ಬೆಂಗಳೂರು (ಸೆ.13): ಕಾಂಗ್ರೆಸ್ ಸರ್ಕಾರದ ಮರು ಜಾತಿ ಗಣತಿಗೆ ಸಮೀಕ್ಷೆ ನಿರ್ಧಾರ ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಸಿದ್ದರಾಮಯ್ಯ ನಿರ್ಧಾರದ ವಿರುದ್ಧ ತಮ್ಮದೇ ಸಚಿವರು ಅಪಸ್ವರ ಎತ್ತಿದ್ದಾರೆ ಎನ್ನಲಾಗ್ತಿದೆ. ತಡರಾತ್ರಿವರೆಗೂ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿಯಿಂದ ಸರ್ಕಾರಕ್ಕೆ ಡ್ಯಾಮೇಜ್, 331 ಉಪ ಜಾತಿಗಳು ಬೇಕಾ ಎನ್ನುವ ಬಗ್ಗೆ ಪ್ರಶ್ನೆಗಳು ಎದ್ದಿವೆ ಎನ್ನಲಾಗ್ತಿದೆ. ಜಾತಿ ಗಣತಿ ವಿರುದ್ಧ ಸಚಿವ ಅಸಮಾಧಾನ
ಜಾತಿ ಜನಗಣತಿ ಕುರಿತು ಮತ್ತೊಮ್ಮೆ ಪ್ರಬಲ ಸಮುದಾಯಗಳು ಸಿಡಿದೆದ್ದಿದೆ. ನಿನ್ನೆ ತಡರಾತ್ರಿಯವರೆಗೆ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ರು. ಸಚಿವ ಶಿವರಾಜ್ ತಂಗಡಗಿ, ಸಂತೋಷ್ ಲಾಡ್, ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಭಾಗಿಯಾಗಿದ್ದರು. ಈ ವೇಳೆ ಜಾತಿ ಗಣತಿಗೆ ಭಾರೀ ವಿರೋಧ ವ್ಯಕ್ತವಾಯ್ತು ಎನ್ನಲಾಗ್ತಿದೆ.
ಜಾತಿ ಗಣತಿ ಕೈ ಬಿಡುತ್ತಾ ಸರ್ಕಾರ?
ಸಮೀಕ್ಷಾ ಪಟ್ಟಿಯಲ್ಲಿ ಲಿಂಗಾಯತ ಉಪ ಜಾತಿಗಳು, ಕ್ರೈಸ್ತ ಕುರುಬ, ಕ್ರೈಸ್ತ ಒಕ್ಕಲಿಗ ಪದಗಳನ್ನು ಕೈ ಬಿಟ್ಟು ಸಮೀಕ್ಷೆ ನಡೆಸುವುದು. ಅಥವಾ ಸರ್ಕಾರಕ್ಕೆ ಡ್ಯಾಮೇಜ್ ಆಗುವುದಾದ್ರೆ ಸಮೀಕ್ಷೆಯನ್ನೇ ಕೈಬಿಡುವ ನಿರ್ಧಾರವನ್ನ ಸರ್ಕಾರ ತೆಗೆದುಕೊಳ್ಳುತ್ತಾ ಕಾದು ನೋಡಬೇಕಿದೆ.