ಅಥಣಿ: ಹನುಮ ಮಾಲಾ ಸೇವಾ ಸಮಿತಿ, ಅಥಣಿ ಇವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಪವಮಾನ ಹೋಮದ ದಿವ್ಯ ದರ್ಶನವನ್ನು ಇಂದು ಮಾನ್ಯ ಶಾಸಕ ಲಕ್ಷ್ಮಣ ಸವದಿ ಅವರು ಪಡೆದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಲಾಧಾರಿಗಳ ಸೇವೆಯನ್ನು ಶ್ಲಾಘಿಸಿದರು.
ಕಳೆದ ನಾಲ್ಕು ವರ್ಷಗಳಿಂದಲೂ ಅಥಣಿ ತಾಲೂಕಿನ ನಮ್ಮ ಹನುಮ ಮಾಲಾಧಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಪುಣ್ಯಯಾತ್ರೆ ಕೈಗೊಳ್ಳಲು ಉಚಿತ ಬಸ್ ಸೇವೆಯನ್ನು ಒದಗಿಸುವುದು ನನಗೆ ಅತೀವ ಸಂತೋಷ ತಂದಿದೆ. ಭಗವಂತನ ಸೇವೆ ಮತ್ತು ಸಮಾಜ ಸೇವೆಯನ್ನು ಸಮಾನವಾಗಿ ಕಾಣುವ ಈ ಮಾಲಾಧಾರಿಗಳ ಶ್ರದ್ಧೆ ನಿಜಕ್ಕೂ ಅನುಕರಣೀಯ. ಪ್ರತಿ ವರ್ಷವೂ ಈ ಸೇವೆಯನ್ನು ಮುಂದುವರೆಸಲು ನನ್ನ ಹಾಗೂ ಮತಕ್ಷೇತ್ರದ ಜನರ ಮೇಲೆ ಆಂಜನೇಯನ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸುತ್ತೇನೆ.”
ಈ ವೇಳೆ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ ಅಭಿಮಾನಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶಾಸಕ ಲಕ್ಷ್ಮಣ ಸವದಿ ಅವರು ಹನುಮ ಮಾಲಾಧಾರಿಗಳು ಅಂಜನಾದ್ರಿ ಬೆಟ್ಟಕ್ಕೆ ಹೋಗಿ ಬರಲು ಉಚಿತ ಬಸ್ ಸೇವೆಯನ್ನು ಒದಗಿಸಿದ್ದಾರೆ. ಸತತ ನಾಲ್ಕು ವರ್ಷಗಳಿಂದ ಅವರು ಈ ಮಹತ್ವದ ಸೇವೆಯನ್ನು ಮುಂದುವರೆಸಿಕೊಂಡು ಬಂದಿರುವುದು ಹೆಮ್ಮೆ ಪಡುವಂತದ್ದು ಹನುಮ ಮಾಲಾಧಾರಿಗಳ ಪರವಾಗಿ ನಾನು ಶಾಸಕ ಲಕ್ಷ್ಮಣ ಸವದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ಹನುಮಂತನ ಆಶೀರ್ವಾದ ಶಾಸಕ ಲಕ್ಷ್ಮಣ ಸವದಿ ಅವರ ಮೇಲೆ ಇರಲಿ ಹಾಗೂ ಅವರಿಗೆ ಆದಷ್ಟು ಸಚಿವ ಸ್ಥಾನ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಧಾರ್ಮಿಕ ಕಾರ್ಯಕ್ರಮ ಮತ್ತು ಸೇವಾ ಚಟುವಟಿಕೆಯಲ್ಲಿ ಸಮಿತಿ ಸದಸ್ಯರು ಮತ್ತು ನೂರಾರು ಹನುಮ ಮಾಲಾಧಾರಿಗಳು ಉಪಸ್ಥಿತರಿದ್ದರು.


