ಬೆಮುಲ್‌ನಲ್ಲಿ ಉಪ್ಪಾರ ಸಮಾಜಕ್ಕೊಂದು ನಿರ್ದೇಶಕ ಸ್ಥಾನ : ಶಾಸಕ ಬಾಲಚಂದ್ರ ಭರವಸೆ

Pratibha Boi
ಬೆಮುಲ್‌ನಲ್ಲಿ ಉಪ್ಪಾರ ಸಮಾಜಕ್ಕೊಂದು ನಿರ್ದೇಶಕ ಸ್ಥಾನ : ಶಾಸಕ ಬಾಲಚಂದ್ರ ಭರವಸೆ
WhatsApp Group Join Now
Telegram Group Join Now

ಮೂಡಲಗಿ : ಬೆಮುಲ್‌ನಲ್ಲಿ ಎರಡು ಸ್ಥಾನಗಳಿಗೆ ನಿರ್ದೇಶಕರನ್ನು ನೇಮಕ ಮಾಡಲಾಗುತ್ತಿದ್ದು, ಅದರಲ್ಲಿ ಒಂದನ್ನು ಮೂಡಲಗಿ- ಗೋಕಾಕ ತಾಲ್ಲೂಕಿಗೆ ಸೇರಿರುವ ಭಗೀರಥ- ಉಪ್ಪಾರ ಸಮಾಜಕ್ಕೆ ಸೇರಿರುವ ರೈತಪರ ಕಾಳಜಿಯುಳ್ಳ ವ್ಯಕ್ತಿಯೊಬ್ಬರನ್ನು ನಿರ್ದೇಶಕನನ್ನಾಗಿ ಮಾಡಿಕೊಳ್ಳುತ್ತೇನೆ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಭರವಸೆಯನ್ನು ನೀಡಿದರು.
ಬುಧವಾರದಂದು ತಾಲ್ಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಶ್ರೀಮತಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಮತ್ತು ಕಪರಟ್ಟಿ-ಕಳ್ಳಿಗುದ್ದಿ ಮಠದವರು ಜಂಟಿಯಾಗಿ ಹಮ್ಮಿಕೊಂಡ ಆ?ಢ ಮಾಸದ ಪ್ರಯುಕ್ತ ಮಹರ್ಷಿ ಭಗೀರಥರ ಪೂಜೆ ಮತ್ತು ಪ್ರವಚನ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ ಉಪ್ಪಾರ ಸಮಾಜಕ್ಕೆ ನಿರ್ದೇಶಕರನ್ನಾಗಿ ನೇಮಿಸುವ ಮೂಲಕ ಈ ಸಮಾಜಕ್ಕೆ ಪ್ರಾಶಸ್ತ್ಯ ನೀಡಲಾಗುವುದು ಎಂದರು.
ಅಕ್ಟೋಬರ್ ತಿಂಗಳಲ್ಲಿ ಜರುಗುವ ಪ್ರತಿಷ್ಟಿತ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮೂಡಲಗಿ ಮತ್ತು ಗೋಕಾಕ ತಾಲ್ಲೂಕುಗಳ ವಿವಿಧ ಸಮಾಜಗಳ ಮುಖಂಡರ ಸಭೆಯನ್ನು ಕರೆದು ಮೂಡಲಗಿ- ಗೋಕಾಕ ತಾಲ್ಲೂಕಿನ ಎರಡೂ ಸ್ಥಾನಗಳಿಗೆ ರೈತರ ಕ?ಕ್ಕೆ ಸ್ಪಂದಿಸುವ ಒಮ್ಮತದ ಅಭ್ಯರ್ಥಿಯನ್ನು ಹಾಕಲಾಗುವುದು ಮತ್ತು ಮಸಗುಪ್ಪಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯು ಶತ ಸಂಭ್ರಮವನ್ನು ಆಚರಿಸುತ್ತಿದ್ದು, ಇದನ್ನೂ ಅದ್ದೂರಿಯಾಗಿ ಆಚರಿಸಲಾಗುವುದು ಎಂದ ಅವರು, ನಮ್ಮದು ಕುಟುಂಬ ರಾಜಕಾರಣವಲ್ಲ. ಜನರೇ ನಮಗೆ ಅಧಿಕಾರವನ್ನು ನೀಡುತ್ತ ಆಶೀರ್ವಾದವನ್ನು ಮಾಡುತ್ತ ಬರುತ್ತಿದ್ದಾರೆ. ಅದಕ್ಕಾಗಿ ಸಮಸ್ತ ಜನರಿಗೆ ತಮ್ಮ ಕುಟುಂಬವು ಸದಾ ಚಿರ ಋಣಿಯಾಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಹೊಸದುರ್ಗ ಭಗೀರಥ ಪೀಠದ ಜಗದ್ಗುರು ಪುರು?ತ್ತಮಾನಂದಪುರಿ ಮಹಾಸ್ವಾಮಿಗಳು ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಅವರ ಕುಟುಂಬವು ನಮ್ಮ ಸಮಾಜಕ್ಕೆ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ ಇಂತಹ ಶಾಸಕರನ್ನು ಪಡೆದ ನೀವು ಅದೃ?ವಂತರು ಎಂದು ಶಾಸಕರ ಗುಣಗಾನ ಮಾಡಿದರು. ಕಪರಟ್ಟಿ- ಕಳ್ಳಿಗುದ್ದಿ ಮಠದ ಬಸವರಾಜ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಖಡಕಭಾವಿಯ ಧರೇಶ್ವರ ಸ್ವಾಮಿಗಳು, ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಮೂಡಲಗಿ ಮತ್ತು ಗೋಕಾಕ ತಾಲ್ಲೂಕಿನ ಭಗೀರಥ ಉಪ್ಪಾರ ಸಮಾಜ ಬಾಂಧವರು ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಭಾಗಿಯಾಗಿದ್ದರು.

WhatsApp Group Join Now
Telegram Group Join Now
Share This Article