ಚನ್ನಪಟ್ಟಣದ 400ಕ್ಕೂ ಹೆಚ್ಚು ಜೆಡಿಎಸ್ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ!

Ravi Talawar
ಚನ್ನಪಟ್ಟಣದ 400ಕ್ಕೂ ಹೆಚ್ಚು ಜೆಡಿಎಸ್ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ!
WhatsApp Group Join Now
Telegram Group Join Now

ಬೆಂಗಳೂರು,ಏಪ್ರಿಲ್ 12:  ಲೋಕಸಭೆ ಚುನಾವಣೆ ಹೊತ್ತಿನಲ್ಲಿ ರಾಜಕೀಯ ನಾಯಕರ ಪ್ರಚಾರದ ಜೊತೆಗೆ ಪಕ್ಷಾಂತರ ಕೂಡ ಜೋರಾಗಿದೆ. ಕರ್ನಾಟಕ ರಾಜಕೀಯದಲ್ಲಿ ಪ್ರಭಾವಿ ನಾಯಕ ಡಿಸಿಎಂ ಡಿ ಕೆ ಶಿವಕುಮಾರ್ ರಾತ್ರೋರಾತ್ರಿ ಜೆಡಿಎಸ್ ನಾಯಕರಿಗೆ ಬಿಗ್‌ ಶಾಕ್‌ ಕೊಟ್ಟಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಭಾಗ್ಯಗಳ ಘೋಷಣೆಯಿಂದ ಭರ್ಜರಿ ಗೆಲುವು ಕಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಗೆ ಟಕ್ಕರ್ ಕೊಡಲು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಜೆಡಿಎಸ್ ಗೆ ಕನಕಪುರ ಬಂಡೆ ಚನ್ನಪಟ್ಟಣದಲ್ಲಿ ಶಾಕ್ ಕೊಟ್ಟಿದ್ದಾರೆ.

ಸದ್ದಿಲ್ಲದೆ ಕಳೆದ ರಾತ್ರಿ ಚನ್ನಪಟ್ಟಣದ ಜೆಡಿಎಸ್ ನಾಯಕರಾದ ಅಕ್ಕೂರುದೊಡ್ಡಿ ಶಿವಣ್ಣ ಸೇರಿದಂತೆ ಬರೋಬ್ಬರಿ 400 ಕ್ಕೂ ಮುಖಂಡರನ್ನು ಡಿ ಕೆ ಶಿವಕುಮಾರ್ ಕಾಂಗ್ರೆಸ್‌ ಪಕ್ಷಕ್ಕೆ ಬರಮಾಡಿಕೊಂಡಿದ್ದು, ದಳಪತಿಗಳಿ ಬಿಗ್‌ ಶಾಕ್‌ ನೀಡಿದ್ದಾರೆ.

ಪಕ್ಷದ ಶಾಲು, ಧ್ವಜ ನೀಡಿ ಬರಮಾಡಿಕೊಂಡ ಡಿ ಕೆ ಶಿವಕುಮಾರ್: ಕೆಪಿಸಿಸಿ ಕಚೇರಿಯಲ್ಲಿ ಚನ್ನಪಟ್ಟಣದ ಜೆಡಿಎಸ್ ನಾಯಕರಾದ ಅಕ್ಕೂರುದೊಡ್ಡಿ ಶಿವಣ್ಣ ಸೇರಿದಂತೆ ನಾಯಕರು ಹಾಗೂ ಕಾರ್ಯಕರ್ತರನ್ನು ನಿನ್ನೆ ರಾತ್ರಿ ಕಾಂಗ್ರೆಸ್ ಪಕ್ಷಕ್ಕೆ ಡಿ ಕೆ ಶಿವಕುಮಾರ್ ಪಕ್ಷದ ಶಾಲು ಹೊದಿಸಿ, ಧ್ವಜ ನೀಡಿ ಬರಮಾಡಿಕೊಂಡರು.

WhatsApp Group Join Now
Telegram Group Join Now
Share This Article