ಡಾ. ರಾಜ್​ಕುಮಾರ್ ​ಕುರಿತು ಅವಹೇಳನ; ವಿನೋದ ಶೆಟ್ಟಿ ಅರೆಸ್ಟ್‌

Ravi Talawar
ಡಾ. ರಾಜ್​ಕುಮಾರ್ ​ಕುರಿತು ಅವಹೇಳನ; ವಿನೋದ ಶೆಟ್ಟಿ ಅರೆಸ್ಟ್‌
WhatsApp Group Join Now
Telegram Group Join Now

ಬೆಂಗಳೂರು, ಸೆಪ್ಟೆಂಬರ್​ 15: ವರನಟ ಡಾ. ರಾಜ್​ಕುಮಾರ್  ಹಾಗೂ ಅವರ ಕುಟುಂಬದವರ ಬಗ್ಗೆ ಇತ್ತೀಚೆಗೆ ಅವಹೇಳನಕಾರಿ ಹೇಳಿಕೆ ನೀಡಿ ವಿಡಿಯೋ ಹರಿಬಿಟ್ಟಿದ್ದ ವಿನೋದ್ ಶೆಟ್ಟಿ ಎಂಬುವವರು ಇದೀಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ . ಜಾಲತಾಣದಲ್ಲಿ ಹೆಸರಾಗುತ್ತೆ ಅಂತಾ ವಿನೋದ್ ಶೆಟ್ಟಿ ನಾಲಗೆ ಹರಿಬಿಟ್ಟಿದ್ದರು ಎನ್ನಲಾಗಿದೆ.

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ತೆರವು ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ವಾರ್​ ಕೂಡ ನಡೆದಿತ್ತು. ಇದೇ ವಿಚಾರವಾಗಿ ವಿನೋದ್ ಶೆಟ್ಟಿ, ವಿಡಿಯೋ ಒಂದನ್ನು ಮಾಡುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವರ ವಿಡಿಯೋಗೆ ಅಣ್ಣಾವ್ರ ಅಭಿಮಾನಿಗಳು ಕೆಟ್ಟದಾಗಿ ಮಾತನಾಡಿದ್ದರು ಎನ್ನಲಾಗಿದೆ.

 

WhatsApp Group Join Now
Telegram Group Join Now
Share This Article