ಬಳ್ಳಾರಿ, ಸೆ.09: ಬಳ್ಳಾರಿಯ ಇನ್’ಫ್ಯಾಂಟ್ರಿ ರಸ್ತೆಯ ದಯಾ ಕೇಂದ್ರದ ಬಳಿಯಿರುವ ಶ್ರೀ ಕರಿಮಾರೆಮ್ಮ ದೇವಸ್ಥಾನಕ್ಕೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು 60 ಸಾವಿರ ರೂ.ಗಳನ್ನು ವೈಯಕ್ತಿಕವಾಗಿ ದೇಣಿಗೆ ನೀಡಿದ್ದಾರೆ.
ಸದರಿ ಮೊತ್ತವನ್ನು ಮಂಗಳವಾರ ಮಧ್ಯಾಹ್ನ ದೇವಸ್ಥಾನದ ಅರ್ಚಕರಿಗೆ ನೀಡಲಾಯಿತು. ಶಾಸಕ ನಾರಾ ಭರತ್ ರೆಡ್ಡಿಯವರ ಆಪ್ತರು, ಕಾಂಗ್ರೆಸ್ ಮುಖಂಡರು ಈ ಮೊತ್ತವನ್ನು ಶಾಸಕರ ಪರವಾಗಿ ಹಸ್ತಾಂತರಿಸಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ನಾಗಲಕೆರೆ ಗೋವಿಂದ,ಉಮಾಪತಿ, ಬೆಣಕಲ್ ರಘು, ಪಿ.ರವಿ ಸೇರಿದಂತೆ ಹಲವರು ಹಾಜರಿದ್ದರು.