ಬಳ್ಳಾರಿ. ಸೆ.30: ನವರಾತ್ರಿ ಪ್ರಯುಕ್ತ ಇಂದು ನಗರದ ಕನಕದುರ್ಗಮ್ಮ ದೇವಸ್ಥಾನದಲ್ಲಿ ಇಂದು ದುರ್ಗಾಷ್ಠಮಿ ಪ್ರಯುಕ್ತ ಲಕ್ಷಾಂತರ ಜನ ಭಕ್ತರು ಬಂದು ದೇವಿಯ ದರ್ಶನ ಪಡೆದುಕೊಂಡರು ಎಂದು ದೇವಸ್ಥಾನದ ಇ.ಒ ಹನುಮಂತಪ್ಪ ತಿಳಿಸಿದರು. ಅವರು ಇಂದು ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿ, ಸೆ.22ರಿಂದ ಪ್ರತಿದಿನ ನಿರಂತರವಾಗಿ ಮುಂಜಾನೆ ಮೂರು ಗಂಟೆಯಿAದ ಅಭಿಷೇಕ, ಪೂಜೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಪುರಾಣ ಪಠಣ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ರಾತ್ರಿ ಎಂಟು ಗಂಟೆಯವರೆಗೂ ಭಕ್ತಾಧಿಗಳು ಆಗಮಿಸಿ ದೇವಿಗೆ ವಿವಿಧ ರೀತಿಯ ಪೂಜೆಗಳನ್ನು ನಡೆಸಿ ಕೃಪೆಗೆ ಪಾತ್ರಾಗುರುತ್ತಿದ್ದಾರೆ. ಸಾಮಾನ್ಯ ದರ್ಶನ ಸುಮಾರು ಮೂರರಿಂದ ನಾಲ್ಕು ತಾಸುಗಳಷ್ಟು ಸಮಯ ತೆಗೆದುಕೊಳ್ಳುತ್ತಿದೆ, ಅದೇ ರೀತಿಯಾಗಿ ವಿ.ಐ.ಪಿ ದರ್ಶನ ಪಡೆಯಲು ಸಹ ಅರ್ಧ ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳುತ್ತಿದೆ. ಪ್ರತಿವರ್ಷಕ್ಕಿಂತ ಈ ವರ್ಷ ದೇವಸ್ಥಾನಕ್ಕೆ ಲಕ್ಷೆÆÃಪಾದಿಯಲ್ಲಿ ಭಕ್ತರು ಬಂದು ದೇವಿಯ ದರ್ಶನ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ದೇವಸ್ಥಾನಕ್ಕೆ ಬರುವ ಭಕ್ತರಿಗಾಗಿ ಅನ್ನ ಪ್ರಸಾದ, ನೀರಿನ ವ್ಯವಸ್ಥೆ ಸಮರ್ಪಕವಾಗಿ ಮಾಡಿಕೊಳ್ಳಲಾಗಿದೆ, ಜೊತೆಗೆ ಭದ್ರತೆಗಾಗಿ ಹೋಮಗಾರ್ಡ್ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಿ ಯಾವುದೇ ತೊಂದರೆಯಾಗದAತೆ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಗಿದೆ. ಇಂದಿನಿAದ ನಾಲ್ಕು ದಿನಗಳ ಕಾಲ ಕನಕದುರ್ಗಮ್ಮದೇವಿಗೆ ಬಂಗಾರದ ಆಭರಣಗಳಿಂದ ಅಲಂಕಾರವನ್ನು ಮಾಡಿ ವಿಶೇಷವಾದ ಪೂಜೆಗಳನ್ನು ನಡೆಸಲಾಗುವುದು ಎಂದರು.
ಬಳ್ಳಾರಿ ಮತ್ತು ವಿಜಯವಾಡದ ಕನಕದುರ್ಗಮ್ಮ ದೇವಿಗೆ ವ್ಯತ್ಯಾಸವೆಂದರೆ, ವಿಜಯವಾಡದಲ್ಲಿ ಪ್ರತಿಷ್ಠಾಪಿತ ದುರ್ಗಾ ಮಾತೆಯಿದ್ದರೆ, ಬಳ್ಳಾರಿಯಲ್ಲಿ ಹುತ್ತದಿಂದ ಒಡಮೂಡಿದ ದುರ್ಗಾಮಾತೆ ದೇವಸ್ಥಾನದಲ್ಲಿ ಇರುತ್ತದೆ. ಇದರಿಂದ ಬಳ್ಳಾರಿ ಕನಕದುರ್ಗಮ್ಮದೇವಿಗೆ ವಿಶೇಷತೆಯಿದೆ. ಈ ದೇವಸ್ಥಾನಕ್ಕೆ ಆಂದ್ರಪ್ರದೇಶ ತೆಲಂಗಾಣ ಸೇರಿದಂತೆ ದಕ್ಷಿಣ ಭಾರತ ಮತ್ತು ಮಹರಾಷ್ಟç, ರಾಜಸ್ಥಾನ್, ಗುಜರಾತ್ ಸೆರದಂತೆ ಉತ್ತರ ಭಾರತದಿಂದಲೂ ಸಹ ಭಕ್ತರು ಬಂದು ದರ್ಶನ ಪಡೆದುಕೊಳ್ಳುತ್ತಿದ್ದಾರೆ.
ವಿಜಯದಶಮಿ ಪ್ರಯುಕ್ತ ರಾವಣ ದಹನ ದೊಡ್ಡ ಪಲ್ಲಕ್ಕಿ ಇರುವುದರಿಂದ ಇನ್ನೂ ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಬರುವ ನಿರೀಕ್ಷೆಯಿದೆ ಮುನ್ನೆಚ್ಚೆರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್, ಪ್ರಸಾದ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ಸಮರ್ಪಕ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗುವುದು, ಅದೇ ರೀತಿಯಾಗಿ ಭಕ್ತರು ಯಾವುದೇ ನಿರ್ಧಿಷ್ಠ ಸಮಯದಲ್ಲಿ ಅಂದರೆ ಮುಂಜಾನೆ ಮತ್ತು ಸಂಜೆ ದೇವಸ್ಥಾನಕ್ಕೆ ಬಂದು ಒಂದೇ ಭಾರಿ ಜನಸಂದಣಿ ಮಾಡುವುದಕ್ಕಿಂತ ಮದ್ಯಾಹ್ನದ ಸಮಯದಲ್ಲಿ ಬಂದಲ್ಲಿ ನಿಧಾನ ಮತ್ತು ಪ್ರಶಾಂತ ರೀತಿಯಲ್ಲಿ ದೇವಿಯ ದರ್ಶನಕ್ಕೆ ಅನುಕೂಲವಾಗಲಿದೆ ಎಂದು ಭಕ್ತರಿಗೆ ಮನವಿ ಮಾಡಿದರು.


