ತಾಂಡಾಗಳಲ್ಲಿ ಬಸವರಾಜ ಬೊಮ್ಮಾಯಿ ಪರ ಶಾಸಕ ಚಂದ್ರು ಲಮಾಣಿ ಪ್ರಚಾರ

Ravi Talawar
ತಾಂಡಾಗಳಲ್ಲಿ ಬಸವರಾಜ ಬೊಮ್ಮಾಯಿ ಪರ ಶಾಸಕ ಚಂದ್ರು ಲಮಾಣಿ ಪ್ರಚಾರ
WhatsApp Group Join Now
Telegram Group Join Now

ಗದಗ,ಏಪ್ರಿಲ್​ 08. ನರೇಂದ್ರ ಮೋದಿಯವರ ದೂರದೃಷ್ಟಿಯ ಆಡಳಿತದ ಫಲ. ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ೧೧ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಜಗತ್ತಿನ ಅಭಿವೃದ್ಧಿ ಹೊಂದಿದ ದೇಶ ಎನಿಸಿಕೊಂಡಿದೆ. ಬರುವ ಐದು ವರ್ಷದಲ್ಲಿಭಾರತವನ್ನು ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಸದೃಢ ದೇಶವನ್ನಾಗಿ ಮಾಡುಬೇಕಾಗಿದೆ ಕಾರಣ ಮೋದಿಜಿ ಅವರಿಗೆ ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಲು ನಾವೆಲ್ಲರೂ ಭಾರತೀಯ ಜನತಾ ಪಾರ್ಟಿಯ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕೆಂದು ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಚಂದ್ರು ಲಮಾಣಿ ಅವರು ಹೇಳಿದರು.

ಹಂಗನಕಟ್ಟಿ, ತಬಲಾಯತ ಕಟ್ಟಿ, ನಬಾಪುರ, ಬೆಳಧಡಿ, ನಾಗಾವಿ ತಾಂಡಾ, ಕಳಸಾಪುರ ತಾಂಡಾಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರ ಪರ ಪ್ರಚಾರದಲ್ಲಿ ಅವರು ಮಾತನಾಡಿದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ರಾಜ್ಯಮಟ್ಟದ ಸೇವೆ ಸಲ್ಲಿಸಿದ್ದು, ಆಡಳಿತದ ಅನುಭವವುಳ್ಳವರು. ಈಗ ರಾಷ್ಟ್ರಮಟ್ಟದ ಸೇವೆಗೆ ಇವರನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಅವರು ಹೇಳಿದರು.

ಕಳೆದ ೧೦ ವರ್ಷಗಳಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ದೇಶ ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದು ಇನ್ನೂ ಹೆಚ್ಚಿನ
ಅಭಿವೃದ್ಧಿಯನ್ನು ಮಾಡಲು ಪ್ರಧಾನಿ ಮೋದಿಯವರಿಗೆ ಮತ್ತೊಂದು ಅವಕಾಶವನ್ನು ಬಸವರಾಜ ಬೊಮ್ಮಾಯಿ ರವರಿಗೆ ಮತ ಹಾಕುವುದರ ಮೂಲಕ
ನೀಡಬೇಕೆಂದು ಮತದಾರರಲ್ಲಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿದರು.

ಕರೋನದಂತಹ ಮಹಾಮಾರಿಯಲ್ಲಿ ದೇಶದ ಜನರ ಆರೋಗ್ಯ ಕಾಪಾಡುವುದರೊಂದಿಗೆ ಜಗತ್ತಿಗೆ, ವ್ಯಾಕ್ಸಿನ್ ಹಂಚುವುದರ ಮೂಲಕ ವಸುದೇವ ಕುಟುಂಬಕಂ ಎಂಬುವ ಭಾರತದ ಸಂಸ್ಕೃತಿಯನ್ನು ಜಗತ್ತು ಮೆಚ್ಚುವಂತೆ ಮಾಡಿದ್ದಲ್ಲದೆ ದೇಶವನ್ನು ಅತಿ ಉನ್ನತ ಅಭಿವೃದ್ಧಿಯತ್ತ ಕೊಂಡೊಯ್ದ ಭಾರತಮಾತೆ ಪ್ರಧಾನ ಸೇವಕರಾದ ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಶಕ್ತಿ ತುಂಬಲು ಈ ಬಾರಿ ೪೦೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದಾಗಿದೆ. ಆದ್ದರಿಂದ ಕಾರ್ಯಕರ್ತರು ಅತಿ ಹೆಚ್ಚು ಮತದಾನ ಮಾಡಲು ಜನರನ್ನು ಜಾಗೃತಗೊಳಿಸುವ ಮೂಲಕ ಬಸವರಾಜ ಬೊಮ್ಮಾಯಿ ಅವರಿಗೆ ಮತ ನೀಡುವಂತೆ ಮನವೊಲಿಸಬೇಕೆಂದು ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಾಜು ಕುರುಡಗಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಬಸವಣ್ಣೆಪ್ಪ ಚಿಂಚಲಿ, ಅಶೋಕ ಸಂಕಣ್ಣವರ, ಭದ್ರೇಶ ಕುಸಲಾಪುರ, ಗ್ರಾಮೀಣ ಮಂಡಲ ಅಧ್ಯಕ್ಷರಾದ ದ್ಯಾಮಣ್ಣ ನೀಲಗುಂದ, ಪ್ರಧಾನ
ಕಾರ್ಯದರ್ಶಿ ಬೂದಪ್ಪ ಹಳ್ಳಿ, ಎಚ್.ಸಿ. ಮಂಜುನಾಥಸ್ವಾಮಿ ಪ್ರಧಾನ ಕಾರ್ಯದರ್ಶಿ, ಅಮರನಾಥ ಬೆಟಗೇರಿ, ಅಮರನಾಥ ಗಡಗಿ, ಸುಧೀರ ಕಾಟಿಗಾರ, ವೆಂಕಟೇಶ ಹಬೀಬ, ವಿನಾಯಕ ಹಬೀಬ, ಟಿ.ಡಿ. ಪೂಜಾರ, ಬಾಗಪ್ಪ ವಗ್ಗರ, ಮಂಜುನಾಥ ಹಳ್ಳ್ಳೂರಮಠ, ವಿಠ್ಠಲ ತೋಟದ, ಶರಣಪ್ಪ ಚಿಂಚಲಿ, ಪರಮೇಶ ನಾಯಕ, ಭೋಜಪ್ಪ ಲಮಾಣಿ, ಕುಮಾರ ಕಟ್ಟಿಮನಿ, ಮಂಜು ವಡ್ಡರ, ಮುತ್ತು ಇಟಗಿಮಠ, ಗಣೇಶ ಗಂಟಿ, ಶರಣಪ್ಪ ಚಿಂಚಲಿ, ಸುರೇಶ ಚಹ್ವಾಣ ಸೇರಿದಂತೆ ಗ್ರಾಮೀಣ ಭಾಗದ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article