ಗದಗ02: ತಾಯಂದಿರು ಗ್ಯಾರಂಟಿ ಯೋಜನೆಗಳ ಆಮೇಶಕ್ಕೆ ಒಳಗಾಗಬಾರದು ಹಾಗೂ ಅಕ್ಕ ಪಕ್ಕದವರೊಂದಿಗೆ ಈ ಯೋಜನೆಯ ಅಡ್ಡ ಪರಿಣಾಮಗಳ ಕುರಿತು ಸಮಾಲೋಚಿಸಿ ಜಾಗೃತರಾಗಿ ಜಾಗೃತಗೊಳಿಸಿ ಎಕೆಂದರೇ ದೇಶ ಅಭಿವೃದ್ದಿ ನಮ್ಮೇಲ್ಲರ ಅಭಿವೃದಿ ಕಳೆದ ೧೦ ವರ್ಷಗಳಲ್ಲಿ ೨೫ ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತವ ಕಾರ್ಯ ಮಾಡಿದೆವೆ ಆದು ಯಾವುದೇ ಪುಕ್ಕಟೆ ಗ್ರಾರಂಟಿಗಳಿಂದ ಅಲ್ಲ ಕೌಶಲ್ಯ ತರಬೇತಿ ನೀಡಿ ಅವರಿಗೆ ಕಂಪನಿಗಳಲ್ಲಿ ನೌಕರಿ ಸಿಗುವಂತೆ ಮಾಡುವ ಮೂಲಕ ಕಾರಣ ಜಾಗೃತ ತಾಯಂದಿರು ಭಾರತ ದೇಶದ ಜನರೇ ನನ್ನ ಕುಟುಂಬ ಎನ್ನುವ ಪ್ರಧಾನಿಮಂತ್ರಿ ನರೇಂದ್ರ ಮೋದಿಯವರೇ ಯುವಜನತೆಯ ಅಭಿವೃದ್ಧಿಯ ಗ್ಯಾರಂಟಿ ಕಾರಣ ಇದು ನಮ್ಮೇಲ್ಲರ ಮಕ್ಕಳ ಭವಿಷ್ಯದ ಚುನಾವಣೆ ಕಮಲದ ಚಿಹ್ನೆಗೆ ಮತ ಹಾಕಿ ೪೦೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ವಿಜಕುಮಾರ ಗಡ್ಡಿ ಮನವಿ ಮಾಡಿದರು.
ಅವರು ನಗರದ ವಾರ್ಡ ನಂಬರ ೮ರಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಮನೆ ಮನೆಗಳಿಗೆ ತೆರಳಿ ಬಿಜೆಪಿ
ಪಕ್ಷದ ಸಾಧನೆಗಳ ಕರಪತ್ರ ವಿತರಿಸಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಕಾಂಗ್ರೆಸನ ನಡೆ ಬಗ್ಗೆ ದೇಶದ ಅಬಿವೃದ್ಧಿಯತ್ತ ಸಾಗದೆ ಕೆವಲ ಒಂದು ಸಮುದಾಯದ ಅಬಿವೃದ್ಧಿಗೆ ಚಿಂತನೆ ನಡೆಸಿರುದು ವಿಷಾದನೀಯ, ಈ ಗ್ಯಾರಂಟಿ ಯೋಜನೆಯ ಸ್ವಲ್ಪ ಹಣದ ಆಸೆಗೆ ಮಕ್ಕಳ ಉಜ್ವಲ ಭವಿಷ್ಯ ಹಾಳಾಗಬಾರದು ಕಾರಣ ಗ್ಯಾರಂಟಿ ಬೇಡಾ ಅಭೀವೃದ್ಧಿ ಬೇಕು ಅಭಿವೃದ್ಧಿಗಾಗಿ ಮತ್ತೋಮ್ಮೆ ಮೋದಿಜೀ ಅವರಿಗೆ ಮತ ನೀಡಿ ಎಂದು ನಗರಸಭೆ ಸದಸ್ಯೆ ಅನಿತಾ ವಿಜಕುಮಾರ ಗಡ್ಡಿ ಮಹಿಳೆಯರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು ರಾಘವೆಂದ್ರ ಯಳವತ್ತಿ, ಪ್ರೇಮಾ ಬಣದ, ಅನಿಲ ಗಡ್ಡಿ, ದಶರಥರಾಜ ಕೊಳ್ಳಿ, ಎಂ.ಜಿ. ಹೊನ್ನಳಿ, ಅನಿಲ ಅಬ್ಬಿಗೇರಿ, ಬಸವರಾಜ ಇಟಗಿ ಅಧ್ಯಕ್ಷರು ಬಿಜೆಪಿ ರೈತ ಮೋರ್ಚಾ, ಆಶೋಕ ಕರೂರ ಕಾರ್ಯದರ್ಶಿ, ಜಿಲ್ಲಾ ವಕ್ತಾರರು ಎಂ.ಎಂ. ಹಿರೇಮಠ, ಆರ್.ಕೆ. ಚನ್ವಾಣ, ವೀರಣ್ಣ ಅಂಗಡಿ, ಪಕ್ಕಿರೇಶ ರಟ್ಟಿಹಳ್ಳಿ, ಮಾದ್ಯಮ ಸಂಚಾಲಕ ರಾಜೇಂದ್ರಪ್ರಸಾದ ಹೊನ್ನಗಲ್, ಕಾನೂನು ಪ್ರಕೋಷ್ಠದ ಜಿಲ್ಲಾ ಸಂಚಾಲಕರು ಕೆ.ಪಿ. ಕೋಟಿಗೌಡರ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಮುಂತಾದವರು ಇದ್ದರು.