ಕಿತ್ತೂರು ಇತಿಹಾಸ ಪರಂಪರೆ, ಪಿ ಎಚ್ ಡಿ ಮಾಡುವ ವಿದ್ಯಾರ್ಥಿಗಳಿಗೆ ಧನಸಹಾಯ :ಶಾಸಕ ಬಾಬಾಸಾಹೇಬ ಪಾಟೀಲ 

Ravi Talawar
ಕಿತ್ತೂರು ಇತಿಹಾಸ ಪರಂಪರೆ, ಪಿ ಎಚ್ ಡಿ ಮಾಡುವ ವಿದ್ಯಾರ್ಥಿಗಳಿಗೆ ಧನಸಹಾಯ :ಶಾಸಕ ಬಾಬಾಸಾಹೇಬ ಪಾಟೀಲ 
WhatsApp Group Join Now
Telegram Group Join Now
ಚ. ಕಿತ್ತೂರು. ಕಿತ್ತೂರು ಇತಿಹಾಸ ಅಧ್ಯಯನ ಮಾಡುವ ಸಧಭಿರುಚಿ ಹೊಂದಿರುವ ವಿದ್ಯಾರ್ಥಿಗಳು ಪಿ ಎಚ್ ಡಿ ಅಧ್ಯಯನಕ್ಕೆ ವಯಕ್ತಿಕ ಧನ ಸಹಾಯ, ಸಹಕಾರ ನೀಡುವದಾಗಿ ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
   ಅವರು ಶನಿವಾರದಂದು ಪಟ್ಟಣದಲ್ಲಿ ಕಿತ್ತೂರು ಕೋಟೆಯ ಆವರಣದ ಮುಖ್ಯ ವೇದಿಕೆಯಲ್ಲಿ ಕಿತ್ತೂರು ರಾಣಿ ಸಂಸ್ಥಾನದ ಕುರಿತು ವಿಚಾರ ಸಂಕಿರಣ ಗೋಷ್ಠಿ ಉದ್ದೇಸಿಸಿ ಮಾತನಾಡಿ ಇಂದಿನ ಯುವಕರು ಸಾಹಿತ್ಯ, ಅಧ್ಯಯನ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರುತ್ತಿಲ್ಲ, ಅದರ ಬದಲಾಗಿ ಸಾಂಸ್ಕೃತಿಕ, ಮನೋರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೋಜು ಮಾಡುತ್ತಿದ್ದಾರೆ. ಹಗಲಿ ನಡೆಯುವ ಸಾಹಿತ್ಯ ಗೋಷ್ಠಿಯಲ್ಲಿ ಪಾಲ್ಗೊಳುತ್ತಾ ಇಲ್ಲ. ಕಿತ್ತೂರು ಪರಂಪರೆ ಇತಿಹಾಸ ಅಧ್ಯಯನ ಮಾಡಲು ಮುಂದೆ ಬರಬೇಕು ಎಂದರು.
    ಖ್ಯಾತ ಸಾಹಿತಿ ಸಿ ಕೆ ನಾವಲಗಿ ಮಾತನಾಡಿ  ಸ್ವಾತಂತ್ರ್ಯ ಹೋರಾಟದಲ್ಲಿ ಕಿತ್ತೂರು ಸಂಸ್ಥಾನದ ಪಾತ್ರ, 12 ಜನ ರಾಜ್ಯರು ಆಳಿದ ಚಿಕ್ಕ ಸಂಸ್ಥಾನ ಕಿತ್ತೂರು. ಮಲ್ಲಸರ್ಜ ರಾಜ್ಯನ ಎರಡನೇ ಪತ್ನಿ ದತ್ತಕ ಪುತ್ರನಾಗಿ ಪಡೆದಾಗ ಬ್ರಿಟಿಷ್ ರಾಯಭಾರಿ ಟ್ಯಾಕರೇ ವಿರೋಧ ಮಾಡಿ ರಾಜ ಸಂಸ್ಥಾನಕ್ಕೆ ದತ್ತು ಪಡೆಯುವ ಹಕ್ಕು ಇಲ್ಲ ಎಂದು ಪುಣಾ ರಾಯಭಾರಿ ಚಾಪ್ಲಿನ ಅವರಿಗೆ ಸುಳ್ಳು ಧಾಖಲೆಗಳನ್ನು ನೀಡಿ ಕಂಪ್ಲೇಂಟ್ ಮಾಡಿ ಕಿತ್ತೂರ ರಾಜ್ಯದ ಮೇಲೆ ಯುದ್ಧ ಸಾರಿ ಕೊನೆಗೆ ಟ್ಯಾಕರೇ ಅವನು ಅಮಟೂರ ಬಾಳಾಸಾಹೇಬ ಅವರಿಂದ ಹತನಾದ ಹಾಗೂ ಬ್ರಿಟಿಷರ ವಿರುದ್ಧ ಗೆದ್ದ ತಾಯಿ ಚನ್ನಾಮಾಜಿಯಾ ಹಿರಿಮೆ ಹಾಗೂ ಕಿತ್ತೂರು ಸಂಸ್ಥಾನದ ಹಿರಿಮೆಗೂ  ಪಾತ್ರವಾಯಿತು. ತದನಂತರ ರಾಯಭಾರಿ ಚಾಪ್ಲೀನ ಕಿತ್ತೂರು ಸಂಸ್ಥಾನದ ಮೇಲೆ ದಂಡೇತಿ ಬಂದು ಕಿತ್ತೂರು ಕೋಟೆ ಒಡೆದು ಹಾಕಿ ರಾಣಿ ಚನ್ನಮ್ಮಳ ಬಂದನ ಮಾಡಿ ಬೈಲಹೊಂಗಲ ಕೋರ್ಟ್ ನಲ್ಲಿ ಬಂದನದಲ್ಲಿ ಇರಿಸಿ, ಕೆಲವು ದಿನಗಳ ಬಳಿಕ ಚನ್ನಮ್ಮ ಮತ್ತು ಆಕೆಯ ಸಂಬಧಿಕರು ಸಹಾಯ ಅಸುನಿಗಿ ಹೋದರು. ನಂತರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಕಳೆ ಉದಿ ಕೊನೆಗೆ ಗಲ್ಲು ಶಿಕ್ಷೆಗೆ, ಕೆಲವರು ಮರಣ ದಂಡನೆಗೆ ಒಳಗಾಗಿ ಕಿತ್ತೂರು ಸಂಸ್ಥಾನದ ರಾಜ್ಯಭಾರ ಅಂತ್ಯವಾಗಿ, ಕೆಲವು ಒಳಗಿನವರ ಒಳಸಂಚಿನಿಂದ ರಾಜ್ಯ ಹಾಳಾಯಿತು. ಚನ್ನಮ್ಮಾಜಿ ಅಧಿಕಾರ ಅವಧಿಯಲ್ಲಿ ಚಿನ್ನ ಆಭರಗಳನ್ನು ಕೋಟೆಯ ಭೂಮಿಯಲ್ಲಿ ಹುತಿಟ್ಟಿದ್ದು ಅದರ ಉತ್ಕಲನ ಆಗಬೇಕು. ಕಿತ್ತೂರು ಚನ್ನಾಮಾಜಿಯಾ ಇತಿಹಾಸ ಸಾರುವ ಪುಸ್ತಕಗಳು ಹೊರಬಂದು ದೇಶಯ ತುಂಬ ಕಿತ್ತೂರು ಚನ್ನಮ್ಮನ ಇತಿಹಾಸ ತಿಳಿಸುವ ಕೆಲಸವನ್ನು ಶಾಸಕರಾದ ಬಾಬಾಸಾಹೇಬ ಪಾಟೀಲರು ಮಾಡಬೇಕು ಎಂದರು.
      ಬೆಂಗಳೂರು  ಸಾಹಿತಿ ಪದ್ಮಿನಿ ನಾಗರಾಜ ಮಾತನಾಡಿ  ಕಿತ್ತೂರು ಸಂಸ್ಥಾನದ ಇತಿಹಾಸ ದೇಶನೂರ ಗ್ರಾಮದಲ್ಲಿ ಪ್ರೇಮಿಸಿ ಮದುವೆಯಾದ ಮುಸ್ಲಿಂ  ಯುವತಿಗೆ ಕೋಟೆ ನಿರ್ಮಿಸಿದ್ದಾರೆ. ಆದು ಇಂದಿಗೂ ನಮ್ಮ ಕಣ್ಣ ಮುಂದೆ, ವನ್ನುರಿನಲ್ಲಿ ಕಿತ್ತೂರು ರಾಜ ಸಂಸ್ಥಾನದ ಅನೇಕ ಶಾಸನಗಳು ಇವೆ ಎಂದರು.
    ವೇದಿಕೆಯಲ್ಲಿ ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಶ್ರೀಮತಿ ಲೀಲಾವತಿ ಹಿರೇಮಠ, ಕಿತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿ ವಾಯ್ ತುಬಾಕಿ, ಕ್ಷೇತ್ರ ಸಮನ್ವಯ ಅಧಿಕಾರಿ ಗಾಯತ್ರಿ ಅಜ್ಜಣ್ಣವರ, ಸಾಹಿತಿ ಸಂತೋಷ ಹಾನಗಲ್, ಬೆಳಗಾವಿ ಕಸಾಪ ನಿರ್ದೇಶಕ ಎಮ್ ವಾಯ್ ಮೆಣಸಿನಕಾಯಿ ಕಿತ್ತೂರು ಸಂಸ್ಥಾನ ಮತ್ತು ತಾಯಿ ಚನ್ನಮ್ಮಾಜಿಯ ಕುರಿತು ಮಾತನಾಡಿದರು. ಗೋಷ್ಠಿಯಲ್ಲಿ ಜಾನಪದ ಸಾಹಿತ್ಯದಲ್ಲಿ ಚನ್ನಮ್ಮಾಜಿಯ ಶೌರ್ಯ ಮತ್ತು ಹೋರಾಟ ಕುರಿತು ಸಾಹಿತಿ ಡಾ. ನಿಂಗು ಸೋಲಗಿ, ಚನ್ನಮ್ಮಾಜಿಯ ಆಡಳಿತದಲ್ಲಿ ಸಾಮರಸ್ಯ ಗಂಗಾಧರ್ ದೊಡವಾಡ, ಕಿತ್ತೂರು ಸಂಸ್ಥಾನದಲ್ಲಿ ಸರದಾರ ಗುರುಸಿದ್ದಪ್ಪ ನವರ ನಂಟು ಕುರಿತು ಸುರೇಶ ಹಿರೇನ್ನವರ, ಕಿತ್ತೂರು ಅಂದು ಇಂದು ಕುರಿತು ಪತ್ರಕರ್ತ ಮೆಹಬುಬ್ ಮಖಾನದಾರ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.
WhatsApp Group Join Now
Telegram Group Join Now
Share This Article