ಆಪರೇಷನ್ ಸಿಂದೂರ್ ಯಶಸ್ವಿ; ಭಾರತೀಯ ಮೂರ ಸೇನೆಗಳಿಗೆ ಭಾರತೀಯರ ಪರವಾಗಿ ಮೋದಿ ಧನ್ಯವಾದ

Ravi Talawar
ಆಪರೇಷನ್ ಸಿಂದೂರ್ ಯಶಸ್ವಿ; ಭಾರತೀಯ ಮೂರ ಸೇನೆಗಳಿಗೆ ಭಾರತೀಯರ ಪರವಾಗಿ ಮೋದಿ ಧನ್ಯವಾದ
WhatsApp Group Join Now
Telegram Group Join Now

ನವದೆಹಲಿ, (ಮೇ 13) : ಆಪರೇಷನ್ ಸಿಂದೂರ್ ಯಶಸ್ವಿ ಕಾರ್ಯಾಚರಣೆ ಮತ್ತು ಪಾಕಿಸ್ತಾನದ ವಾಯುನೆಲೆಗಳ ಮೇಲೆ ಭಾರತದ ದಾಳಿ ಸೇರಿದಂತೆ ಹಲವು ವಿಷಯಗಳು ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತಾಡಿದರು. ಈ ವಳೆ ಹಲವಾರ ವಿಚಾರಗಳ ಬಗ್ಗೆ ತಿಳಿಸಿದ್ದು, ಅದರಲ್ಲೂ ಮುಖ್ಯವಾಗಿ ಈ ಆಪರೇಷನ್ ಸಿಂದೂರವನ್ನು ದೇಶದ ಹೆಣ್ಣುಮಕ್ಕಳಿಗೆ ಸಮರ್ಪಣೆ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಭಾರತೀಯ ಮೂರು ಸೇನೆಗಳು, ತಂತ್ರಜ್ಞರು ಮತ್ತು ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.

ಡ್ರೋನ್ ಮತ್ತು ಕ್ಷಿಪಣಿ ದಾಳಿಯೂ ಭಯೋತ್ಪಾದಕ ಚಟುವಟಿಕೆ ಎಂದು ಹೇಳಿದರು. ಭಯೋತ್ಪಾದಕ ಪ್ರಧಾನ ಕಚೇರಿಯನ್ನೇ ಭಾರತ ನೆಲಸಮಗೊಳಿಸಿದೆ. ಉಗ್ರರ ವಿದ್ಯಾಲಯಗಳಾಗಿದ್ದ ತಾಣಗಳನ್ನು ಭಾರತ ಉಡೀಸ್ ಮಾಡಿದೆ. ಭಾರತ ಪ್ರತೀಕಾರದಿಂದ ಪಾಕಿಸ್ತಾನ ಕಂಗಾಲು ಆಗಿತ್ತು. ಭಯೋತ್ಪಾದನೆ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು, ಭಾರತದ ಶಾಲಾ ಕಾಲೇಜು, ಮಸೀದಿ, ಗುರುದ್ವಾರ, ಚರ್ಚ್, ನಾಗರೀಕರ ನಿವಾಸಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಪಾಕ್‌ನಿಂದ ಹಾರಿ ಬಂದ ಡ್ರೋನ್‌ಗಳನ್ನು ಆಕಾಶದಲ್ಲಿಯೇ ಭಾರತ ನಾಶ ಮಾಡಿದೆ ಎಂದು ಹೆಮ್ಮೆಯಿಂದ ಹೇಳಿದರು.

ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪಾಕ್ ಸೊಕ್ಕನ್ನು ಅಡಗಿಸಲಾಗಿದೆ. ಭಾರತ ಪ್ರತೀಕಾರಕ್ಕೆ ಬೆಚ್ಚಿದ ಪಾಕಿಸ್ತಾನ ಹಲವು ರಾಷ್ಟ್ರಗಳ ಮುಂದೆ ಹೋಗಿತ್ತು. ಭಾರತದ ಡಿಸಿಎಂಒಗೆ ಕರೆ ಮಾಡುವ ಮುನ್ನವೇ ಪಾಕಿಸ್ತಾನದ ಮೇಲೆ ದಾಳಿ ನಡೆಸಲಾಗಿತ್ತು ಎಂದು ಹೇಳಿದ ಮೋದಿ, ಭಾರತೀಯ ಮೂರು ಸೇನೆಗಳು, ತಂತ್ರಜ್ಞರು ಮತ್ತು ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

WhatsApp Group Join Now
Telegram Group Join Now
Share This Article