ವಿಜಯನಗರ : ಆರ್ಥಿಕಸ್ಥಿತಿಗತಿ ಸರಿಪಡಿಸದೆ ಜಾತಿ ಗಣತಿ ಸರಿಯಾಗುವುದಿಲ್ಲ ಎಂದು ಸಂವಿದಾನ ಶಿಲ್ಪಿ ಬಾಬಾ ಅಂಬೇಡ್ಕರ್ ೧೯೫೮ ರಲ್ಲೇ ಹೇಳಿದ್ದರು. ಈಗ ನಡೆಸುತ್ತಿರುವ ಜಾತಿಗಣತಿ ಮುಂದೆ ಎಲ್ಲದಕ್ಕೂ ಅನುಕೂಲವಾಗಲಿದೆ,ದೇಶದ ಸ್ವಾತಂತ್ರದ ಎಪ್ಪತೈದು ವರ್ಷಗಳ ನಂತರ ಅಂತಹ ಹೆಜ್ಜೆಯನ್ನು ನಮ್ಮ ಮುಖ್ಯ ಮಂತ್ರಿಗಳು ಇರಿಸಿದ್ದಾರೆ ಎಂಬುದು ನಮಗೆಹೆಮ್ಮೆಯ ಸಂಗತಿ ಎಂದು ವಿಜಯನಗರ ಶಾಸಕ ಹೆಚ್.ಆರ್.ಗವಿಯಪ್ಪ ಹೇಳಿದರು.
ನಗರದ ಸಾಯಿಲೀಲಾ ರಂಗಮಂದಿರದಲ್ಲಿ ಕೈರಳಿ ಅಸೋಶಿಯೇಶನ್ ರವರ ಬೆಳ್ಳಿ ಹಬ್ಬದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ , ಜ್ಯೋತಿ ಬೆಳಗಿಸಿ ಮಾತನಾಡಿದರು.ದೇವರ ನಾಡಿನಿಂದ ಬಂದ ನೀವೆಲ್ಲರೂ ಇಲ್ಲಿ ಎಲ್ಲರೊಡನೆ ಒಂದಾಗಿ ಜೀವಿಸುತ್ತೀದ್ದೀರಿ, ನಿಮ್ಮ ನಾಡಿನವರೆನ್ನಲಾದ ಇಂದನ ಸಚಿವ ಕೆ,ಜೆ,ಜಾರ್ಜ ನಮ್ಮ ಸರ್ಕಾರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ, ಕೇರಳಿಗ ಅನ್ನುವುದೊಂದು ಇಲ್ಲ ದಿದ್ದರೆ, ಅವರು ಈಗಾಗಲೇ ಕರ್ನಾಟಕದ ಮುಖ್ಯ ಮಂತ್ರಿ ಯಾಗುತ್ತಿದ್ದರು. ಆದರೂ ಅಷ್ಟೇ ಶ್ರಮವಹಿಸಿ ಇಂದು ಕೆಲಸ ಮಾಡುತ್ತಿದ್ದಾರೆ. ಅವರಿಂದಾಗಿ ವಿಜಯನಗರಕ್ಕೆ ೨೨೦ ಮೆ.ವಾ ನ ಸಾರ್ಮಥ್ಯದ ಉತ್ಪಾದನಾ ಸಾಮರ್ಥ್ಯದ ರೂ ೨೫೦ ಕೋಟಿ ಯೋಜನೆ ಯೊಂದು ವಿಜಯನಗರಕ್ಕೆ ಬರಲಿದೆ, ಅದು ಅತೀ ಶೀಘ್ರದಲ್ಲಿ ಸಚಿವರಿಂದಲೇ ಉದ್ಘಾಟನೆ ಯಾಗಲಿದೆ ಎಂಬ ವಿಷಯ ತಿಳಿಸಿದರು.
ಇದೆ ಸಂದರ್ಭದಲ್ಲಿ ಅವರು ತಮ್ಮ ಬಾಲ್ಯದ ಜೀವನ ಹೆಚ್ಚಾಗಿ ಕೇರಳದ ಸ್ನೇಹಿತರ ಜೊತೆ ಕಳೆದಿದ್ದಾಗಿ ನೆನಪಿಸಿ ಕೊಂಡರು..ಬಳ್ಳಾರಿಯ ಸೇಂಟ್ ಜಾನ್ ಶಾಲೆಯ ಮುಖ್ಯಸ್ಥರಾz ರೆ.ಫಾ.ಪ್ರಾನ್ಸಿಸ್ ಬಾಶ್ಯ್ಮ್ ಮಾತನಾಡಿ ೨೫ ವರ್ಷಗಳನ್ನು ಆಚರಿಸುತ್ತಿರವುದು ಹೆಮ್ಮೆಯ ವಿಷಯ ಆದರೆ ಒಂದು ಸಂಘಟನೆಯನ್ನು ಇಷ್ಟು ಸುದೀರ್ಘ ಕಾಲ ಹಿಡಿತದಲ್ಲಿಟ್ಟು ಕೊಂಡು ನಡೆಸುವುದು ಕಠಿಣ ವಾದದ್ದು.ಎಂದು ಹೇಳುತ್ತ ಇದನ್ನು ಅದ್ಯಕ್ಷ ಮತ್ತಾಯ್ ಅವರು ನಡೆಸಿಕೊಂಡು ಬರುತ್ತಿರುವುದಕ್ಕೆ ಅವರನ್ನು ಅಭಿನಂದಿಸಿದರು.
ಇದೇ ಸಂಧರ್ಭದಲ್ಲಿ ಪರಿಸರ ಹಸಿರಾಗಲು ಪ್ರತಿಯೊಬ್ಬರೂ ತಮ್ಮ ಮನೆUಳ ಮುಂದೆ ಒಂದು ತೆಂಗಿನ ಸಸಿ ನೆಡಲು ಸಲಹೆ ನೀಡಿದರು. ಅತಿಥಿ ಗಳನ್ನು ಸೆಲ್ವಿ ಜಾರ್ಜ ಸ್ವಾಗತಿಸಿದರು.ಕಾರ್ಯಕ್ರಮದ ಸಂಪೊರ್ಣ ಜವಾಬ್ದಾರಿಯನ್ನು ಸುಂದರನ್ ವಹಿಸಿದ್ದರು.ಪ್ರತಿ ಬಾರಿ ನೀಡುವಂತ ಕಣ್ಮಲ ಕಣ್ಮಣೀ ಬಿರುದನ್ನು ಭರತನಾಟ್ಯ ಕಲಾವಿದೆ ಎಸ್.ಅಂಜಲಿ ಗೆ ನೀಡಿದರು. ಮಲೆಯಾಳಿ ಕುಟುಂಭಗಳಲ್ಲಿನ ಇಬ್ಬರು ಹಿರಿಯ ನಾಗರೀಕರಿಗೆ ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ಗೋಪುಕುಮಾರ್, ಗುರು ಮ್ಯಾತ್ಯುವ್ , ಅಶ್ವಿನಿ ಕೋತಂಬರಿ, ಬೈಜು.ಸಿ.ಕೆ ಉಪಸ್ಥಿತರಿದ್ದರು.ಕಾರ್ಯಕ್ರಮಕ್ಕೂ ಮುನ್ನ ಕ್ರೀಡೆಗಳು ನೆಡೆದವು ನಂತರ, ಸಂಗೀತ ರಸಮಂಜರಿ ಜರುಗಿದವು.


