ಬಳ್ಳಾರಿ, ಫೆ.16: ನಗರದ ಬೆಂಗಳೂರು ರಸ್ತೆಯ ಈದ್ಗಾ ಮೈದಾನಕ್ಕೆ ಸೇರಿದ ಅಂದಾಜು 11.5 ಎಕರೆ ಜಮೀನನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ನಕಲಿ ದಾಖಲೆ ಮೂಲಕ ಪರರಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ ಎಂದು ಪಾಲಿಕೆಯ ಪ್ರತಿಪಕ್ಷದ ನಾಯಕ ಶ್ರೀನಿವಾಸ್ ಮೋತ್ಕರ್ ಆರೋಪಿಸಿದ್ದಾರೆ.
ಈ ಬಗ್ಗೆ ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು. ನಗರದ ಟಿಎಸ್ ನಂ.650 ಕ್ಕೆ ಸೇರಿದ 46902.67 ಚ.ಮೀಟರ್ ನ ಆಸ್ತಿಗೆ ಪಾಲಿಕೆಯ ಅಧಿಕಾರಿಗಳು ಫಾರಂ 2 ನೀಡಿದ್ದಾರೆ.
ವಾಸ್ತವದಲ್ಲಿ ಇದು ಇದ್ಗಾ ಮೈದಾನ ಅಂದರೆ ವಕ್ಫ ಆಸ್ತಿಯಾಗಿದ್ದು. ಪಟೇಲ್ ನಗರದ ಎ.ಪ್ರಭಾವತಿ ಎಂಬುವವರು ಹೆಸರಲ್ಲಿ ಫಾರಂ 2 ಪಡೆದಿದ್ದಾರೆ. ಹೀಗೆ ಪಡೆಯುವಾಗ ಅವರು ಅಗತ್ಯ ಶುಲ್ಕವನ್ನು ಪಾವತಿಸಿಲ್ಲ. ಅಲ್ಲದೆ ಕೊಳಗಲ್ಲಿನ ಪದ್ಮಾವತಿ ಎಂಬುವವರ ದಾಖಲೆ ಪತ್ರ ನೀಡಿ ಪಾರಂ 2 ಪಡೆದಿದ್ದಾರೆ. ಅಷ್ಟೇ ಅಲ್ಲದೆ ಪಾಲಿಕೆಯ ಜೋನ್ ಎರಡರಲ್ಲಿ ಬರುವ ಈ ಆಸ್ತಿಗೆ ಜೋನ್ 3 ರಲ್ಲಿ ಅನುಮೋದನೆ ನೀಡಿದೆ. ಇದರಲ್ಲಿ ಪಾಲಿಕೆಯ ಕಂದಾಯ ಅಧಿಕಾರಿಗಳ ಕೈವಾಡ ಇದೆ ಎಂದರು.
ಬಿಜೆಪಿ ಪಕ್ಷದ ನಗರ ಅಧ್ಯಕ್ಷ ಜಿ.ವೆಂಕಟರಮಣ ಮಾತನಾಡಿ, ಕಾಂಗ್ರೆಸ್ ನವರು ಮಾವು ಮುಸ್ಲೀಂರ ಆಸ್ತಿ ರಕ್ಷಣೆ ಮಾಡುತ್ತೇವೆ ಎನ್ನುತ್ತಾರೆ. ಇದೇನ ಅವರು ರಕ್ಷಣೆ ಮಾಡುವ ವಿಧಾನ ಎಂದು ಪ್ರಶ್ನಿಸಿದರು.
ಪಾಲಿಕೆ ಸದಸ್ಯ ಕೆ ಹನುಮಂತ ಮಾತನಾಡಿ. ನಗರದಲ್ಲಿನ ಉದ್ಯಾನವನಗಳನ್ನು ಸಹ ಲಪಟಾಯಿಸಲಾಗುತ್ತಿದೆ. ಆದರೂ ಪಾಲಿಕೆ ಮೌನವಹಿಸಿದೆಂದು ಆರೋಪಿಸಿದರು.
ಅಸ್ತಿಯ ಅಕ್ರಮ ವರ್ಗಾವಣೆ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಲಾಯ್ತು. ಪಾಲಿಕೆ ಯಲ್ಲಿ ಗುತ್ತಿಗೆ ಆಧಾರಿತ ಪಾಲಿಕೆ ನೌಕರರನ್ನು ವರ್ಗಾವಣೆ ಮಾಡುವಲ್ಲಿಯೂ ಹಣ ವಸೂಲಿ ನಡೆದಿದೆ. ವರ್ಗಾವಣೆ ಮಾಡಿದ ಒಂದೇ ದಿನದಲ್ಲಿ ಮತ್ತೆ ಕೆಲವರನ್ನು ಅದೇ ಸ್ಥಾನದಲ್ಲಿ ಮುಂದುವರೆಸಿರುವುದು ಲಂಚ ಪಡೆದಿರುವುದಕ್ಕೆ ಪುಷ್ಟಿ ಮೀಡುತ್ತದೆಂದರು.
ಸುದ್ದಿಗೋಷ್ಟಿಯಲ್ಲಿ ಪಾಲಿಕೆ ಸದಸ್ಯರುಗಳಾದ ಸುರೇಖ ಮಲ್ಲನಗೌಡ, ಕೆ.ಎಸ್.ಅಶೋಕ್ ಕುಮಾರ್, ಹನುಂತಪ್ಪ, ಎನ್.ಗೋವಿಂದರಾಜುಲು ಮೊದಲಾದವರು ಇದ್ದರು.
ನಕಲಿ ದಾಖಲೆಗಳ ಮೂಲಕ, ಸರಿಯಾದ ಕ್ರಮದಲ್ಲಿ ಫಾರಂ 2 ನೀಡಿಲ್ಲ. ಇದರಲ್ಲಿ ಅಧಿಕಾರಿಗಳ ತಪ್ಪು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದಕ್ಕಾಗಿ ಈ ಬಗ್ಗೆ ಕ್ರಮಿನಲ್ ಕೇಸು ದಾಖಲಿಸಿ. ತನಿಕಜೆ ನಡೆಸಲಿದೆ.
ಪಿ.ಎಸ್.ಮಂಜುನಾಥ
ಆಯುಕ್ತರು, ಮಹಾನಗರ ಪಾಲಿಕೆ, ಬಳ್ಳಾರಿ.


