ಪೆಟ್ರೋಲ್, ರಸಗೊಬ್ಬರಗಳ ಬೆಲೆ ವಿಪರೀತ ಏರಿಕೆ : ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿರುವ ಮೋದಿ ಸರ್ಕಾರ – ರಕ್ಷಾ ರಾಮಯ್ಯ

Hasiru Kranti
ಪೆಟ್ರೋಲ್, ರಸಗೊಬ್ಬರಗಳ ಬೆಲೆ ವಿಪರೀತ ಏರಿಕೆ : ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿರುವ ಮೋದಿ ಸರ್ಕಾರ – ರಕ್ಷಾ ರಾಮಯ್ಯ
WhatsApp Group Join Now
Telegram Group Join Now

ದೊಡ್ಡಬಳ್ಳಾಪುರ, ಏ, 17; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಂದು ದೊಡ್ಡಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ನಡೆಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಮತ್ತು ಮಾಜಿ ಶಾಸಕರಾದ ವೆಂಕಟರಮಣಯ್ಯ, ಅನುಸೂಯಮ್ಮ, ಮಾಜಿ ಸಚಿವರಾದ ಬಿ.ಟಿ. ಲಲಿತಾ ನಾಯಕ್ ಅವರ ಸಾರಥ್ಯದಲ್ಲಿ ಪ್ರಚಾರ ಕೈಗೊಂಡರು.
ದೊಡ್ಡ ಬಳ್ಳಾಪುರದ ಕನಸವಾಡಿ ಬಳಿಯ ಚಿಕ್ಕ ಮದುರೆ, ದೊಡ್ಡ ಬೆಳವಂಗಲ, ಸಾಸಲು ಹೊಬಳಿ, ಕೊನಘಟ್ಟ, ಬಾಶೆಟ್ಟಹಳ್ಳಿ, ದಾರ್ಗ ಜೋಗಿ ಹಳ್ಳಿ ಮತ್ತಿತರೆ ಭಾಗಗಳಲ್ಲಿ ಬಿರುಸಿನಿಂದ ಪ್ರಚಾರದಲ್ಲಿ ನಿರತರಾದರು.
ಮತದಾರರ ಜೊತೆ ಸಂವಾದ ನಡೆಸುತ್ತಾ, ಯಾವುದು ಸರಿ?. ಯಾವುದು ತಪ್ಪು? ಎಂಬ ಬಗ್ಗೆ ಪ್ರಶ್ನೆ ಕೇಳಿ ಉತ್ತರ ಪಡೆಯುತ್ತಾ ಪ್ರಚಾರ ಭಾಷಣ ಮಾಡಿದರು. ಕಾಂಗ್ರೆಸ್ ಸರ್ಕಾರದಿಂದ ಮಹಿಳೆಯರು, ಯುವ ಜನರಿಗೆ ಆಗುತ್ತಿರುವ ಲಾಭ, ಬಡವರ ಬೆಂಬಲಕ್ಕೆ ನಿಂತಿರುವ ಗ್ಯಾರೆಂಟಿ ಯೋಜನೆಗಳ ಪ್ರಯೋಜನಗಳ ಬಗ್ಗೆ ಪ್ರಶ್ನಿಸುತ್ತಾ ಮತದಾರರ ಮನ ಗೆಲ್ಲುವ ಪ್ರಯತ್ನ ನಡೆಸಿದರು. ಇಡೀ ದಿನ ವಿಭಿನ್ನವಾಗಿ ಪ್ರಚಾರ ಮಾಡುವ ಮೂಲಕ ರಕ್ಷಾ ರಾಮಯ್ಯ ಗಮನ ಸೆಳೆದರು.


ಕೇಂದ್ರದಲ್ಲಿ ರೈತ ವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೆಸೆದು, ರೈತರ ಪರ ಇರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ಏಪ್ರಿಲ್ 26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕ್ರಮ ಸಂಖ್ಯೆ 3, ಹಸ್ತದ ಗುರುತಿಗೆ ಮತ ನೀಡಿ, ನನಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.
ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ ಭರವಸೆಗಳು ಸಾಕಾರಗೊಂಡಿವೆ. ಬಡವರ ಬದುಕು ಹಸನಾಗುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಸಹಸ್ರಾರು ಶಾಲೆಗಳು, ಅಂಗನವಾಡಿ ಶಾಲೆಗಳನ್ನು ಕಟ್ಟಿದ್ದೇವೆ. ಆದರೆ ಬಿಜೆಪಿ ಜನ ಸಾಮಾನ್ಯರ ಮೇಲೆ ಬೆಲೆ ಏರಿಕೆ ಮೂಲಕ ಪ್ರಹಾರ ಮಾಡುತ್ತಿದೆ. ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದ್ದು, ರಸಗೊಬ್ಬರದ ದರ ನಾಗಾಲೋಟದಲ್ಲಿ ಹೆಚ್ಚಳವಾಗುತ್ತಿದೆ. ಮೋದಿ ಸರ್ಕಾರ ಬಡಜನರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಬಡವರು, ಮಹಿಳೆಯರು, ರೈತರ ಪರವಾಗಿ ಕೆಲಸ ಮಾಡುತ್ತೇವೆ. ರೈತರ ಹಿತ ರಕ್ಷಣೆಯೇ ನಮ್ಮ ಪರಮ ಗುರಿ. ರೈತರ ಸಾಲ ಮನ್ನಾ ಮಾಡುತ್ತೇವೆ. ರೈತರ ಹೊಟ್ಟೆ ಮೇಲೆ ಒಡೆಯುವುದನ್ನು ತಪ್ಪಿಸುತ್ತೇವೆ. ರೈತರು ಮತ್ತು ಮಹಿಳೆಯರ ಪರ ಇರುವ ಸರ್ಕಾರ ಎಂದರೆ ಕಾಂಗ್ರೆಸ್ ಮಾತ್ರ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಸ್ತ್ರೀಯರ ಬಗ್ಗೆ ಗೌರವವಿದೆ. ಹೆಣ್ಣು ಮಕ್ಕಳು ಲಕ್ಷ್ಮೀ, ಸರಸ್ವತಿಯ ಸ್ವರೂಪವಾಗಿದ್ದು, ಮಹಿಳಾ ಕುಲದ ರಕ್ಷಣೆಗೆ ಕಟಿ ಬದ್ಧವಾಗಿದ್ದೇವೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ 8 ಸಾವಿರ ರೂ, ರಾಜ್ಯದಿಂದ 2 ಸಾವಿರ ರೂ ನೀಡಲಾಗುವುದು. ಮಕ್ಕಳನ್ನು ಓದಿಸುವಂತಹ ತಾಯಂದಿರನ್ನು ನಾವು ಗೌರವಿಸಿ, ರಕ್ಷಿಸುತ್ತೇವೆ. ಜೀವನೋಪಾಯಕ್ಕಾಗಿ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.
ಕಾಂಗ್ರೆಸ್ ಯುವ ಸಮೂಹದ ಪರವಾಗಿ ಕಾಳಜಿ ಇರುವ ಸರ್ಕಾರವಾಗಿದೆ. ಯುವ ಜನಾಂಗದ ಬದುಕಿಗೆ ಆಸರೆಯಾಗಬೇಕಾಗಿದ್ದ ದೊಡ್ಡ ದೊಡ್ಡ ಸರ್ಕಾರಿ ಸ್ವಾಮ್ಯದ ಕಂಪೆನಿಗಳನ್ನು ಬಿಜೆಪಿ ಸರ್ಕಾರದಲ್ಲಿ ಮುಚ್ಚಲಾಗುತ್ತಿದೆ. ದೇಶದ ಹಿರಿಯ ನಾಯಕರು ಕಟ್ಟಿ ಬೆಳೆಸಿದ ಕಂಪೆನಿಗಳನ್ನು ಮಾರಾಟ ಮಾಡುತ್ತಿದ್ದು, ಯುವ ಜನರನ್ನು ವಂಚಿಸುತ್ತಿದೆ. ಯುವ ಜನಾಂಗ ನಮ್ಮ ದೇಶದ ಶಕ್ತಿ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಗ್ಯಾರೆಂಟಿಗಳನ್ನು ರದ್ದುಪಡಿಸುವ ಜೊತೆಗೆ ಸಂವಿಧಾನ ಬದಲಿಸಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈ ಬಲಪಡಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

WhatsApp Group Join Now
Telegram Group Join Now
Share This Article