ಬಳ್ಳಾರಿ ಸೆ 15. ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಜನಗಣತಿಯಲ್ಲಿ ಗಂಗಾಮತಸ್ತ ಸಮುದಾಯಕ್ಕೆ ಸೇರಿದ ಎಲ್ಲಾ 37 ಉಪ ಜಾತಿಗಳವರು ಜಾತಿ ಕಲಂ ನಲ್ಲಿ ಬೆಸ್ತರು ಎಂದು ನಮೂದಿಸಿ ಮತ್ತು ಉಪಜಾತಿ ಕಾಲದಲ್ಲಿ ನೀವು ಯಾವ ಸಂಸ್ಕೃತಿಯನ್ನು ಅನುಸರಿಸಿದ್ದೀರೋ ಅದನ್ನು ಬರೆಸಿ ಗಂಗಾ ಮತ ಸಮಾಜದ ಒಗ್ಗಟ್ಟಿಗೆ ಸಹಕರಿಸಬೇಕೆಂದು ಗಂಗಾಮತಸ್ಥ ಸಂಘದ ಮೌಲಾಲಿ ಕರೆ ನೀಡಿದರು.
ಅವರು ನಗರದ ಪತ್ರಿಕ ಭವನದಲ್ಲಿ ಪ್ರತಿಕಗೋಷ್ಠಿಯನ್ನು ನಡೆಸಿ ಮಾತನಾಡಿ, ಸುಮಾರು 14-15 ಲಕ್ಷ ಜನಸಂಖ್ಯೆ ಹೊಂದಿರುವ ಗಂಗಾಮತಸ್ಥರು ರಾಜ್ಯದಲ್ಲಿ, ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದಾರೆ, ಕರಾವಳಿ ಭಾಗದಲ್ಲಿ ಮೊಗವೀರ, ಹೈದ್ರಾಬಾದ್ ಕರ್ನಾಟಕದಲ್ಲಿ ಬೆಸ್ತ, ಉತ್ತರ ಕರ್ನಾಟಕದಲ್ಲಿ ಕೋಳಿ, ಅಂಬಿಗ, ಭಾರಿಕಾ ಎಂದು ಹೀಗೆ ಸುಮಾರು 37 ಉಪಪಂಗಡಗಳಿವೆ ಅವುಗಳೆಲ್ಲವನ್ನು ಒಟ್ಟುಗೂಡಿಸಿ ಗಂಗಾಮತ ಸಮುದಾಯವನ್ನು ಒಂದು ಮಾಡಬೇಕಾದ ಅವಶ್ಯಕತೆ ಇದೆ ಕಾರಣ ಎಲ್ಲಾ ಗಂಗಾಮತಸ್ಥರು ಬಾರಿಕಾರರು ಬೆಸ್ತರು ಇನ್ನಿತರ ಉಪಜಾತಿಗಳವರು ಜಾತಿಕಲಂ ನಲ್ಲಿ ಬೆಸ್ತರು ಎಂದು ಬರಸಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಂಪಾಪತಿ, ಹುಲುಗಪ್ಪ, ಮೋಹನ್, ಶಿವಶಂಕರ್, ಲಿಂಗಪ್ಪ, ದಾಕ್ಷಾಯಿಣಿ, ಆನಂದ್ ಹೆಗಡೆ, ಬಸವರಾಜ್, ಜಗದೀಶ್, ಸೇರಿದಂತೆ ಭಾರಿಕ ಸಮುದಾಯದ ಇತರ ಮುಖಂಡರುಗಳು ಇದ್ದರು.