ಬಳ್ಳಾರಿ, ಮಾ.11: ಪ್ರಸಕ್ತ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ 409ನೇ ರ್ಯಾಂಕ್ ಗಳಿಸಿ ಸಾಧನೆಗೈದ ನಗರದ ಸಿ.ಯಶ್ವಂತಕುಮಾರ್ ಅವರನ್ನು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮಂಗಳವಾರ ಸನ್ಮಾನಿಸಿ, ಅಭಿನಂದಿಸಿದರು.
ಪರೀಕ್ಷೆಯಲ್ಲಿ ಸಾಧನೆಗೈದಿರುವಂತೆ ಭಾರತೀಯ ಆಡಳಿತ ಸೇವೆಯಲ್ಲಿ ನಿಮಗೆ ಉತ್ತಮ ಹುದ್ದೆ ಸಿಗಲಿ, ನಿಮ್ಮಿಂದ ಜನರಿಗೆ ಹಾಗೂ ದೇಶಕ್ಕೆ ಒಳಿತಾಗಲಿ ಎಂದು ಹಾರೈಸಿದರು.
ಈ ಸಂದರ್ಭ ಸಿ.ಯಶ್ವಂತಕುಮಾರ್ ಅವರ ತಂದೆ ತಾಯಿಯವರಿಗೂ ಶಾಸಕರು ಅಭಿನಂದಿಸಿದರು. ಪರಶುರಾಮುಡು, ಸಿದ್ಧೇಶ್ ಮೊದಲಾದವರು ಹಾಜರಿದ್ದರು.


