ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ಸಂಸದ ಡಾ.ಉಮೇಶ್ ಜಾಧವ್

Ravi Talawar
ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ಸಂಸದ ಡಾ.ಉಮೇಶ್ ಜಾಧವ್
WhatsApp Group Join Now
Telegram Group Join Now

ಕಲಬುರಗಿ01: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಇಂದು ಬಿಸಿಲಿನ ತಾಪಕ್ಕೆ ಸಂಸದ ಡಾ.ಉಮೇಶ್ ಜಾಧವ್ ಬಿದ್ದಿದ್ದಾರೆ. ಕಲಬುರಗಿಯಲ್ಲಿ ವಿರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ ನಡೆಯುತ್ತಿತ್ತು. ಇಲ್ಲಿಗೆ ಜಾಧವ್‌ ಭೇಟಿ ನೀಡಿದ್ದರು. ಈ ವೇಳೆ ಬಿಸಿಲಿನ ತಾಪಕ್ಕೆ ತಲೆಸುತ್ತು ಬಂದು ರಸ್ತೆಯಲ್ಲಿಯೇ ಕುಸಿದು ಬಿದ್ದರು. ಬಳಿಕ ಅವರನ್ನು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದಕ್ಕೂ ಮುನ್ನ ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಜಾಧವ್‌, ಕಲಬುರಗಿಯಲ್ಲಿ ಲಾ ಆಂಡ್ ಸಂಪೂರ್ಣವಾಗಿ ಸತ್ತು ಹೋಗಿದೆ. ರಾಮ ಮಂದಿರ ಉದ್ಘಾಟನೆ ಮರುದಿನ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಆಗಿತ್ತು. ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ಆರೋಪಿಗಳಿಗೆ ನಿನ್ನೆ ಜಾಮೀನು ಮಂಜೂರು ಆಗಿದೆ. ಜಾಮೀನಿನ ಮೇಲೆ ಹೊರ ಬಂದ ಆರೋಪಿಯ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ್ದಾರೆ ಎಂದಿದ್ದರು.

ಜನವರಿ 23 ರಂದು ಕಲಬುರಗಿ ಬಂದ್ ಮಾಡಿ ಭಯದ ವಾತಾವರಣ ಸೃಷ್ಟಿ ಮಾಡಿದ್ರು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಆದರೆ ಅಂದು ಗಲಾಟೆ ಮಾಡಿದ ಆರೋಪಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಪ್ರಿಯಾಂಕ್ ಖರ್ಗೆ ಡಿಕ್ಟೇರ್ ಶಿಪ್ ಮಾಡ್ತಿದ್ದಾರೆ. ಡಿಎನ್ ಎ ಟೆಸ್ಟ್ ಮಾಡಿಸ್ತಾರಂತೆ , ಮೊದಲು ನಿಮ್ಮದು ಡಿಎನ್ ಎ ಟೆಸ್ಟ್ ಮಾಡಿಸಬೇಕು. ನಾವು ಒಬ್ಬ ಸಾಮಾನ್ಯ ದಲಿತ ಕಾರ್ಯಕರ್ತನಿಗೆ ಟಿಕೆಟ್ ಕೊಡಬೇಕಾಗಿತ್ತು ಅಂತಾ ನಾವು ಹೇಳಿದ್ದೀವಿ. ಒಂದು ಸುಳ್ಳನ್ನ ನೂರು ಸಲ ಹೇಳಿ ಪ್ರಿಯಾಂಕ್ ಖರ್ಗೆ ಸತ್ಯ ಮಾಡೋದಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದರು

 

WhatsApp Group Join Now
Telegram Group Join Now
Share This Article