ವಿಜಯಪುರ:(ಡಿ.13), ದೇವರ ಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿ 2024-25 ನೇ ಸಾಲಿನ ಸಮಾಜ ಕಲ್ಯಾಣ ಇಲಾಖೆ ವಿಜಯಪುರಯಿಂದ ಸುಮಾರು 20 ಲಕ್ಷದ ಅಂಬೇಡ್ಕರ ಭವನದ, ನಿರ್ಮಾಣ ಕೆ ಆರ್ ಐ ಡಿ ಎಲ್ ವಿಜಯಪುರ, ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮವನ್ನು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಭೀಮನಗೌಡ ರಾಜು ಗೌಡ ಪಾಟೀಲ ಭೂಮಿ ಪೂಜೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಊರಿನ ಗಣ್ಯರಾದ ಅಪ್ಪಾಸಾಹೇಬ ಬಸರಕೋಡ, ಈರಣ್ಣತಾವರ ಖೇಡ, ಈರಣ್ಣ ಗಾಣಿಗೆರ, ಜಗದೀಶ ಪಾಟೀಲ, ಸುರೇಶ ಪ್ಯಾಟಿ, ಶೀವು ಗೊಬ್ಬುರ, ಮಲಕಪ್ಪ ಮಲ್ಲಾಡ, ಅಕ್ಷಯ ಗೊಬ್ಬರ, ಉಮೇಶ ಮಲ್ಲಾಡ, ಶಿವು ಕೊಳ್ಳಾರಿ, ಈರಗಂಟಿ ಕುರಮಲ್ಲಪ್ಪಗೋಳ, ಹುಸೇನ ಸೊಲಾಪುರ, ಸಂಗಮೇಶ ದಂಡೋತಿ, ಸಮಾಜದ ನಿವೃತ್ತ ಶಿಕ್ಷಕರಾದ ಎಂ.ಜಿ ಆನಂದನ್, ಮಾಂತಪ್ಪ, ಕಾಲಪ್ಪ, ಯಲ್ಲಪ್ಪ, ಉದಯಕುಮಾರ, ಬಸವರಾಜ, ಮಂಜುನಾಥ, ಪ್ರದೀಪ, ಕಾಂತಪ್ಪ ಮತ್ತು ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಹೊನ್ನಕಂಠಿ ಹಾಗೂ ಉಪಸ್ಥಿತಿತರಿದ್ದರು. ಮತ್ತು ಶಾಸಕರಿಗೆ ಸನ್ಮಾನವನ್ನು ಸಮಾಜದವತಿಯಿಂದ ಮಾಡಿದರು.


