ಬಳ್ಳಾರಿ,ಆ.16ಈಗಿನ ಮಕ್ಕಳಿಗೆ ಬಿಡುವಿನ ವೇಳೆಯಲ್ಲಿ ಭಗವದ್ಗೀತೆಯ ಶ್ರೀಕೃಷ್ಣನ ವಿಚಾರಧಾರೆಗಳನ್ನು ಬೋಧಿಸಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಬಿಡಿಎಎ ಫುಟ್‌ಬಾಲ್ ಮೈದಾನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಕೃಷ್ಣ ಮಹಾಪುರುಷ. ಲೋಕ ಕಲ್ಯಾಣಕ್ಕಾಗಿ ಹಾಗೂ ಮಾನವೀಯ ಧರ್ಮದ ಉಳಿವಿಗಾಗಿ ಹಲವಾರು ಸಂದೇಶಗಳನ್ನು ನೀಡಿದ್ದಾನೆ. ಪೋಷಕರು ಶಾಲೆಯ ಬಿಡುವಿನ ನಂತರದಲ್ಲಿ ಭಗವದ್ಗೀತೆ ಮತ್ತು ಮಹಾಭಾರತದಲ್ಲಿನ ವಿಚಾರಧಾರೆಗಳನ್ನು ಮಕ್ಕಳಿಗೆ ತಿಳಿಸಿದಾಗ ಜಯಂತಿ ಆಚರಣೆಗೆ ಸಾರ್ಥಕ ರೂಪು ಪಡೆಯುವುದಲ್ಲದೇ, ಮುಂದಿನ ಪೀಳಿಗೆಗೆ ಸನ್ಮಾರ್ಗವಾಗುತ್ತದೆ ಎಂದರು.
ನಮ್ಮ ರಾಜ್ಯ ಸರ್ಕಾರವು ಪ್ರತಿ ಸಮುದಾಯವನ್ನು ಗುರುತಿಸಿ, ಅವರ ಸಾಮಾಜಿಕ, ಶೈಕ್ಷಣಿಕವಾಗಿ ಮುನ್ನೆಲೆಗೆ ತರುವ ಕೆಲಸ ಮಾಡುತ್ತಿದೆ. ಬಳ್ಳಾರಿ ನಗರದಲ್ಲಿ ಗೊಲ್ಲರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ 25 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದರು.
ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಮಾತನಾಡಿ, ಶ್ರೀಕೃಷ್ಣನು ಆದರ್ಶ ಪುರುಷ, ವಿಷ್ಣುವಿನ ಅವತಾರ ಪಡೆದಿದ್ದನು. ಶ್ರೀಕೃಷ್ಣನ ಜನ್ಮಾಷ್ಟಮಿ ದಿನವನ್ನು ದೇಶದೆಲ್ಲೆಡೆಯು ವಿಜೃಂಭಣೆಯಿAದ ಆಚರಿಸುತ್ತಾರೆ. ಇದನ್ನು ಮನಗಂಡ ನಮ್ಮ ರಾಜ್ಯ ಸರ್ಕಾರವು ಸಹ ಆಚರಿಸಲು ಅನುವು ಮಾಡಿಕೊಟ್ಟಿತು ಎಂದರು.
ದೇಶದಲ್ಲಿ ಕ್ರೆöÊಸ್ತರಿಗೆ ಬೈಬಲ್, ಮುಸ್ಮಿಂ ರಿಗೆ ಖುರಾನ್ ನಂತೆ ಹಿಂದೂಗಳಿಗೆ ಭಗವದ್ಗೀತೆಯು ಒಂದು. ಭೂಮಿಯ ಮೇಲೆ ಅಧರ್ಮ ನೆಲೆಸಿದಾಗ ಶ್ರೀಕೃಷ್ಣನು ಮತ್ತೆ ಹುಟ್ಟಿ ಬರುತ್ತಾನೆ ಎಂಬ ಸಂದೇಶವಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಮಾತನಾಡಿ, ಶ್ರೀಕೃಷ್ಣನ ಜಯಂತಿಯನ್ನು ದೇಶದಲ್ಲಿ ಜಾತಿ ಮೀರಿ ಆಚರಿಸುತ್ತಾರೆ. ಆ ದಿನ ಮಕ್ಕಳ ಕೃಷ್ಣ-ರಾಧೆಯ ವೇಶ ನೋಡುವುದೇ ಒಂದು ಅದ್ಭುತ ಎಂದು ಸಂತಸ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಸಿದ್ಧರಾಮ ಕಲ್ಮಠ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಶ್ರೀಕೃಷ್ಣನು ಧರ್ಮ ಪಾಲನೆಯ ಬಗ್ಗೆ ತಿಳಿಸಿದ ಮಹಾನ್ ದಾರ್ಶನಿಕ ವ್ಯಕ್ತಿ. ಭಗವದ್ಗೀತೆಯ ಮೂಲಕ ಧರ್ಮ ಮಾರ್ಗದ ಮೂಲಕ ಹೇಗೆ ಬದುಕಬೇಕು ಎಂಬುದನ್ನು ತಿಳಿಸಿದವರು. ಶ್ರೀಕೃಷ್ಣನ ತತ್ವಗಳು ಇಂದಿಗೂ ಪ್ರಸ್ತುತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಮಹಾನಗರ ಪಾಲಿಕೆಯ ಸಭಾ ನಾಯಕರು ಹಾಗೂ ಜಿಲ್ಲಾ ಗೊಲ್ಲರ ಸಂಘ ಅಧ್ಯಕ್ಷ ಪಿ.ಗಾದೆಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಪಾಲಿಕೆ ಸದಸ್ಯರಾದ ಹೊನ್ನುರಪ್ಪ, ಝಬ್ಬರ್ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ವೈ.ಬಸವರಾಜ ತಂಡದಿAದ ಸಮೂಹ ನೃತ್ಯ ಪ್ರದರ್ಶಿಸಿದರು.
*ಅದ್ದೂರಿ ಮೆರವಣಿಗೆ:*
ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ಡೊಳ್ಳು ವಾದ್ಯ, ತಾಷೆ ರಾಂಡೋಲ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ನೀಡಿದವು.
ಮೆರವಣಿಗೆಯು ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ಆವರಣದಿಂದ ಆರಂಭಗೊAಡು ಗಡಿಗಿ ಚನ್ನಪ್ಪ ವೃತ್ತದ ಮೂಲಕ ಬಿಡಿಎಎ ಫುಟ್‌ಬಾಲ್ ಮೈದಾನ ಸಭಾಂಗಣದವರೆಗೆ ಸಾಗಿಬಂದಿತು.
ಬಳ್ಳಾರಿಯಲ್ಲಿ ಅದ್ದೂರಿ ಶ್ರೀ ಕೃಷ್ಣನ ಜಯಂತ್ಯೋತ್ಸವ ಮಕ್ಕಳಿಗೆ ಶ್ರೀಕೃಷ್ಣನ ವಿಚಾರಧಾರೆಗಳನ್ನು ಬೋಧಿಸಬೇಕು: ಶಾಸಕ ನಾರಾ ಭರತ್ ರೆಡ್ಡಿ
