ಬೆಳಗಾವಿ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರ ಕಲ್ಲೊಳ್ಳಕರ ಮಾತನಾಡಿ ಮೊದಲು ಇದ್ದಂತಹ ಪಕ್ಷಿಗಳ ಸಂಖ್ಯೆ ಇಗ ಬಹಳ ಕಡಿಮೆಯಾಗುತ್ತ ಬಂದಿವೆ. ಮೊದಲು ಮನೆಯಲ್ಲಿ ಹಿತ್ತಲು ಅಂತ ಇತ್ತು ಆಗ ಕರಿಬೇವು, ಲಿಂಬು, ತೆಂಗು, ಪೇರು ಗಳಂತಹ ಕೆಲವು ಗ್ರಹ ಉಪಯುಕ್ತ ಸಸಿಗಳು ಇದ್ದವು ಆದರೆ ಇಗ ಮನೆಯ ಹೊಲಸಾಗುತ್ತದೆ ಎಂದು ಗಿಡಗಳ ಕಡೆದು ಸಂಪೂರ್ಣ ಕಾಂಕ್ರೀಟ್ ಹಾಕಿ ಬಿಡುತ್ತಿದ್ದು ಇದರಿಂದ ನಮಗೆ ವಾತಾವರಣ ಉಷ್ಣತೆಗೆ ತಿರಗುತ್ತದೆ ಆದರಿಂದ ಪ್ರತಿಯೊಬ್ಬರೂ ತನ್ನದೆಂಬ ಒಂದು ಗಿಡಗಳನ್ನು ಬೆಳಸಿ ಎಂದು ಹೇಳಿದರು.
ವಿದ್ಯಾರ್ಥಿಗಳಿoದ- ಪರಿಸರ ಉಳಿಸಿ ಬೆಳೆಸುವ ಕಾರ್ಯ ಆಗಬೇಕು : ಶಾಸಕ ಬಾಬಾಸಾಹೇಬ ಪಾಟೀಲ
ನೇಸರಗಿ : ನಾನು ಕಾಲೇಜಿನಲ್ಲಿದ್ದಾಗ ಪರಿಸರ ದಿನಾಚರಣೆಯ ಕುರಿತು ಮಾತನಾಡಲು ಹೇಳಿದರೆ ಸುಮ್ಮನೆ ಬರೆದುಕೊಂಡು ಹೋಗಿ ಉಪನ್ಯಾಸ ನೀಡಿದೆ. ಆದರೆ ಇಗ ಏರುತ್ತಿರುವ ತಾಪಮಾಣ ಅರೆತು ನಾವೆಲ್ಲ ಗಿಡಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಬೇಕಾಗಿದೆ ಎಂದು ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಸಮೀಪದ ನೇಗಿನಹಾಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ರಂಗ ಮಂದಿರದಲ್ಲಿ ಬೆಳಗಾವಿ ಜಿಲ್ಲಾ ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಪರಿಸರದ ಮಹತ್ವ ಅರಿತುಕೊಂಡರೆ ಭೌವಿಷ್ಯತ್ತಿನಲ್ಲಿ ಏರುತ್ತಿರುವ ತಾಪಮಾನ ಕುಗ್ಗಿಸಲು ಸಹಕಾರಿಯಾಗುತ್ತದೆ ಆದರಿಂದ ಯಾವ-ಯಾವ ಸರಕಾರಿ ಶಾಲೆಗಳಲ್ಲಿ ಸೂಕ್ತವಾದ ಕಪೌಂಡ ಹಾಗೂ ಗೇಟ್ ವ್ಯವಸ್ಥೆ ಇದೆಯೋ ಅಲ್ಲಿ ಅರಣ್ಯ ಇಲಾಖೆಯವರು ಗಿಡಗಳ ನಡುತ್ತಿದ್ದು ಅವುಗಳ ಸಂರಕ್ಷಣೆ ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ ಆದರಿಂದ ಮಕ್ಕಳು ಕೆಲವು ಗಿಡಗಳನ್ನು ತಾವು ದತ್ತಕ್ಕೆ ತೆಗೆದುಕೊಂಡು ಬೆಳೆಸಬೇಕು.
ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್ ಪ್ಯಾಟಿ ಸಸಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈಗಾಗಲೇ ೧೧೦೦ ಸಸಿ ನೆಟಿದ್ದು ಅದನ್ನು ಮಕ್ಕಳಿಗೆ ದತ್ತು ನೀಡಲಾಗಿದೆ. ಸಹಾಯಕ ಅರಣ್ಯ ಅಧಿಕಾರಿ ಶಿವರುದ್ರಪ್ಪ ಕಭಾಡಗಿ ಪ್ರಾಸ್ತಾವಿಕ ಮಾತನಾಡಿದರು. ಶೇ ೨೭%ರಷ್ಟು ಇರುವ ಅರಣ್ಯವನ್ನು ಶೇ ೩೩% ಅರಣ್ಯ ಪ್ರದೇಶ ಅಭಿವೃದ್ಧಿಗೊಳಿಸಬೇಕಾಗಿದೆ ಅದಕ್ಕೆ ತಮ್ಮೆಲ್ಲರ ಸಹಕಾರ ಅವಶ್ಯಕ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಸಹಾಯಕ ಅರಣ್ಯ ಅಧಿಕಾರಿ ಹೇಮಸಿಂಗ್ ರಾಠೋಡ, ತಾಲೂಕ ದಂಡಾಧಿಕಾರಿ ಹನುಮಂತ ಸಿರಹಟ್ಟಿ, ನೇಸರಗಿ ವಲಯ ಅರಣ್ಯ ಅಧಿಕಾರಿ ಬಸವರಾಜ ವಾಳದ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ, ತಾಲೂಕ ವೈದ್ಯಾಧಿಕಾರಿ ಸಂಜಯ ಸಿದ್ದಣ್ಣವರ, ಅರಣ್ಯ ಅಧಿಕಾರಿಗಳಾದ ಸುರೇಶ ದೊಡಬಸಣ್ಣವರ, ಈರಣ್ಣಾ ಕುಂಬಾರ, ವೃತ್ತ ನೀರಿಕ್ಷಕ ಬಸವರಾಜ ಕೆರಕನವರ, ಬಸವರಾಜ ಪೂಜೇರ, ಗ್ರಾ.ಪಂ ಅದ್ಯಕ್ಷೆ ಮಹಾದೇವಿ ಕೋಟಗಿ, ಉಪಾಧ್ಯಕ್ಷೆ ದೀಪಾ ಬೈಲವಾಡ, ಕಾರ್ಯದರ್ಶಿ ಸ್ನೇಹಾ ಹಿರೇಮಠ, ಎಸ್.ಡಿ.ಎಮ್.ಸಿ ಅಧ್ಯಕ್ಷ ಚಂಬಣ್ಣಾ ದಿವಾಣದ, ಮಹಾದೇವ ಮಡಿವಾಳರ, ಶಿವಾಜಿ ಮುತ್ತಗಿ, ಸುಭಾಷ ರುಮೋಜಿ, ಪ್ರಕಾಶ ಲಕ್ಕನಗೌಡರ, ಕಾರ್ಯದರ್ಶಿ ಸ್ನೇಹಾ ಹಿರೇಮಠ ಹಾಗೂ ಶಿಕ್ಷಕರು, ಗ್ರಾಮಸ್ಥರು, ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖೋಪಾದ್ಯಯರು. ಆರ್.ಆರ್ ತೋರಣಗಟ್ಟಿ ಸ್ವಾಗತಿಸಿದರು. ಎಮ್.ಎಮ್ ಸುತಗಟ್ಟಿ, ಕಿವಡಸಣ್ಣವರ ನಿರೂಪಿಸಿದರು. ಜಿ.ಬಿ ಹೆಬ್ಬಾಳ್ಕರ್ ವಂದಿಸಿದರು.