ಬೆಳಗಾವಿ : ಬಾಳೇಕುಂದ್ರಿ ಕೆ.ಎಚ್ ಗ್ರಾಮದ ಸದಾಶಿವ ಕಾಲೋನಿಯಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿ ಅನುದಾನದ ವತಿಯಿಂದ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಈ ವೇಳೆ ಗ್ರಾಮದ ಹಿರಿಯರು, ನೀಲೇಶ್ ಚಂದಗಡ್ಕರ್, ಕಲ್ಲಪ್ಪ ರಾಮಚಣ್ಣವರ, ಪ್ರವೀಣ ಮುರಾರಿ, ಪವನ್ ಜಾಧವ, ಚಂದ್ರಕಾಂತ್ ಧರೆನ್ನವರ, ರಾಕೇಶ್ ಬುರುಡ, ಆಶಾ ತೊಳೆ, ದುಂಡಪ್ಪ ಪೂಜೇರಿ, ಅಶ್ವಿನಿ ಅಷ್ಟಗಿ, ರೇಣುಕಾ ಪೂಜೇರಿ, ಶೈಲಾ ತಿಪ್ಪಣ್ಣವರ್ ಮೊದಲಾದವರು ಉಪಸ್ಥಿತರಿದ್ದರು.