ನೇಸರಗಿ. ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹಾಗೂ ಅವರ ಸಹೋದರ ನಾನಾಸಾಹೇಬ ಪಾಟೀಲರ ಹುಟ್ಟುಹಬ್ಬದ ಪ್ರಯುಕ್ತವಾಗಿ ಮಂಗಳವಾರ ದಿ. 22-07-2025 ರಂದು ಬೆಳ್ಳಿಗೆ 8-00 ಘಂಟೆಯಿಂದ 1-00 ಘಂಟೆಯವರೆಗೆ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ತಾಲೂಕಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೈಲಹೊಂಗಲ, ಪ್ರಾಥಮಿಕ ಅರೋಗ್ಯ ಕೇಂದ್ರ ನೇಗಿನಹಾಳ ಮತ್ತು ಶ್ರೀ ಬಾಬಾಸಾಹೇಬ ಪಾಟೀಲ ಅಭಿಮಾನಿಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ನೇಗಿನಹಾಳ ಗ್ರಾಮದ ಶ್ರೀ ಮಡಿವಾಳೇಶ್ವರ ಮಠದಲ್ಲಿ ಏರ್ಪಡಿಸಲಾಗಿದೆ. ಇದೆ ಸಂದರ್ಭದಲ್ಲಿ ಕಿತ್ತೂರು ಮತಕ್ಷೇತ್ರದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಬುಕ್ ಹಾಗೂ ಪೆನ್ನು ವಿತರಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದಕ್ಕಾಗಿ ಯಾವತ್ತೂ ರಾಜಕೀಯ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಮಾಲೆ, ಶಾಲುಗಳನ್ನು ತರದೇ ಪ್ರೀತಿಯಿಂದ ಬಂದು ಅಭಿಮಾನದಿಂದ ಶುಭ ಹಾರೈಸಬೇಕೆಂದು ಕೆ ಪಿ ಸಿ ಸಿ ಸದಸ್ಯರು, ಮಾಜಿ ಜಿ ಪಂ. ಸದಸ್ಯರಾದ ಶ್ರೀಮತಿ ರೋಹಿಣಿ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.