವಾಗಿದ್ದು ಕೃಷಿಯನ್ನು ಉತ್ತೇಜಿಸುವ ಯೋಜನೆಗಳನ್ನು ಜಾರಿಗೆ ತಂದು ಅವುಗಳ ಪ್ರಯೋಜನ ರೈತರಿಗೆ ತಲುಪುವಂತಾಗಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಮೂಡಲಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮೂಡಲಗಿ ನವರಾತ್ರಿ ಉತ್ಸವ ಸಮಿತಿಯ ಆತಿಥ್ಯದಲ್ಲಿ ಕೃಷಿ, ತೋಟಗಾರಿಕೆ ಇಲಾಖೆಗಳು, ಕೃಷಿ ಮತ್ತು ತೋಟಗಾರಿಕ ವಿಶ್ವ ವಿದ್ಯಾಲಯಗಳು, ಕರ್ನಾಟಕ ಪ್ರದೇಶ ಕೃಷಿ ಸಮಾಜ, ಶಿವಬೋಧರಂಗ ಪಿಕೆಪಿಎಸ್ ಸಹಯೋಗದಲ್ಲಿ 3 ದಿನಗಳ ಕೃಷಿ ಮೇಳವನ್ನು ಶನಿವಾರ ಗೋ ಪೂಜೆಯನ್ನು ನೆರವೇರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರೆತರೆ ಮಾತ್ರ ರೈತ ಸಂತೋಷವಾಗಿರುತ್ತಾನೆ ಮತ್ತು ರೈತರ ಆತ್ಮಹತ್ಯೆಗಳು ನಿಲ್ಲುತ್ತವೆ. ರೈತರು ಕೃಷಿಯಲ್ಲಿ ಪ್ರಗತಿ ಸಾಧಿಸಲು ಕೃಷಿಯಲ್ಲಿ ಆಗಿರುವ ಬದಲಾವಣೆ, ಹೊಸ ಅವಿಷ್ಕಾರಗಳು, ಸರ್ಕಾರದ ಯೋಜನೆಗಳ ಬಗ್ಗೆ, ಸರ್ಕಾರದ ಸಬ್ಸಿಡಿಗಳ ಬಗ್ಗೆ ತಿಳಿದುಕೊಳ್ಳಬೇಕು, ಕೃಷಿಗೆ ಸಂಬಂದಿಸಿದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಬೇಕು. ರೈತರು ಭೂಮಿ ನಂಬಿ ಶ್ರದ್ಧೆಯಿಂದ ಕಾಯಕ ಮಾಡಿದರೆ ಭೂತಾಯಿ ಎಂದಿಗೂ ಕೈ ಬಿಡೋದಿಲ್ಲ ಎಂದರು.

ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ ರೈತರು ತಾವು ಬೆಳೆಸಿದ ಪೈರನ್ನು ಮೌಲ್ಯವರ್ಧನೆ ಮಾಡಿ ಉತ್ತಮ ಆದಾಯವನ್ನು ಪಡೆದುಕೊಳ್ಳಬೇಕು ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಮಾತನಾಡಿದರು.
ಸಾನ್ನಿಧ್ಯವಹಿಸಿದ್ದ ಸುಣಧೋಳಿಯ ಶಿವಾನಂದ ಸ್ವಾಮಿಗಳು, ಮುನ್ಯಾಳ, ರಂಗಾಪುರದ ಶಿವಲಿಂಗ ಮುರುಘರಾಜೇಂದ್ರ ಸ್ವಾಮಿಗಳು, ಶಿರೋಳದ ಶಂಕರಾರೂಢ ಸ್ವಾಮಿಗಳು, ಶಿವಾಪುರ ಅಡವಿಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮಿಗಳು ಆಶೀರ್ವಾದ ನುಡಿಗಳನ್ನು ಹೇಳಿದರು. ಕೃಷಿ ಮೇಳದ ರೂವಾರಿ ಬೆಳಗಾವಿ ವಿಭಾಗಿಯ ಕೃಷಿ ಇಲಾಖೆಯ ಉಪನಿರ್ದೇಶಕ ರಂಗಣ್ಣ ನಾಗನ್ನವರ ಅವರನ್ನು ಸಮಾರಂಭದ ವೇದಿಕೆಯಲ್ಲಿ ಸತ್ಕರಿಸಿ ಗೌರವಿಸಿದರು.

ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೆಂಕಟೇಶ ಸೋನವಾಲಕರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಖರ್ಷಾದ ನದಾಫ, ನಾಗನೂರದ ಅಲಗೌಡ ಪಾಟೀಲ, ಎಸ್.ಆರ್. ಸೋನವಾಲಕರ, ಆರ್.ಪಿ. ಸೋನವಾಲಕರ, ಸದಾಶಿವ ತಲಬಟ್ಟಿ, ಡಾ.ಭಾರತಿ ಕೋಣಿ, ಮಹಾದೇವ ಶೆಕ್ಕಿ, ಚಿನಪ್ಪ ಪೂಜೇರಿ, ರಾಮಣ್ಣ ಹಂದಿಗುಂದ, ರವೀಂದ್ರ ಸಣ್ಣಕ್ಕಿ, ಮರೆಪ್ಪ ಮರೆಪ್ಪಗೋಳ, ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ ಕಮತ, ತೋಟಗಾರಿಕೆ ಇಲಾಖೆಯ ಡಾ. ಎಂ.ಎಲ್. ಜನಮಟ್ಟಿ, ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ಲಯನ್ಸ್ ಅಧ್ಯಕ್ಷ ಸಂಜಯ ಮೋಕಾಶಿ ವೇದಿಕೆಯಲ್ಲಿದ್ದರು. ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲು ಬೋಳನ್ನವರ ಸ್ವಾಗತಿಸಿದರು, ಅಂಬೀಕಾ ಕೃಷ್ಣಮೂರ್ತಿ ನಿರೂಪಿಸಿದರು, ಈರಪ್ಪ ಢವಳೇಶ್ವರ ವಂದಿಸಿದರು.

ಮಳಿಗೆಗಳು: 150 ಕೃಷಿ ಸಂಬಂಧಿಸಿದ ಮಾರಾಟ ಮಳಿಗೆಗಳು ಮೇಳದಲ್ಲಿವೆ. ಕಿಲಾರಿ ರಾಸುಗಳ ಪ್ರದರ್ಶನ, ಶ್ವಾನ ಪ್ರದರ್ಶನ ಸೇರಿದಂತೆ ವೈವಿಧ್ಯಮಯವಾದ ಸ್ಪರ್ಧೆಗಳನ್ನು ಸಹ ಎರ್ಪಡಿಸಿರುವರು. ಬೆಳಿಗ್ಗೆ ಶ್ರೀಗಳನ್ನು ಮತ್ತು ಅತಿಥಿಗಳನ್ನು ಎತ್ತಿನ ಬಂಡಿಯಲ್ಲಿ ಕಲೇಶ್ವರ ವೃತ್ತದಿಂದ ಮೆರವಣಿಗೆ ಮೂಲಕ ಸಮಾರಂಭ ಸ್ಥಳಕ್ಕೆ ಬರಮಾಡಿಕೊಂಡರು.

WhatsApp Group Join Now
Telegram Group Join Now
Share This Article