ಇಂಡಿ ಪಟ್ಟಣದ ಗುರುಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿದರು.

Abushama Hawaldar
ಇಂಡಿ  ಪಟ್ಟಣದ  ಗುರುಭವನದಲ್ಲಿ  ನಡೆದ  ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿದರು.
WhatsApp Group Join Now
Telegram Group Join Now

ಇಂಡಿ : ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪೂರಕ ನೈತಿಕ ಮೌಲ್ಯಗಳನ್ನು ಮುಗ್ಧ ಮಕ್ಕಳ ಮನದಲ್ಲಿ ಅಕ್ಷರವ ಬಿತ್ತಿ, ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ ಸುಂದರ ನಾಡನ್ನು ಕಟ್ಟುವ ಶಿಲ್ಪಿಗಳು ಶಿಕ್ಷಕರು ಎಂದು ಗುರುದೇವ ಆಶ್ರಮ ಕಾತ್ರಾಳದ ಪರಮಪೂಜ್ಯ ಡಾ. ಅಮೃತಾನಂದ ಶ್ರೀಗಳು ಹೇಳಿದರು.
ಪಟ್ಟಣದ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿಯ ಗುರುಭವನದಲ್ಲಿ ಜಿ.ಪಂ ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಇಂಡಿ ಇವರ ಸಹಯೋಗದಲ್ಲಿ ನಡೆದ ಭಾರತ ರತ್ನ ಡಾ. ಎಸ್. ರಾಧಾ ಕೃಷ್ಣನ್ ರವರ ಜನ್ಮ ದಿನೋತ್ಸವದ ಅಂಗವಾಗಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಆಯುಧ ವೆಂದರೆ ಶಿಕ್ಷಣ. ಇಂತಹ ಪವಿತ್ರ ಶಿಕ್ಷಣ ವೃತ್ತಿಯಿಂದ ಬಂದ ವಿಶಿಷ್ಠ ವ್ಯಕ್ತಿತ್ವದ ಶಿಕ್ಷಕರು ಭಾರತದ ಪುರಾತನ ಪರಂಪರೆಯ ಹಿರಿಮೆ ಗರಿಮೆಗಳನ್ನು ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ಜಗತ್ತಿಗೆ ವಿಶ್ಲೇಷಿಸಿ ಸಾರಬೇಕಾಗಿದೆ ಎಂದರು.

ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ ಇಂಡಿ ತಾಲೂಕಿನ ಜನತೆ ಅಥರ್ಗಾದ ರೇವಣಸಿದ್ದರನ್ನು ಮತ್ತು ನಿಂಬಾಳದ ರಾನಡೆ ಮಹಾರಾಜರನ್ನು ದೇವರೆಂದು ಪೂಜಿಸುವ ಸಂಸ್ಕೃತಿ ನಮ್ಮದು. ಶಿಕ್ಷಕ,ಗುರು ಬರಿದಾಗದ ಅಕ್ಷಯಪಾತ್ರೆ. ವಿದ್ಯಾರ್ಥಿಗಳನ್ನು ಉನ್ನತ ಸ್ಥಾನಕ್ಕೆ ಮಾಡಹೊರಟಿರುವ ಅಪರೂಪದ ರೂವಾರಿ,ಇಡೀ ಸಮುದಾಯವೇ ಈ ಕಾರಣಕ್ಕೆ ಶಿಕ್ಷಕರನ್ನು ಗೌರವಿಸುತ್ತದೆ ಎಂದರು.

ಕಂದಾಯ ಉಪ ವಿಬಾಗಾಧಿಕಾರಿ ಅಬೀದ ಗದ್ಯಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ, ಕ್ಷೇತ್ರ ಸಮನ್ವಯ ಅಧಿಕಾರಿ ಎಸ್.ಆರ್.ನಡುಗಡ್ಡಿ , ಪ್ರಕಾಶ ನಾಯಕ, ಆನಂದ ಹುಣಸಗಿ, ಬಸವರಾಜ ಗೊರನಾಳ ಮಾತನಾಡಿದರು.
ವೇದಿಕೆಯ ಮೇಲೆ ಸಿದ್ದರಾಮೇಶ್ವರ ಪಟ್ಟದದೇವರು, ಬಸವಾನಂದ ಶ್ರೀಗಳು, ತಹಸೀಲ್ದಾರ ಬಿ.ಎಸ್.ಕಡಲಬಾವಿ,ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಶ್ರೀಮತಿ ಎಲ್.ಸಿ.ಗಿರಣಿವಡ್ಡರ, ಅಲ್ಲಾಬಕ್ಷ ವಾಲಿಕಾರ,ಎ.ಓ.ಹೂಗಾರ, ಸುಜಾತಾಪೂಜಾರಿ,ಎಸ್.ಡಿ.ಪಾಟೀಲ, ಎಸ್.ಆರ್. ಪಾಟೀಲ,ವಾಯ್.ಟಿ.ಪಾಟೀಲ,ನಿಜಣ್ಣಾ ಕಾಳೆ,ಎಂ.ಎಚ್.ಬ್ಯಾಳಿ,ಪಿ.ಬಿ.ಕಲ್ಮನಿ, ಆರ್.ವಿ.ಪಾಟೀಲ, ಶಂಕರ ಕೋಳೆಕರ,ಜಾವೇದ ಮೋಮಿನ್, ಭೀಮಣ್ಣ ಕವಲಗಿ ಮತ್ತಿತರಿದ್ದರು.

WhatsApp Group Join Now
Telegram Group Join Now
Share This Article