ಹಾಸನದಲ್ಲಿಯ ಗಣೇಶ ಮೆರವಣಿಗೆ ದುರಂತಕ್ಕೆ ಮೋದಿ ಸಂತಾಪ; ಮೃತರ ಕುಟುಂಬಕ್ಕೆ ಪರಿಹಾರ

Ravi Talawar
ಹಾಸನದಲ್ಲಿಯ ಗಣೇಶ ಮೆರವಣಿಗೆ ದುರಂತಕ್ಕೆ ಮೋದಿ ಸಂತಾಪ; ಮೃತರ ಕುಟುಂಬಕ್ಕೆ ಪರಿಹಾರ
WhatsApp Group Join Now
Telegram Group Join Now

ಹಾಸನ, ಸೆಪ್ಟೆಂಬರ್​ 13: ಹಾಸನ ತಾಲೂಕಿನ ಮೊಸಳೆಹೊಸಳ್ಳಿ ಬಳಿ ಗಣಪತಿ ಮೆರವಣಿಗೆ ವೇಳೆ ಟ್ರಕ್ ಹರಿದು ವಿದ್ಯಾರ್ಥಿಗಳು ಸೇರಿ 9 ಜನರು ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಸೇರಿದಂತೆ ಹಲವರು ಆಘಾತ ವ್ಯಕ್ತಪಡಿಸಿದ್ದು, ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ  ಕೂಡ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಜೊತೆಗೆ ಎರಡು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಈ ಕುರಿತಾಗಿ ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಹಾಸನದಲ್ಲಿ ನಡೆದ ದುರಂತ ಇದೊಂದು ಹೃದಯವಿದ್ರಾವಕ ಘಟನೆ. ದುಃಖಗೊಂಡಿರುವ ಕುಟುಂಬಗಳಲ್ಲಿ ನಾನು ಭಾಗಿಯಾಗಿದ್ದೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

WhatsApp Group Join Now
Telegram Group Join Now
Share This Article