ನೇಸರಗಿ: ಒಂದು ವರ್ಷ ಆರು ತಿಂಗಳ ಶಾಸಕರ ಕಾರ್ಯ ಅವಧಿಯಲ್ಲಿ ಅತೀ ಹೆಚ್ಚು ಶ್ರಮ ಪಟ್ಟು ಕಿತ್ತೂರು ಪಟ್ಟಣದ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸರ್ಕಾರಿ ಶಿಕ್ಷಣದಲ್ಲಿ ಡಿಜಿಟಲ ಶಿಕ್ಷಣ,ಡಿಜಿಟಲ್ ರೂಮ್, ದೇವಸ್ಥಾನಗಳಿಗೆ ಅನುಧಾನ, ರಸ್ತೆ ದುರಸ್ತಿಗೆ ಕ್ರಮ, 50 ಕೋಟಿ ರೂಪಾಯಿಗಳಲ್ಲಿ ಥಿಮ್ಸ್ ಪಾರ್ಕ್ ನಿರ್ಮಾಣಕ್ಕೆ ಗ್ರೀನ್ ಸಿಗ್ನೇಲ್, ಪ್ರಸಕ್ತ 23,24,25 ಅಕ್ಟೋಬರ್ 2024 ರಂದು ನಡೆಯುವ ಕಿತ್ತೂರು ಚನ್ನಮ್ಮಾಜಿಯ 200 ನೇ ಸ್ವಾತಂತ್ರ್ಯ ಸಂಗ್ರಾಮ ವಿಜಯೋತ್ಸವ ಅಂಗವಾಗಿ ಅದ್ದೂರಿ ಕಿತ್ತೂರು ಉತ್ಸವಕ್ಕೆ 5 ಕೋಟಿ ರೂಪಾಯಿಗಳ ಅನುಧಾನ, ಸುಸಜ್ಜಿತ 2 ಸ್ಟೇಜ್ ಗಳು, ಮಳೆ ನೀರು ಬಾರದ ಹಾಗೆ ಪೆಂಡಾಳ ವ್ಯವಸ್ಥೆ, ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ಲಕ್ಷಾಂತರ ಜನರಿಗೆ ನೀರು, ಉಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದ್ದಕ್ಕಾಗಿ ಸುಮಾರು ಒಂದು ತಿಂಗಳಿನಿಂದ ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಶಾಸಕ ಬಾಬಾಸಾಹೇಬ ಪಾಟೀಲ. ಕಿತ್ತೂರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಅನುಧಾನ ಮತ್ತು ಮುಖ್ಯ ರಸ್ತೆಗಳ ಅಗಲೀಕರಣ ಇನ್ನು ಅನೇಕ ಕ್ಷೇತ್ರದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಶಾಸಕರಿಗೆ ಅವರ ಧರ್ಮಪತ್ನಿ ಕೆಪಿಸಿಸಿ ಸದಸ್ಯ ಹಾಗೂ ಮಾಜಿ ಜಿ ಪಂ. ಸದಸ್ಯ ಶ್ರೀಮತಿ ರೋಹಿಣಿ ಪಾಟೀಲ ಜನರ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದು, ಶಾಸಕರ ಸಹೋದರ ಯುವ ಮುಖಂಡ ನೇಗಿನಹಾಳ ಪಿಕೆಪಿಎಸ್ ಅಧ್ಯಕ್ಷ ನಾನಾಸಾಹೇಬ ಪಾಟೀಲ ಅವರು ಕ್ಷೇತ್ರದ ಕೆಲಸ ಕಾರ್ಯಗಳಿಗೆ ಅಣ್ಣನಿಗೆ ಬೆನ್ನೆಲುಬಾಗಿ ನಿಂತು ಕೆಲಸ ಕಾರ್ಯ ಮಾಡುತ್ತಿರುವದು ವಿಶೇಷ. ಥಿಮ್ಸ್ ಪಾರ್ಕ್ ನಿರ್ಮಾಣಕ್ಕೆ ಪ್ರಥಮ ವರ್ಷದ ಪ್ರಾರಂಭಿಕ 50 ಕೋಟಿ ರೂಪಾಯಿಗಳ ಅನುಧಾನ ಬಂದಿದ್ದು ಮುಂದಿನ ಹಂತದ ಕಾಮಗಾರಿಗೆ ಹೆಚ್ಚಿನ ಅನುಧಾನ ತರುತ್ತೇನೆ. ಕಿತ್ತೂರು ಚನ್ನಮ್ಮಾಜಿ ಉತ್ಸವವನ್ನು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ಆಚರಿಸಲು ಕ್ರಮ ಕೈಗೊಳ್ಳುತ್ತೇನೆ ಎನ್ನುತ್ತಾರೆ ಶಾಸಕ ಬಾಬಾಸಾಹೇಬ ಪಾಟೀಲ.