ನೇಸರಗಿ. ಗ್ರಾಮೀಣ ಮಟ್ಟದ ರಸ್ತೆಗಳ ಅಭಿವೃದ್ಧಿಯಿಂದ ಹಳ್ಳಿಯ ಜನರಿಗೆ ಬೇಕಾಗುವ ವಸ್ತುಗಳನ್ನು ತರಲು ಹಾಗೂ ಹೊಲದ ಕೆಲಸ ಕಾರ್ಯಗಳಿಗೆ ಸಂಚರಿಸಲು ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುಧಾನ ಒದಗಿಸಿದ್ದು ಇನ್ನೂ ಕೆಲವಾರು ರಸ್ತೆಗಳ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಗುವದು ಎಂದು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಸಮೀಪದ ಮದನಬಾವಿ ಗ್ರಾಮದಿಂದ ಮುತವಾಡ ಗ್ರಾಮಕ್ಕೆ ಹೋಗುವ 700 ಮೀಟರ್ ಉದ್ದ ರಸ್ತೆ ನಿರ್ಮಾಣಕ್ಕೆ ಸುಮಾರು 1 ಕೋಟಿ 30 ಲಕ್ಷ ರೂಪಾಯಿಗಳ ಅನುಧಾನದಲ್ಲಿ ರಸ್ತೆ ಕಾಮಗಾರಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ ಪಾಟೀಲ, ರೈತ ಮುಖಂಡ ರವಿ ಸಿದ್ದಮ್ಮನವರ, ಬಸವಣ್ಣೆಪ್ಪ ಹುದ್ದಾರ, ಬಾಬುಗೌಡ ಮರಿಗೌಡರ, ಮುರಕಿಬಾವಿ ಗ್ರಾ ಪಂ ಅಧ್ಯಕ್ಷ ಶ್ರೀಮತಿ ಚಾಂದಬೀ ನದಾಫ್, ಪಿ ಡಿ ಓ ಶ್ರೀಮತಿ ಎಸ್ ಎಸ್ ಮರಕುಂಬಿ, ಯಲ್ಲಪ್ಪ ವನ್ನೂರ, ಬಸಪ್ಪ ಪುಗಟಿ, ಬಾಳೇಶ ಪೂಜೇರಿ, ಕಾಶಿಮ ಜಮಾದಾರ, ವಾಸನಗೌಡ ಪಾಟೀಲ,ಎಇಇ ಸುನೀಲ್ ಎಮ್, ಇಇ ಮಲ್ಲಿಕಾರ್ಜುನ,ಮಲ್ಲಿಕಾರ್ಜುನ ಕಲ್ಲೋಳಿ, ಬಸವರಾಜ ಚಿಕ್ಕನಗೌಡ್ರ, ಅಜ್ಜಪ್ಪ ಸತ್ತೇನ್ನವರ, ಬಾಬು ಭಾಗವಾನ ಸೇರಿದಂತೆ ಮದನಬಾವಿ ಗ್ರಾಮದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.


