ಸರ್ವಧರ್ಮ ಸಮನ್ವಯದ ಸಂಕೇತ: ಎಂಎಲ್ ಸಿ ಇದ್ರಿಸ್ ನಾಯಿಕವಾಡಿ ಅವರಿಗೆ ಅಥಣಿ ಗಚ್ಚಿನ ಮಠ ಹಾಗೂ ಬೆಳ್ಳಂಕಿ ಶ್ರೀಗಳಿಂದ ಸತ್ಕಾರ*

Pratibha Boi
ಸರ್ವಧರ್ಮ ಸಮನ್ವಯದ ಸಂಕೇತ: ಎಂಎಲ್ ಸಿ ಇದ್ರಿಸ್ ನಾಯಿಕವಾಡಿ ಅವರಿಗೆ ಅಥಣಿ ಗಚ್ಚಿನ ಮಠ ಹಾಗೂ ಬೆಳ್ಳಂಕಿ ಶ್ರೀಗಳಿಂದ ಸತ್ಕಾರ*
WhatsApp Group Join Now
Telegram Group Join Now
ಅಥಣಿ/ಮೀರಜ : ಪಕ್ಕದ ಗಡಿಭಾಗದ ಮಹಾರಾಷ್ಟ್ರದ ಮೀರಜನಲ್ಲಿ ರಾಜಕೀಯ ಎಂದರೆ ಕೇವಲ ಅಧಿಕಾರಕ್ಕಷ್ಟೇ ಸೀಮಿತವಾಗಿರದೆ ಸಮಾಜಸೇವೆ ಮತ್ತು ಭಾವೈಕ್ಯತೆ ಹಾಗೂ ಸೌಹಾರ್ದತೆಯ ವೇದಿಕೆಯಾಗಬೇಕು ಎಂಬುದಕ್ಕೆ ಮೀರಜ್‌ನಲ್ಲಿ ನಡೆದ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.
 ಇತ್ತೀಚೆಗೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮೀರಜ್ ತಾಲೂಕಿನ ವಿಧಾನ ಪರಿಷತ್ ಸದಸ್ಯರಾದ ಇದ್ರಿಸ್ ನಾಯಿಕವಾಡಿ ಹಾಗೂ ಅವರ ಪುತ್ರ, ಮಹಾನಗರ ಪಾಲಿಕೆ ನೂತನ ಸದಸ್ಯ ಅಥರ್ ನಾಯಕವಾಡಿ ಅವರ ನಿವಾಸಕ್ಕೆ ಅಥಣಿ ಗಚ್ಚಿನ ಮಠದ ಪ.ಪೂ. ಶ್ರೀ ಶಿವಬಸವ ಸ್ವಾಮೀಜಿ ಹಾಗೂ ಬೆಳ್ಳಂಕಿಯ ಶಿವಾಚಾರ್ಯ ಸ್ವಾಮೀಜಿ ಅವರು ಭೇಟಿ ನೀಡಿ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಸನ್ಮಾನಿಸಿ ಆಶೀರ್ವದಿಸಿದರು.
ಸತ್ಕಾರದ ವೇಳೆ ಮಾತನಾಡಿದ ಶ್ರೀ ಶಿವಬಸವ ಸ್ವಾಮೀಜಿಗಳು, “ಇದ್ರಿಸ್ ನಾಯಿಕವಾಡಿ ಕುಟುಂಬವು ಜಾತಿ-ಮತದ ಭೇದವಿಲ್ಲದೆ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುವ ಇವರ ಗುಣ ಶ್ಲಾಘನೀಯ. ಇವರ ಜನಸೇವೆಯು ಇನ್ನು ಎತ್ತರಕ್ಕೆ ಬೆಳೆಯಲಿ,” ಎಂದು ಹಾರೈಸಿದರು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಮಹಾರಾಷ್ಟ್ರ ವಿಧಾನ ಪರಿಷತ್ ಸದಸ ಇದ್ರಿಸ್ ನಾಯಕವಾಡಿ ಅವರು ನಾನು ಸಮಾಜ ಸೇವೆಯ ಮೂಲಕ ರಾಜಕೀಯಕ್ಕೆ ಬಂದವನು. ಅಂದಿನಿಂದ ಇಂದಿನವರೆಗೆ ಪ್ರತಿಯೊಂದು ಸಮುದಾಯದ ಜನರು ಜಾತ್ಯಾತೀತವಾಗಿ ನನ್ನನ್ನು ಬೆಂಬಲಿಸಿದ್ದಾರೆ. ಯಾವುದೇ ಭೇದಭಾವ ಮಾಡದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದೇ ನನ್ನ ಗುರಿ. ಜನರ ಈ ಪ್ರೀತಿಯ ಋಣವನ್ನು ತೀರಿಸಲು ನನ್ನ ಜೀವನದುದ್ದಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಜೊತೆ ನಿಂತಿರುವ ಪ್ರತಿಯೊಬ್ಬ ಕಾರ್ಯಕರ್ತನೂ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂಬುದು ನನ್ನ ಆಶಯ.”
ನಂತರ ಬೆಳ್ಳಂಕಿ ಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಪಕ್ಷದ ಭೇದ ಮರೆತು ಹಲವು ಮುಖಂಡರು ಭಾಗವಹಿಸಿದ್ದು ವಿಶೇಷವಾಗಿತ್ತು. ರಾಷ್ಟ್ರವಾದಿ ಪಾರ್ಟಿಯ ಅಥರ್ ಇದ್ರಿಸ್ ನಾಯಕವಾಡಿ, ಪ್ರಮುಖರಾದ ರೇಖಾ ವಿವೇಕ್ ಕಾಂಬಳೆ, ಅಶ್ವಿನಿ ವಿನೋದ್ ಕೋಳಿ, ಶ್ವೇತಪದ್ಮ ವಿವೇಕ ಕಾಂಬಳೆ, ಸೇರಿದಂತೆ ಕಾಂಗ್ರೆಸ್‌ನ ಸಂಜಯ್ ನಾಯಕು ಮೆಂಡೆ, ಬಬಿತಾ ಮೆಂಡೆ, ಬಿಜೆಪಿಯ ಗಣೇಶ ಮಾಳಿ, ಈಶ್ವರ ಜನವಾಡೆ ಉಪಸ್ಥಿತರಿದ್ದರು.
ಜೊತೆಗೆ ರಾಮೊಗೊಂಡ ಕೇಸರಖಾನೆ, ನಿಶಾಕಾಂತ ಪಾಟೀಲ್, ಸಚಿನ ಕೆರಿಪಾಳೆ, ಪ್ರದೀಪ ಕೆರಿಪಾಳೆ, ಶ್ರೀಕಾಂತ ಪವಾರ, ಅಥಣಿ ಪುರಸಭೆ ಸದಸ್ಯ ರಿಯಾಜ್ ಸನದಿ, ಪುರಸಭೆ ಸದಸ್ಯ ಪ್ರಮೋದ ಬೀಳ್ಳೂರ, ನಾವಿದ ಖಾಜಿ, ಇರ್ಷಾದ ಮನಗೂಳಿ, ಅಬ್ದುಲ ಅಜೀಜ್ ಮುಲ್ಲಾ, ಶಮ್ಮು ಕರೋಲಿ, ವಿನಾಯಕ ಬಾಗಡೆ, ಹಾಗೂ ನಗರ ಪಾಲಿಕೆಯ ಅನೇಕ ಸದಸ್ಯರು ಮತ್ತು ಸ್ಥಳೀಯರು ಭಾಗವಹಿಸಿ ಭಾವೈಕ್ಯತೆಯ ಸಂದೇಶ ಸಾರಿದರು.
WhatsApp Group Join Now
Telegram Group Join Now
Share This Article