ಹಮಾಸ್​ನಿಂದ ಒತ್ತೆಯಾಳುಗಳ ಬಿಡುಗಡೆ ಗಾಜಾದಲ್ಲಿ ಶಾಂತಿಗೆ ದಾರಿ: ಟ್ರಂಪ್‌ ನಡೆ ‍ಶ್ಲಾಘಿಸಿದ ಮೋದಿ

Ravi Talawar
ಹಮಾಸ್​ನಿಂದ ಒತ್ತೆಯಾಳುಗಳ ಬಿಡುಗಡೆ ಗಾಜಾದಲ್ಲಿ ಶಾಂತಿಗೆ ದಾರಿ: ಟ್ರಂಪ್‌ ನಡೆ ‍ಶ್ಲಾಘಿಸಿದ ಮೋದಿ
WhatsApp Group Join Now
Telegram Group Join Now

ವದೆಹಲಿ, ಅಕ್ಟೋಬರ್ 09: ಗಾಜಾಗೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ಅವರ ಶಾಂತಿ ಯೋಜನೆಯ ಮೊದಲ ಹಂತದ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಇದನ್ನು ಶಾಂತಿಯುತ ಹೆಜ್ಜೆ ಎಂದು ಬಣ್ಣಿಸಿದ್ದಾರೆ. ಹಮಾಸ್​ನಿಂದ ಒತ್ತೆಯಾಳುಗಳ ಬಿಡುಗಡೆ ಗಾಜಾದಲ್ಲಿ ಶಾಂತಿಗೆ ದಾರಿ ಮಾಡಿಕೊಡಬಹುದು ಎಂಬುದು ನನ್ನ ನಂಬಿಕೆ ಎಂದು ಪೋಸ್ಟ್​ ಮಾಡಿದ್ದಾರೆ.

ಈ ಒಪ್ಪಂದವು ಮೊದಲು ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡುತ್ತದೆ. ಹಮಾಸ್ ಹಿಡಿದಿರುವ ಇಸ್ರೇಲಿ ಒತ್ತೆಯಾಳುಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗುತ್ತದೆ. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ 100 ಕ್ಕೂ ಹೆಚ್ಚು ಒತ್ತೆಯಾಳುಗಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

WhatsApp Group Join Now
Telegram Group Join Now
Share This Article