ನೇಸರಗಿ. ಇಲ್ಲಿನ ರಟ್ಟರ ಕಾಲದ ದೇವಸ್ಥಾನವಾದ ಶ್ರೀ ವೀರಭದ್ರೇಶ್ವರ ದೇವವಸ್ಥಾನದ ಕಲ್ಯಾಣ ಮಂಟಪದ ಬಾಕಿ ಉಳಿದಿರುವ ಕಾಮಗಾರಿಗೆ ಆದಷ್ಟು ಬೇಗ ಸರ್ಕಾರದಿಂದ ಅನುಧಾನ ನೀಡಿ ಅಭಿವೃದ್ಧಿಗೆ ಸದಾ ಸಹಕಾರ ನೀಡುತ್ತೇನೆ ಎಂದು ಚನ್ನಮ್ಮನ ಕಿತ್ತೂರ ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಬುಧವಾರದಂದು ಶ್ರೀ ವೀರಭದ್ರೇಶ್ವರ್ ಜಾತ್ರಾ ನಿಮಿತ್ಯವಾಗಿ ದೇವಸ್ಥಾನ ಮತ್ತು ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪಕ್ಕೆ ಬೆಟ್ಟಿ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೆ ಎಲ್ ಇ ನಿರ್ದೇಶಕ ವಾಯ್ ಎಸ್. ಪಾಟೀಲ, ಆರ್ ಎಂ ಯತ್ತಿನಮನಿ, ಡಾ. ಎಸ್ ಬಿ. ಗೆಜ್ಜಿ,ಎಸ್ ವೀ ಸೋಮಣ್ಣವರ, ಅಡಿವಪ್ಪ ಮಾಳನ್ನವರ್, ಸಿದ್ದಪ್ಪ ಇಂಚಲ, ಮಲ್ಲಿಕಾರ್ಜುನ ಮದನಬಾವಿ,ಕರಬಸಪ್ಪ ಮೂಲಿಮಣಿ,ಬಸನಗೌಡ ಚಿಕ್ಕನಗೌಡ್ರ, ಅಜ್ಜಪ್ಪ ಯತ್ತಿನಮನಿ, ಎಫ್ ಟಿ. ಕೊಳದೂರ,ಡಾ. ಮಹಾಂತೇಶ್ ಪಾಟೀಲ,ಜಗದೀಶ ಗೆಜ್ಜಿ, ಸುರೇಶ ಅಗಸಿಮನಿ, ಸುರೇಶ ಖಂಡ್ರಿ, ಬಸವರಾಜ ಚಿಕನಗೌಡ್ರ್, ಮಲ್ಲೇಶ್ ಯತ್ತಿನಮನಿ,ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.