ಮೂಡಲಗಿಯ ಸ್ಫೂರ್ತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರೋಗ್ಯ ವಿವಿಧೋದ್ದೇಶ ಕೊಳಕ್ಕೆ ಚಾಲನೆ

Chandrashekar Pattar
ಮೂಡಲಗಿಯ ಸ್ಫೂರ್ತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರೋಗ್ಯ ವಿವಿಧೋದ್ದೇಶ ಕೊಳಕ್ಕೆ ಚಾಲನೆ
oplus_0
WhatsApp Group Join Now
Telegram Group Join Now

ಮೂಡಲಗಿ : ರವಿವಾರದಂದು ಪಟ್ಟಣದ ಭಾಗೋಜಿ ಶಿಕ್ಷಣ ಸಂಸ್ಥೆಯ ಸ್ಫೂರ್ತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರೋಗ್ಯ ವಿವಿಧೋದ್ದೇಶ ಕೊಳವು, ಮೂಡಲಗಿ ಸಿದ್ಧ ಸಂಸ್ಥಾನ ಮಠದ ಶ್ರೀಗಳಾದ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು.

ಈ ಸಂಧರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಶಿಕಾಂತ ಭಾಗೋಜಿ ಮಾತನಾಡಿ ಬಡ ಹಾಗೂ ಪ್ರತಿಭಾವಂತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಮಹದಾಶಯದಿಂದ ಪ್ರಾರಂಭವಾದ ಈ ಶಿಕ್ಷಣ ಸಂಸ್ಥೆಯಲ್ಲಿ, ಇಂದು ನೂರಾರು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸಧೃಢ ಶರೀರದಲ್ಲಿ ಸದೃಢ ಮನಸ್ಸಿರುತ್ತದೆ ಎಂಬಂತೆ, ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ದೈಹಿಕ ಆರೋಗ್ಯಕ್ಕಾಗಿ ಆರೋಗ್ಯ ವಿವಿಧೋದ್ದೇಶ ಕೊಳವು ವಿಧ್ಯುಕ್ತವಾಗಿ ಚಾಲನೆಗೊಂಡಿದೆ, ಸಧ್ಯಕ್ಕೆ ಈಜು ಕೊಳದ ಲಾಭವನ್ನು ನಮ್ಮ ಶಾಲಾ ವಿದ್ಯಾರ್ಥಿಗಳು ಪಡೆಯಲಿದ್ದು, ಕ್ರಮೇಣ ಸಾರ್ವಜನಿಕರಿಗೂ ಅವಕಾಶ ಕಲ್ಪಿಸಲಾಗುವುದು, ಸಧ್ಯದಲ್ಲೇ ಶಾಲಾ ಆವರಣದಲ್ಲಿ ಮಕ್ಕಳಿಗೆಂದೇ ಸ್ಕೇಟಿಂಗ್ ಕೋರ್ಟ್ ಕೂಡ ನಿರ್ಮಾಣವಾಗಲಿದೆ ಎಂದರು.

ಈ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಎಸ್.ಜಿ.ಢವಳೇಶ್ವರ್, ಜಯಾನಂದ ಪಾಟೀಲ್, ನಿಂಗಪ್ಪ ಫಿರೋಜಿ, ಶ್ರೀಧರ್ ಉಡುಪಿ, ಸಂಸ್ಥೆ ಟ್ರಸ್ಟೀಗಳಾದ ಸಂಗೀತಾ ಭಾಗೋಜಿ, ಸ್ಫೂರ್ತಿ ಭಾಗೋಜಿ, ಸೂರಜ್ ಭಾಗೋಜಿ, ಶಾಲಾ ಶಿಕ್ಷಕರಾದ ಯಮನಪ್ಪ ಕೆಳಗೇರಿ ಸೇರಿದಂತೆ ಪಟ್ಟಣದ ಅನೇಕ ಗಣ್ಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article