ಕ್ಷೇತ್ರದ ಗ್ರಾಮಗಳಿಗೆ ಶಾಸಕ ನಿಖಿಲ್ ಕತ್ತಿ ಭೇಟಿ; ವಿವಿಧ ಕಾಮಗಾರಿಗೆ ಭೂಮಿ ಪೂಜೆ

Ravi Talawar
ಕ್ಷೇತ್ರದ ಗ್ರಾಮಗಳಿಗೆ ಶಾಸಕ ನಿಖಿಲ್ ಕತ್ತಿ ಭೇಟಿ; ವಿವಿಧ ಕಾಮಗಾರಿಗೆ ಭೂಮಿ ಪೂಜೆ
WhatsApp Group Join Now
Telegram Group Join Now

ಹುಕ್ಕೇರಿ : ಶಾಲೆಗಳು ಮೂಲಭೂತ ಸೌಲಭ್ಯಗಳನ್ನು ಹೊಂದಿ ಮಕ್ಕಳಲ್ಲಿ ಕಲಿಕೆಯ ಪೂರಕ ವಾತವರಣದಿಂದ ಉತ್ತಮ ಶಿಕ್ಷಣ ಸಾಧ್ಯವೆಂದು ಶಾಸಕ ನಿಖಿಲ್ ಕತ್ತಿ ಹೇಳಿದರು.

ಅವರು ಗುರುವಾರ ಹುಕ್ಕೇರಿ ಪಟ್ಟಣದ ಉರ್ದು ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡ ವಿವಿಧ ಸರಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳಿಗಾಗಿ ೪೧ ಲಕ್ಷ ರೂ ರೂ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು. ಶಾಲೆಗಳ ಅಭಿವೃದ್ದಿಗಾಗಿ s ಶಾಲಾ ಸಮಿತಿಯವರು, ಸಾರ್ವಜನಿಕರು ಕೈಜೋಡಿಸಿದಾಗ ಮಕ್ಕಳಲ್ಲಿ ಗುಣಮಟ್ಟ ಹೆಚ್ಚಾಗುತ್ತದೆ ಎಂದರು.

ಪಟ್ಟಣದ ಶಾಲೆಗಳಿಗೆ ಗಣಕಯಂತ್ರಗಳನ್ನು ನೀಡಬೇಕು ಎಂದು ಶಾಲಾ ಸಮಿತಿಯವರು ಶಾಸಕರಿಗೆ ಮನವಿ ಸಲ್ಲಿಸಿದರು.

ಶಾಸಕರು ಇದಕ್ಕ ಮುನ್ನ ಕ್ಷೇತ್ರದ ಬಡಕುಂದ್ರಿ, ಯರಗಟ್ಟಿ, ಯರನಾಳ, ಮದಮಕ್ಕನಾಳ, ಗೌಡವಾಡ, ಬಸ್ತವಾಡ, ಮದಿಹಳ್ಳಿ, ಬೆಣ್ಣಿವಾಡ, ಸುಲ್ತಾನಪೂರ, ನೋಗನಿಹಾಳ, ಅವರಗೋಳ ವಿವಿಧ ಗ್ರಾಮಗಳ ಸಾರ್ವಜನಿಕ ಸಂಪರ್ಕ ಸಭೆಗಳನ್ನು ಅಧಿಕಾರಿಗಳೊಂದಿಗೆ ನಡೆಸಿ ಕುಂದುಕೊರೆತೆಗಳನ್ನು ಆಲಿಸಿ ಪರಿಹಾರಕ್ಕಾಗಿ ಸೂಚಿಸಿದರು. ಹಲವು ಬೇಡಿಕೆಗಳ ಇಡೇರಿಕೆಗಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದರು
ಯರನಾಳ ಗ್ರಾಮದ ಹತ್ತಿರ ಹಿರಣ್ಯಕೇಶಿ ನದಿಗೆ ನಿರ್ಮಿಸುತ್ತಿರುವ ಶ್ರೀ ಅಡವಿಸಿದ್ದೇಶ್ವರ ಯಾತನೀರಾವರಿ ಜಾಕ್ವೆಲ್ ಕಾಮಗಾರಿ ವಿಕ್ಷಣೆ ಮಾಡಿ ಸಂಪೂರ್ಣ ಕಾಮಗಾರಿ ಪೂರ್ತಿಗೊಳಿಸಿ ಶೀಘ್ರದಲ್ಲಿ ಲೋಕಾರ್ಪಣೆಗೊಳಲಿ ಎಂದು ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ತಿಳಿಸಿದರು.

ವಿದ್ಯುತ್ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ಪಿಎಲ್ ಡಿ ಬ್ಯಾಂಕಿನ ಪರಗೌಡ ಪಾಟೀಲ ಪುರಸಭೆ ಸದಸ್ಯ ರಾಜು ಮುನ್ನೋಳಿ, ಮಾಜಿ ಉಪಾಧ್ಯಕ್ಷ ಶಹಜಾನ ಬಡಗಾವಿ, ಲಖಮಗೌಡ ಪಾಟೀಲ ಆನಂದ ಲಕ್ಕುಂಡಿ, ಬಸವರಾಜ ಗಂಗನ್ನವರ, ಶಾಲಾ ಸಮಿತಿ ಮಹ್ಮದ ರಫಿಕ್ ಮುಜಾವರ, ರಮಜಾನ ಮುಜಾವರ, ಹೈದರಲಿ ಮೋಮಿನ್ ಮುಸ್ತಾಕ್‌ಅಲಿ ಮಕಾನದಾರ, ಪೀರಜಾದೆ ಹೈದರಲಿ ಮಕಾನದಾರ, ಶಂಕರ ತಿಪ್ಪನಾಯಕ, ಮತ್ತಿತರರರು ಉಪಸ್ತಿತರಿದ್ದರು.

ತಾಲೂಕಾ ಅಧಿಕಾರಿಗಳಾದ ತಹಶಿಲ್ದಾರ ಮಂಜುಳಾ ನಾಯಕ, ಇಓ ಟಿ.ಆರ ಮಲ್ಲಾಡದ, ಬಿಈಓ ಪ್ರಭಾವತಿ ಪಾಟೀಲ, ರಾಜಶೇಖರ ಪಾಟೀಲ, ಶಶಿಕಾಂತ ವಂದಾಳೆ ನೌಕರ ಸಂಘದ ಅಧ್ಯಕ್ಷ ಅವಿನಾಶ ಹೊಳೆಪ್ಪಗೋಳ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪೋಟೋ ಶಿರ್ಷಿಕೆ ೯-ಹುಕ್ಕೇರಿ೦೧.

WhatsApp Group Join Now
Telegram Group Join Now
Share This Article