ಪುರಿ ಜಗನ್ನಾಥ ದೇವಾಲಯದಲ್ಲಿ ಪೂಜೆ, ಸಂಬಿತ್ ಪಾತ್ರ ಬೆಂಬಲಿಸಿ ಮೋದಿ ರೋಡ್​ ಶೋ

Ravi Talawar
ಪುರಿ ಜಗನ್ನಾಥ ದೇವಾಲಯದಲ್ಲಿ ಪೂಜೆ, ಸಂಬಿತ್ ಪಾತ್ರ ಬೆಂಬಲಿಸಿ ಮೋದಿ ರೋಡ್​ ಶೋ
WhatsApp Group Join Now
Telegram Group Join Now

ಪುರಿ,20: ಲೋಕಸಭೆ ಚುನಾವಣೆಯ ಪ್ರಚಾರ ಬಿರುಸಿನಿಂದ ಸಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ  ಪುರಿಯಲ್ಲಿ ರೋಡ್​ ಶೋ ನಡೆಸಿದರು. ಇಂದು ಬೆಳಗ್ಗೆ ಪುರಿ ಜಗನ್ನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ಬಿಜೆಪಿ ಅಭ್ಯರ್ಥಿ ಸಂಬಿತ್ ಪಾತ್ರ ಅವರ ಪರವಾಗಿ ರೋಡ್​ ಶೋ ನಡೆಸಿದರು.

ಸಂಬಿತ್ ಪಾತ್ರ 2019 ರ ಚುನಾವಣೆಯಲ್ಲಿ ಬಿಜೆಡಿಯ ಪಿನಾಕಿ ಮಿಶ್ರಾ ವಿರುದ್ಧ ಸೋತಿದ್ದರು. ಈ ಬಾರಿ ಅವರು ಕಾಂಗ್ರೆಸ್‌ನ ಜಯ ನಾರಾಯಣ ಪಟ್ನಾಯಕ್ ಮತ್ತು ಬಿಜೆಡಿಯ ಅರೂಪ್ ಪಟ್ನಾಯಕ್ ಅವರ ವಿರುದ್ಧ ಕಣದಲ್ಲಿದ್ದಾರೆ.

ರೋಡ್ ಶೋ ವೇಳೆ ಸಾವಿರಾರು ಜನರು ಪ್ರಧಾನಿ ಮೋದಿ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಪುರಿಯಲ್ಲಿ ಮಹಾಪ್ರಭು ಜಗನ್ನಾಥನನ್ನು ಪ್ರಾರ್ಥಿಸಿದೆ. ಅವರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಮತ್ತು ನಮ್ಮನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿ ಎಂದು ಮೋದಿ ಟ್ವೀಟ್​ ಮಾಡಿದ್ದಾರೆ.

ಪ್ರಧಾನಿ ಸೋಮವಾರ ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಒಂದು ದಿನದ ಭೇಟಿಯಲ್ಲಿದ್ದಾರೆ. ಧೆಂಕನಲ್, ಒಡಿಶಾದ ಕಟಕ್ ಮತ್ತು ಪಶ್ಚಿಮ ಬಂಗಾಳದ ತಮ್ಲುಕ್ ಮತ್ತು ಜಾರ್ಗ್ರಾಮ್ನಲ್ಲಿ ಎರಡು ರ್ಯಾಲಿಗಳನ್ನು ನಡೆಸಲಿದ್ದಾರೆ.

ಇದಕ್ಕೂ ಮುನ್ನ, ಐದನೇ ಹಂತದ ಲೋಕಸಭೆ ಚುನಾವಣೆಗೆ ದಾಖಲೆ ಪ್ರಮಾಣದಲ್ಲಿ ತಮ್ಮ ಹಕ್ಕು ಚಲಾಯಿಸುವಂತೆ ಮತದಾರರಿಗೆ ಪ್ರಧಾನಿ ಮೋದಿ ಮನವಿ ಮಾಡಿದರು. ಅಲ್ಲದೆ ಮಹಿಳೆಯರು ಮತ್ತು ಯುವ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ವಿಶೇಷ ಮನವಿ ಮಾಡಿದರು.

WhatsApp Group Join Now
Telegram Group Join Now
Share This Article