ಹಳೆ ಕೋರ್ಟ್ ಬಳಿ ಫುಡ್ ಕೋರ್ಟ್ ಗೆ ಚಿಂತನೆ: ಸ್ಥಳ ಪರಿಶೀಲಿಸಿದ ಶಾಸಕ ನಾರಾ ಭರತ್ ರೆಡ್ಡಿ 

Ravi Talawar
ಹಳೆ ಕೋರ್ಟ್ ಬಳಿ ಫುಡ್ ಕೋರ್ಟ್ ಗೆ ಚಿಂತನೆ: ಸ್ಥಳ ಪರಿಶೀಲಿಸಿದ ಶಾಸಕ ನಾರಾ ಭರತ್ ರೆಡ್ಡಿ 
WhatsApp Group Join Now
Telegram Group Join Now
ಬಳ್ಳಾರಿ   ಜೂ.12.  ನಗರದ ಇಂದಿರಾ ವೃತ್ತ (ಸಂಗಂ ಸರ್ಕಲ್) ಸುತ್ತ ಮುತ್ತ ಹಾಗೂ ಮುನಿಸಿಪಲ್ ಕಾಲೇಜು ಕಂಪೌಂಡಿಗೆ ಅಂಟಿಕೊಂಡು ಇರುವ ವಿವಿಧ ಆಹಾರ ಖಾದ್ಯದ ಸಣ್ಣ ಸಣ್ಣ ಅಂಗಡಿಗಳನ್ನು ಹಳೆಯ ಕೋರ್ಟ್ ಎದುರು ಇರುವ (ಮಯೂರ ಹೊಟೇಲ್ ಗೆ ಹೋಗುವ ಒಳ ದಾರಿ) ದಾರಿಯಲ್ಲಿ ಸ್ಥಳಾಂತರಿಸುವ ಮೂಲಕ ನೂತನ ಫುಡ್ ಕೋರ್ಟ್ ಆರಂಭಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಅವರು ಸಂಜೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಎಸ್ಎನ್ ಪೇಟೆ ಸರ್ಕಲ್ ನಿಂದ ಇಂದಿರಾ ಸರ್ಕಲ್ ಗೆ ಸಂಪರ್ಕ ಕಲ್ಪಿಸುವ ದ್ವಿಪಥ ರಸ್ತೆಯ ಎರಡೂ ಬದಿ ಇರುವ ಅಂಗಡಿಗಳನ್ನು ಶೀಘ್ರ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದ್ದಾರೆ.
ಹಳೆಯ ಕೋರ್ಟ್ ಎದುರಿನ ಓಣಿಯಲ್ಲಿ ಕನಿಷ್ಟ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ವ್ಯಾಪಾರಸ್ಥರಿಗೆ ಅನುಕೂಲ ಮಾಡಿ ಕೊಡಲಾಗುವುದು ಎಂದಿರುವ ಅವರು, ಮುನಿಸಿಪಲ್ ಕಾಲೇಜು ಮೈದಾನದಲ್ಲಿ ರಾಜ್ಯಮಟ್ಟದ ಜಿಮ್ ನಿರ್ಮಾಣ ಆಗಲಿದೆ, ಅಲ್ಲದೇ ಸದ್ಯ ಅಲ್ಲಿ ಅಂಗಡಿಕಾರರಿಗೇ ಸಾಕಷ್ಟು ಅನಾನುಕೂಲಗಳು ಇದ್ದು, ಕನಿಷ್ಟ ಯಾವುದೇ ಸೌರಭ್ಯಗಳಿಲ್ಲ, ಪ್ರಸ್ತಾಪಿತ ಜಾಗದಲ್ಲಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿ ಕೊಡಲಾಗುವುದು ಇದರಿಂದ ಗ್ರಾಹಕರಿಗೂ, ಸಾಮಾನ್ಯ ಜನರಿಗೂ ಹಾಗೂ ವ್ಯಾಪಾರಸ್ಥರಿಗೂ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.
 ಸದರಿ ಸ್ಥಳಗಳಿಗೆ ಭೇಟಿ ನೀಡಿದ ಅವರು, ಕೈಗೊಳ್ಳಬೇಕಾಗಿರವ ಕಾಮಗಾರಿಗಳ ಬಗ್ಗೆ ಗುತ್ತಿಗೆದಾರರಿಗೆ, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ವೃತ್ತ ನವೀಕರಣ
ಇದೇ ಸಂದರ್ಭ ನಗರದ ವಾಲ್ಮೀಕಿ ವೃತ್ತಕ್ಕೂ ಭೇಟಿ ನೀಡಿದ ಅವರು, ಸರ್ಕಲ್ ನವೀಕರಣ, ಒತ್ತುವರಿ ತೆರವು, ರಸ್ತೆ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು.
ಕಳೆದ ಒಂದೂವರೆ ದಶಕದ ಹಿಂದೆ ವಾಲ್ಮೀಕಿ ವೃತ್ತವನ್ನು ಅಭಿವೃದ್ಧಿಪಡಿಸಿದ್ದು ಸದ್ಯ ಕೆಲವು ಕಡೆಗಳಲ್ಲಿ ರಿಪೇರಿ ಕಾರ್ಯ ಅಗತ್ಯ ಇದೆಯಲ್ಲದೇ ವೃತ್ತವನ್ನು ಮರು ನವೀಕರಣ ಮಾಡುವ ಮೂಲಕ ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದ್ದಾರೆ.
ವಾಲ್ಮೀಕಿ ವೃತ್ತದ ಮರು ನವೀಕರಣಕ್ಕಾಗಿ ಒಂದೂವರೆ ಕೋಟಿ ರೂ.ಗಳು ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಅದೇ ರೀತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಅಂದಾಜು 5 ಕೋಟಿ ರೂ.ಗಳ ವೆಚ್ಚದಲ್ಲಿ ಉದ್ಯಾನ ವನವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
 ಈ ಸಂದರ್ಭದಲ್ಲಿ  ಕಾಂಗ್ರೆಸ್ ಮುಖಂಡ ಮಹಾನಗರ ಪಾಲಿಕೆ ಸದಸ್ಯರಾದ ಮಿಂಚು ಶ್ರೀನಿವಾಸ್  ಪಿ.ಜಗನ್ನಾಥ್, ಉದ್ಯಮಿ ನಾರಾ ಶರತ್ ರೆಡ್ಡಿ, ಗುತ್ತಿಗೆದಾರರಾದ ಉಮೇಶ್ ರೆಡ್ಡಿ, ಟಿಲ್ಲು ಮೊದಲಾದವರು ಹಾಜರಿದ್ದರು.
WhatsApp Group Join Now
Telegram Group Join Now
Share This Article