ಮೋದಿ ಪಾಕ್‌ಗೆ ಆಪರೇಷನ್‌ ಸಿಂಧೂರ್‌ ಮೂಲಕ ತಕ್ಕಶಾಸ್ತಿ: ದೊಡ್ಡನಗೌಡ ಪಾಟೀಲ

Ravi Talawar
ಮೋದಿ ಪಾಕ್‌ಗೆ ಆಪರೇಷನ್‌ ಸಿಂಧೂರ್‌ ಮೂಲಕ ತಕ್ಕಶಾಸ್ತಿ: ದೊಡ್ಡನಗೌಡ ಪಾಟೀಲ
WhatsApp Group Join Now
Telegram Group Join Now

ಹುನಗುಂದ; ಮಾಜಿ ಪ್ರದಾನಿ ದಿ. ಮನಮೋಹನ್ ಸಿಂಗ್ ನೇತೃತ್ವದಲ್ಲಿಯ ಕಾಂಗ್ರೆಸ್ ಸರ್ಕಾರ ವೈಫಲ್ಯದಿಂದ ೨೦೧೪ರ ಹಿಂದೆ ಪಾಪಿ ಪಾಕಿಸ್ಥಾನದ ಉಗ್ರರು ಭಾರತ ದೇಶದ ಸಾಕಷ್ಟು ಕಡೆಗಳಲ್ಲಿ ಸರಣಿ ಸ್ಪೋಟ ನಡೆಸಿ ನರಹತ್ಯೆ ಮಾಡಿತ್ತು. ಆದರೆ ಪಾಕಿಸ್ತಾನ ಇತ್ತೀಚೆಗೆ ನಡೆಸಿದ ಪಲ್ವಾಮಾ ದಾಳಿ ಸೇರಿದಂತೆ ಇನ್ನಿತರ ರೀತಿಯಲ್ಲಿ ನಡೆಸಿದ ಭಯೋತ್ಪಾದಕ ಉಗ್ರ ಕೃತ್ಯಕ್ಕೆ ಪ್ರಧಾನಿ ಮೋದಿಜಿಯವರು ತಕ್ಕ ಪಾಠ ಕಲಿಸಿದ್ದಾರೆಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಇಲ್ಲಿನ ನಗರದ ಕಡಪಟ್ಟಿ ಕಾಂಪ್ಲೆಕ್ಸ್‌ನ ಬಿಜೆಪಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತ ಆಪರೇಶಷನ್ ಸಿಂಧೂರ ಮುಖಾಂತರ ನಮ್ಮ ದೇಶದ ಸೈನಿಕರು ಪಾಕಿಸ್ತಾನದ ಜನಸಾಮಾನ್ಯರಿಗೆ ಕಿಂಚಿತ್ತು ತೊಂದರೆಯಾಗದಂತೆ ಉಗ್ರರರ ಕೇಂದ್ರ ನೆಲೆಗಳನ್ನು ಅಡಗಿಸಿ ಪಾಠ ಕಲಿಸಿದ್ದಾರೆ. ಇದರ ಹಿನ್ನೆಲೆಯಾಗಿ ಮೇ.೨೨ರಂದು ಬೆಳಿಗ್ಗೆ ೯-೩೦ಕ್ಕೆ ನಗರದ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಮೈದಾನದಿಂದ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಮತಕ್ಷೇತ್ರದ ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರಜೆಗಳಾದ ನಾವೆಲ್ಲರೂ ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಿರಂಗಾ ಯಾತ್ರೆ ನಡೆಸೋಣ. ದೇಶದ ಸೈನಿಕರನ್ನು ಗೌರವಿಸಿ ನೈತಿಕ ಬೆಂಬಲ ಸೂಚಿಸುವ ಜೊತೆಗೆ ದೇಶದ ಲಾಂಚನವನ್ನು ಹಿಡಿದು ತಿರಂಗಾ ಯಾತ್ರೆಯನ್ನು ನಡೆಸಲಾಗುವದು. ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಎಲ್ಲ ವ್ಯಾಪಾರಸ್ಥರು, ಉದ್ಯೋಗಸ್ಥರು, ವೃತ್ತಿಪರರು ಈ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡು ಂiiಶಸ್ವಿಗೊಳಿಸಬೇಕೆಂದು ಅವರು ತಿಳಿಸಿದರು. ಮಾಜಿ ಸೈನಿಕ ಕಿರಸೂರ ಮಾತನಾಡಿದರು. ಮುಖಂಡರಾದ ಡಾ. ಮಹಾಂತೇಶ ಕಡಪಟ್ಟಿ, ಮಹೇಶ ಬೆಳ್ಳಿಹಾಳ, ಶಾಂ ಕರವಾ, ಅಪ್ಪು ಆಲೂರ, ಮಲ್ಲು ಕುಂಬಾರ, ಪ್ರವೀಣ ಹಳಪೇಟಿ, ರಾಜಕುಮಾರ ಬಾದವಾಡಗಿ, ದುರಗಪ್ಪ ಹಾದಿಮನಿ, ರಾಮನಗೌಡ ಬೆಳ್ಳಿಹಾಳ, ಕೆಂಚಪ್ಪ ಮಾದರ ಮತ್ತು ಮಲ್ಲು ಚೂರಿ ಇದ್ದರು.
.

WhatsApp Group Join Now
Telegram Group Join Now
Share This Article