3.35 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಲಕ್ಷ್ಮಣ ಸವದಿ

Pratibha Boi
3.35 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಲಕ್ಷ್ಮಣ ಸವದಿ
WhatsApp Group Join Now
Telegram Group Join Now
ಅಥಣಿ: ಪಟ್ಟಣದಿಂದ ಜತ್ತ-ಜಾಂಬೋಟಿ ರಸ್ತೆಗೆ ಅಥಣಿ ಸಂಕೋನಟ್ಟಿ ಗ್ರಾಮದ ಮಧ್ಯೆ ಹಾಗೂ ದರೂರ, ಹಲ್ಯಾಳ, ಅಥಣಿ ಪಟ್ಟಣದ ಮಹಾತ್ಮಾ ಜ್ಯೋತಿಬಾ ಫುಲೆ ವೃತ್ತದಲ್ಲಿ ರಸ್ತೆ ಅಗಲೀಕರಣ ಹಾಗೂ ಡಿವೈಡರ್‌, ಸೈನ್‌ ಬೋರ್ಡ್‌ ಅಳವಡಿಕೆ (ಪ್ರಾಮಸಿ ವರ್ಕ್ಸ್)‌ ಕಾಮಗಾರಿ ಸೇರಿದಂತೆ ಒಟ್ಟು 3.35 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಥಣಿ ಪಟ್ಟಣದ ವಿವಿಧ ಪ್ರಮುಖ ರಸ್ತೆಗಳಲ್ಲಿ ಈಗಾಗಲೇ ಡಿವೈಡರ್‌ ನಿರ್ಮಿಸಿ, ಅಲ್ಲಿ ಗಿಡ ಮರಗಳನ್ನು ಬೆಳೆಸಿ, ವಿದ್ಯುತ್‌ ದೀಪಗಳನ್ನು ಅಳವಡಿಸಿ ಅಥಣಿ ನಗರವನ್ನು ಸುಂದರವಾಗಿ ಹಸಿರೀಕರಣಗೊಳಿಸುವ ಕಾರ್ಯ ನಡೆದಿದೆ. ಅದರಂತೆ ಇನ್ನುಳಿದ  ಪದ್ರೇಶಗಳಲ್ಲಿ ಹಂತ ಹಂತವಾಗಿ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಹಲ್ಯಾಳ ವೃತ್ತದಿಂದ ಸಂಕೋನಟ್ಟಿ ಗ್ರಾಮದ ಮಾರ್ಗ ಮಧ್ಯದ ವರೆಗೆ ಈಗಾಗಲೇ ರಸ್ತೆ ಅಗಲೀಕರಣಗೊಳಿಸಿ ಡಿವೈಡರ್‌ ನಿರ್ಮಾಣ ಮಾಡಲಾಗಿದೆ. ರಾಜ್ಯ ಹೆದ್ದಾರಿಗಳಲ್ಲಿ ಅಪಘಾತವಾಗಬಹುದಾದ ಸ್ಥಳಗಳನ್ನು ಪೋಲಿಸ್ ಇಲಾಖೆಯ ಮೂಲಕ ಗುರುತಿಸಿ ಆ ಸ್ಥಳಗಳಲ್ಲಿ ಅಗಲೀಕರಣ, ಒಟ್ಟು 3.35 ಕೋಟಿ ರೂ. ವೆಚ್ಚದಲ್ಲಿ ಇನ್ನುಳಿದ ರಸ್ತೆಯನ್ನು ಅಗಲೀಕರಣಗೊಳಿಸಿ ಅಭಿವೃದ್ಧಿ ಮಾಡಲಾಗುವುದು. ಇದಕ್ಕೆ ರಸ್ತೆ ಅಕ್ಕಪಕ್ಕದಲ್ಲಿನ ಜನತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಗುತ್ತಿಗೆದಾರರು ಕಾಮಗಾರಿಯನ್ನು ಗುಣಮಟ್ಟದಾಗಿ ಮಾಡಬೇಕು. ಸರ್ಕಾರದ ಯೋಜನೆಗಳು, ಅನುದಾನದ ಸದುಪಯೋಗವಾಗಬೇಕು. ಅಥಣಿ ನಗರವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಾಜು ಗುಡೋಡಗಿ, ಮಲ್ಲು ಹುದ್ದಾರ ವಿಲೀನರಾಜ ಯಳಮಲ್ಲೆ, ನರಸು ಬಡಕಂಬಿ, ಬಿ. ಎನ್.‌ ಪಾಟೀಲ, ಉದಯ ಸೊಳಸಿ, ಮುಸ್ತಾಕ್‌ ಮುಲ್ಲಾ, ಗುತ್ತಿಗೆದಾರ ಎಸ್. ಆರ್. ಘೂಳಪ್ಪನವರ, ಮುಖಂಡರಾದ ಶ್ರೀಶೈಲ ನಾಯಿಕ, ರವಿ ಬಡಕಂಬಿ, ಆಸೀಫ್ ತಾಂಬೋಳಿ, ಭೀರಪ್ಪಾ ಯಕ್ಕಂಚಿ, ಆನಂದ ಮಾಕಾಣಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಗದುಮ್ಮ, ಅಭಿಯಂತರ ಪಿ. ಜಿ ಸೂರ್ಯವಂಶಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article