ಬೈಲಹೊಂಗಲ. ಹುಟ್ಟು ಹೋರಾಟಗಾರ, ಚನ್ನಮ್ಮನ ಕಿತ್ತೂರ ಶಾಸಕರಾದ ಬಾಬಾಸಾಹೇಬ ಪಾಟೀಲ ಮತ್ತು ಅವರ ಸಹೋದರ ನೇಗಿನಹಾಳ ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾದ ನಾನಾಸಾಹೇಬ ಪಾಟೀಲ ಅವರ ಜನ್ಮದಿನದ ಪ್ರಯುಕ್ತ ಸೋಮವಾರದಂದು ಶ್ರೀ ಮಡಿವಾಳೇಶ್ವರ ಮಠದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರಕ್ಕೆ ಶಾಸಕ ಬಾಬಾಸಾಹೇಬ ಪಾಟೀಲ ಚಾಲನೆ ನೀಡಿದರು. ತದನಂತರ ಸ್ವಗ್ರಹದಲ್ಲಿ ಚನ್ನಮ್ಮನ ಕಿತ್ತೂರು ಕ್ಷೇತ್ರದ ಅಭಿಮಾನಿಗಳು, ಕಾರ್ಯಕರ್ತರು ಸರಳ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಕ್ಷೇತ್ರದ ಜನರಿಂದ ಶಾಸಕನಾಗಿ ಅವರ ಅಶೋತ್ತರಗಳಿಗೆ ಸ್ಪಂದಿಸಿ ಕೆಲಸ ಮಾಡುತಿದ್ದೇನೆ ಮುಬರುವ ದಿನಗಳಲ್ಲಿ ಇನ್ನೂ ಅನೇಕ ಕಿತ್ತೂರ್ ಚನ್ನಮ್ಮನ ಕ್ಷೇತ್ರದ ಕೆಲಸ ಕಾರ್ಯಗಳನ್ನು ಮಾಡಲಾಗುವದು ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ . ಮಹೇಶ ಕೋಣಿ, ತಾಲೂಕಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್ ಎಸ್. ಸಿದ್ದಣ್ಣವರ, ನೇಗಿನಹಾಳ ಪ್ರಾಥಮಿಕ ಅರೋಗ್ಯ ಕೇಂದ್ರದ ,ಡಾ. ಜಗದೀಶಚಂದ್ರ ಹಲಸಗಿ, ಅರೋಗ್ಯ ಅಧಿಕಾರಿ ಗಂಗಪ್ಪ ಕಲ್ಲೋಳಿ ಹಾಗೂ ಚನ್ನಮ್ಮನ ಕಿತ್ತೂರು ಕ್ಷೇತ್ರದ ಬಾಬಾಸಾಹೇಬ ಪಾಟೀಲ ಅಭಿಮಾನಿಗಳ ಬಳಗದ ಸದಸ್ಯರು,ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಅಂಗನವಾಡಿ, ಆಶಾ ಕಾರ್ಯಕರ್ತರು, ನೇಗಿನಹಾಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.