ನೇಸರಗಿ ಭಾಗದ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಶಾಸಕ ಬಾಬಾಸಾಹೇಬ ಪಾಟೀಲ

Ravi Talawar
ನೇಸರಗಿ ಭಾಗದ ಸಾರ್ವಜನಿಕ ಅಹವಾಲು ಸ್ವೀಕರಿಸಿದ ಶಾಸಕ ಬಾಬಾಸಾಹೇಬ ಪಾಟೀಲ
WhatsApp Group Join Now
Telegram Group Join Now

 ದೇವಸ್ಥಾನ, ರಸ್ತೆ, ಶಾಲಾ ಅಭಿವೃದ್ಧಿ ಪ್ರಗತಿಯಲಿ, ನೇಸರಗಿ ಭಾಗದ ಅಭಿವೃದ್ಧಿಗೆ ಶಕ್ತಿಮಿರಿ ಪ್ರಯತ್ನ

ನೇಸರಗಿ: ನೇಸರಗಿ ಜಿಲ್ಲಾ ಪಂಚಾಯತ ಕ್ಷೇತ್ರದ ದೇವಸ್ಥಾನ, ಶಾಲಾ, ರಸ್ತೆ ಮಟ್ಟದ ಕಾಮಗಾರಿಗಳು ಪ್ರಗತಿಯಲ್ಲಿ ಇದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಾರ್ವಜನಿಕರಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳ ಆದ್ಯತೆಗೆ ತಕ್ಕಂತೆ ಕೆಲಸ ಕಾರ್ಯ ಮಾಡುತ್ತೇನೆ ಎಂದು ಚನ್ನಮ್ಮನ ಕಿತ್ತೂರ ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
     ಅವರು ಬುಧವಾರದಂದು ಗ್ರಾಮದ ಶಾಸಕರ ಕಾರ್ಯಾಲಯದಲ್ಲಿ ನೇಸರಗಿ ಭಾಗದ ಜನರ  ಸಮಸ್ಯೆಗಳ ಅಹವಾಲು ಸ್ವೀಕರಿಸಿ ಮಾತನಾಡಿ ಜನರ ಬೇಡಿಕೆಯ ಮೇರೆಗೆ ಆಯಾ ಇಲಾಖೆಗೆ ವರದಿ ಸಲ್ಲಿಸಿ ಕೆಲಸ ಮಾಡಲು ಹೇಳಿದ್ದು ಕೆಲವು ಇಲಾಖೆಯ ಟೆಂಡರ ಆಗಿ ಕಾರ್ಯ ಪ್ರಾರಂಭ ಅಗಿದ್ದು ಇನ್ನೂ  ಕೆಲವಾರು ಟೆಂಡರ ಅಗಿದ್ದು  ಕೆಲಸಗಳು ಪ್ರಾರಂಭವಾಗಬೇಕಿದ್ದೆ ಎಂದರು.ಸಾರ್ವಜನಿಕರು ಮುಂಬರುವ ದಿನಗಳಲ್ಲಿ ತಾಳ್ಮೆಯಿಂದ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು ಮತ್ತು ರೈತರು ಪಿಕೆಪಿಸ್ ಗಳಲ್ಲಿ ತಮ್ಮ ಹೆಸರು ನೋಂದಾಯಿಸಿ ಸೋಯಾಭಿನ್ ಬೆಂಬಲ ಬೆಲೆಗೆ ಮಾರಾಟ ಮಾಡಬೇಕು ಎಂದು  ಹೇಳಿದರು.
    ಈ ಸಂದರ್ಭದಲ್ಲಿ ಮಾಜಿ ಜಿ ಪಂ. ಸದಸ್ಯ ನಿಂಗಪ್ಪ ಅರಿಕೇರಿ, ಯುವ ಮುಖಂಡ ಸಚಿನ ಪಾಟೀಲ, ಆಡಿವಪ್ಪ ಮಾಳಣ್ಣವರ , ಬಾಳಪ್ಪ ಮಾಳಗಿ,ಶಿವಣ್ಣ ಹುನಕುರ, ಸಂತೋಷ ಕಾಜಗಾರ, ಮಾಜಿ ಎ ಪಿ ಎಮ್ ಸಿ ಅಧ್ಯಕ್ಷ ಬರಮಣ್ಣ ಸತ್ತೇನ್ನವರ, ದೀಪಕಗೌಡ ಪಾಟೀಲ,ಶಿವನಗೌಡ ಪಾಟೀಲ, ರವಿ ಸಿದ್ದಮ್ಮನವರ,ಡಿ  ಎಸ್ ಎಸ್ ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ,ಮಲ್ಲಿಕಾರ್ಜುನ ಕಲ್ಲೋಳಿ,ನಿಂಗಪ್ಪ ತಳವಾರ, ಬಸವರಾಜ ಚಿಕ್ಕನಗೌಡ್ರ, ಸುರೇಶ ಅಗಸಿಮನಿ, ಮನೋಜ ಕೆಳಗೇರಿ,ನಜೀರ ತಹಶೀಲ್ದಾರ, ಮಂಜುನಾಥ ಹುಲಮನಿ, ಶಿವನಪ್ಪ ಮದೆನ್ನವರ, ಸತ್ತಾರ ಮೋಕಾಸಿ,ಯಮನಪ್ಪ ಪೂಜೇರಿ,ಸುಜಾತ ಪಾಟೀಲ,ಚನಗೌಡ ಪಾಟೀಲ, ಅಬ್ಬಾಸ ಪೀರಜಾದೆ,ಪ್ರಕಾಶ ಮುಂಗರವಾಡಿ ಸೇರಿದಂದೆ ನೇಸರಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ರಾಜಕೀಯ ಮುಖಂಡರು, ಸಾರ್ವಜನಿಕರು, ಕಾಂಗ್ರಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article