ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು: ಪುರುಷೋತ್ತಮ ಬಿಳಿಮಲೆ

Ravi Talawar
ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು: ಪುರುಷೋತ್ತಮ ಬಿಳಿಮಲೆ
WhatsApp Group Join Now
Telegram Group Join Now

ಮೈಸೂರು, ನವೆಂಬರ್​ 19: ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳಾಗಿದ್ದು, ಅಲ್ಲಿ ಅಂಥ ಅನಿವಾರ್ಯತೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು ಹಾಗೂ ನಾವು ಕೂಗುವ ಕೂಗು ಕೃತಿಗಳನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿರುವ ಆಡಿಯೋವೀಗ ವೈರಲ್​ ಆಗಿದೆ.

ಈಗೆಲ್ಲ ನಿಮಗೆ ಸಿನಿಮಾ ಹೀರೋಯಿನ್​ಗಳು ಕ್ರಶ್​ ಆಗುವ ರೀತಿ, ನಮಗೆಲ್ಲ ಬಾಲ್ಯದಲ್ಲಿ ಯಕ್ಷಗಾನದ ಸ್ತ್ರೀವೇಶಧಾರಿಗಳು ಕ್ರಶ್​ ಆಗಿದ್ದರು. ಅವರು ರಂಗದ ಮೇಲೆ ಕುಣಿದರೆ ಚೆಂದವೋ ಚಂದ, ಅವರ ಮೇಲೆ ನಮಗೆ ಕಣ್ಣು ಇರುತ್ತಿತ್ತು. ಆದರೆ ಅವರ ಮೇಲೆ ಇರುತ್ತಿದ್ದ ಒತ್ತಡ ಬಹಳ. ಕಲಾವಿದ ಕಲಾವಿದರ ನಡುವೆ ಸಂಬಂಧಕ್ಕೆ ಒಪ್ಪದಿದ್ದರೆ ಮುಂದಿನ ವರ್ಷ ಮೇಳ ಸಿಗುವುದಿಲ್ಲ, ಅದು ಅವರ ಬದುಕಿನ ಪ್ರಶ್ನೆ. ಹೀಗಾಗಿ ರಂಗಭೂಮಿ ಎದುರಿನಿಂದ ಕಾಣುವುದಕ್ಕಿಂದ ವಿಭಿನ್ನವಾಗಿದೆ. ವಿದ್ವಾಂಸರು, ಜಾನಪದ ವಿದ್ವಾಂಸರು ಇದನ್ನ ತಿಳಿದು ಅರ್ಥ ಮಾಡಿಕೊಂಡು ಯಾರ ಭಾವನೆಗೆ ನೋವಾಗದಂತೆ ಬರೆದರೆ ಜಾನಪದಕ್ಕೆ ಇನ್ನೊಂದು ಹೊಸ ಆಯಾಮ ಬರುತ್ತೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article