ಹುಕ್ಕೇರಿ; ಜನಸಾಮನ್ಯರಿಗೆ ಸುಚಿತ್ವ ಹಾಗೂ ಉಚಿತ ಆರೋಗ್ಯ ಚಿಕಿತ್ಸೆ ಸಿಗುವಂತಾಗಬೇಕು ಎಂಬ ಸರಕಾರದ ಮಹತ್ವಕಾಂಕ್ಷೆ ಆರೋಗ್ಯ ಇಲಾಖೆಯ ಯೋಜನೆ ಜನರೊಂದಿಗೆ ಬೆರೆತು ಪವಿತ್ರವಾದ ಕಾರ್ಯ ಮಾಡುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಂಡೂರಾವ್ ಹೇಳಿದರು.
ಅವರು ಶನಿವಾರ ಶಾಸಕ ನಿಖಿಲ್ ಕತ್ತಿ ಅಧ್ಯಕ್ಷತೆಯಲ್ಲಿ ಜರುಗಿದ ಹುಕ್ಕೇರಿ ತಾಲೂಕಾ ಆಸ್ಪತ್ರೆಯಲ್ಲಿ ಸಿಬ್ಬಂದಿಯವರ ವಸತಿ ಗೃಹಗಳ ಕಟ್ಟಡ ನಿರ್ಮಾಣ, ಸಂಕೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆಚ್ಚುವರಿ ವಾರ್ಡ ಹಾಗೂ ಔಷದ ಉಗ್ರಾಣ ಕಟ್ಟಡ, ಲೋಕಾರ್ಪಣೆ ಹಾಗೂ ಅಮ್ಮಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರ್ಮಾಣ ಮತ್ತು ಆರೋಗ್ಯ ಪ್ರಯೋಗಾಲಯ ಕಾಮಗಾರಿ ಶಂಕು ಸ್ಥಾಪನೆ ಸೇರಿದಂತೆ ವಿವಿಧ ೧೦ ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು, ಹುಕ್ಕೇರಿ ಸರಕಾರಿ ಆಸ್ಪತ್ರೆಯ ಉತ್ತಮ ಕಾರ್ಯನಿರ್ವಹಿಸುತ್ತಾ ಶತಮಾನದ ಸಂಭ್ರಮದಲ್ಲಿರುವದು ಹೆಮ್ಮೆ, ಇಲ್ಲಿಯ ಶಾಸಕರ ಬೇಡಿಕೆಯಂತೆ ೨೪ ಗಂಟೆಗಳ ಕಾರ್ಯ ನಿರ್ವಹಿಸುವ ತಾಯಿ ಮತ್ತು ಮಗು ಆರೈಕೆ ಆಸ್ಪತ್ರೆಯನ್ನುಶೀಘ್ರದಲ್ಲಿ ಮಂಜೂರಾತಿ ನೀಡುವ ಜೊತೆಗೆ ಕಣಗಲಾ, ಹಟ್ಟಿಆಲೂರ, ಹಾಗೂ ಪಾಶ್ಚಾಪುರ ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಅನುಮೋದನೆ ನೀಡುವದಾಗಿ ಹಾಗೂ ತಜ್ಞ ವ್ಯದ್ಯ ಮತ್ತು ಸಿಬ್ಬಂದಿಯವರನ್ನು ನೀಮಿಸುವ ಭರವಸೆ ಭರವಸೆ ನೀಡಿದರು.
ಬಾಕ್ಸ;
ಉತ್ತರ ಕರ್ನಾಟಕದ ಅನ್ಯಾಯ ಬಗ್ಗೆ ಗಟ್ಟಿ ದ್ವನಿ ಹಾಗೂ ನೇರ ನುಡಿಯಿಂದ ವಿಧಾನಸೌದಲ್ಲಿ ೪ ದಶಕಗಳ ಕಾಲ ಜುನ ಪ್ರತಿನಿದಿಯಾಗಿ ಕಾರ್ಯನಿರ್ವಹಿಸಿದ ದಿ. ಉಮೇಶ ಕತ್ತಿ ಅವರ ಕಾರ್ಯ ಸ್ಮರಣಿಯ ಎಂದು ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಅದ್ಯಕ್ಷತೆ ವಹಿಸಿದ್ದ ಶಾಸಕ ನಿಖಿಲ್ ಕತ್ತಿ ಮಾತನಾಡಿ ಹುಕ್ಕೇರಿ ತಾಲೂಕಿನ ಕೈಗಾರಿಕೆ ಪ್ರದೇಶ ರಾಷ್ಟ್ರಿಯ ಹೆದ್ದಾರಿ ಪಕ್ಕದ ಕಣಗಲಾದಲ್ಲಿ ಟ್ರಾಮಾ ಸೆಂಟರ್ ಹಾಗೂ ಉದ್ಯಾನಕಾಶಿ ನಿರ್ಮಾದ ಹಿಡಕಲ್ ಪರಿಸರದಲ್ಲಿ ಸೇರಿದಂತೆ ೫ ಕಡೆ ಅತ್ಯಅವಶ್ಯಕ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಅನೂಮೋದನೆ ನೀಡುವದರ ಜೊತೆ ಹುಕ್ಕೇರಿಯಲ್ಲಿ ತಾಯಿ ಮಗು ಆರೋಗ್ಯ ಕೇಂದ್ರ ಸ್ಥಾಪನೆಗೆ ಮಂಜೂರಾತಿ ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು.
ಸಮಾರಂಭದಲ್ಲಿ ತಹಶಿಲ್ದಾರ ಬಲರಾಮ ಕಟ್ಟಿಮನಿ, ತಾ.ಪಂ ಕಾರ್ಯನಿರ್ವಾಹಕಧಿಕಾರಿ ಟಿ ಆರ್ ಮಲ್ಲಾಡದ. ಜಿಲ್ಲಾ ಆರೋಗ್ಯಧಿಕಾರಿ ಡಾ, ಆಯ್.ಪಿ ಗಡಾದ, ಡಿಎಚ ಓ. ಎಸ್ ಗಡೇದ, ಮುಖ್ಯ ವ್ಯೆದ್ಯಾಧಿಕಾರಿ ಎಮ್ ಎಮ್ ನರಸನ್ನವರ, ದತ್ತಾತ್ರಯ ದೊಡಮನಿ, ಸೀಮಾ ಗುಂಜಾಳ, ಡಿಜಿಡಿ ಪುಷ್ಪಾ, ಎಮ್ ಸಿ ವಿಜಾಪುರೆ, ರಿಯಾಜ ಮಕಾನದಾರ, ಸಂಜಯ ದೊಡಮನಿ, ಅಂಬಲಿ, ಮತ್ತಿತರರು ಉಪಸ್ಥಿತರಿದ್ದರು.
ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್ ಪುರಸಭೆ ಸದಸ್ಯರಾದ ಮಹಾವೀರ ನಿಲಜಗಿ, ರಾಜು ಮುನ್ನೋಳಿ, ಸಂಕೇಶ್ವರ ಪುರಸಭೆ ಉಪಾಧ್ಯಕ್ಷ ಸಚಿನ್ ಬೋಪಳೆ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ತಳವಾರ, ಗ್ಯಾರಂಟಿ ಯೋಜನೆಯ ತಾಲೂಕ ಆಧ್ಯಕ್ಷ ಶಾನೂರ ತಹಶಿಲ್ದಾರ, ಮುಖಂಡರಾದ ಸತ್ಯಪ್ಪಾ ನಾಯಿಕ ಗುರು ಕುಲಕರ್ಣಿ, ಶಿಥಲ ಬ್ಯಾಳಿ, ಚನ್ನಪ್ಪಾ ಗಜಬರ, ಬಸವರಾಜ ಗಂಗಣ್ಣವರ, ನ್ಯಾಯವಾದಿ ರಾಮಚಂದ್ರ ಜೋಶಿ, ರವಿಕರಾಳೆ, ಮುನಿರ ಕಳಾವಂತ, ಕಿರಣಸಿಂಗ ರಜಪೂತ, ನಂದು ಮುಡಸಿ, ಭೀಮಗೌಡ ಅಮ್ಮಣಗಿ, ಸುನೀಲ್ ಪರ್ವತರಾವ್, ಸಂತೋಷ ಮುಡಸಿ, ಮತ್ತಿತರರು ಉಪಸ್ಥಿತರಿದ್ದರು.
ತಾಲೂಕಾ ಆರೋಗ್ಯಧಿಕಾರಿ ಡಾ ಉದಯ ಕುಡಚಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಎಸ್ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಆರೋಗ್ಯಧಿಕಾರಿ ಎಸ್ ಎಸ್ ಗಡೆದ ವಂದಿಸಿದರು.
.