ದೆಹಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮೌಲಾಬಿ ಆಯ್ಕೆ

Sandeep Malannavar
ದೆಹಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮೌಲಾಬಿ ಆಯ್ಕೆ
WhatsApp Group Join Now
Telegram Group Join Now
ಬಳ್ಳಾರಿ, ಜ.24… 77ನೇ ಗಣರಾಜ್ಯೋತ್ಸವದ ದಿಲ್ಲಿ ಕಾರ್ಯಕ್ರಮಕ್ಕೆ ಆಯ್ಕೆಯಾದ ಎಚ್ ವೀರಾಪುರ ಗ್ರಾಮದ ಮೌಲಾಬಿ ಗಂಡ ಸಲೀಂ ಕುಟುಂಬದ ಸದಸ್ಯರನ್ನು ಜ್ಞಾನಜೋತಿ ಜಡೇಶ ಶಿವಲಿಂಗ ಮಂದಿರದ ವತಿಯಿಂದ ಅಭಿನಂದಿಸಲಾಯಿತು
ಈ ವೇಳೆ ಜಡೇಶ ತಾತನವರು ಮಾತನಾಡಿ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ರೊಟ್ಟಿ ಸುಡುವ ಕಾಯಕರ ಮುಖಾಂತರ ಸ್ವಾವಲಂಬಿ ಬದುಕನ್ನು ರೂಪಿಸಿಕೊಂಡಿರುವ ಮೌಲಾಬಿಯವರನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನ ನೀಡಿರುವುದು ನಮ್ಮ ಗ್ರಾಮಕ್ಕೆ ಸಂತೋಷದ ವಿಚಾರ ಎಲ್ಲಾ ಮಹಿಳೆಯರು ಕೂಡ ಈ ರೀತಿಯ ಸ್ವಾವಲಂಬಿ ಬದುಕನ್ನು ರೂಪಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು
ನಂತರ ಶಿಕ್ಷಕ ಎಸ್ ರಾಮಪ್ಪ ಮಾತನಾಡಿ ಎನ್ ಆರ್ ಎಲ್ ಎಂ ಒಕ್ಕೂಟ ವ್ಯವಸ್ಥೆಯಿಂದ ದೊರೆಯುವ ಸಾಲ ಸೌಲಭ್ಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿರುವುದು ನಿಜವಾಗು ಹೆಮ್ಮೆಯ ಸಂಗತಿ ಈ ಮೂಲಕ ಇದು ಪ್ರತಿಯೊಬ್ಬ ಮಹಿಳೆಯರಿಗೂ ಸ್ಪೂರ್ತಿ ಎಂದರು
ಈ ಸಂದರ್ಭದಲ್ಲಿ ಪ್ರಮುಖರಾದ ಶಿವನಗೌಡ ಪಾಟೀಲ್ ಈಶ್ವರ್ ಗೌಡ ಬಿಬಿಮ್ಮ ಶಿವನೇಗೌಡರ ರಾಮು ಸುರೇಶ್ ಸೇರಿದಂತೆ ಶಿವಮಾಲಾಧಾರಿಗಳು ಶ್ರೀಮಠದ ಸದ್ಭಕ್ತರು ಇದ್ದರು
WhatsApp Group Join Now
Telegram Group Join Now
Share This Article