ಕಲಬುರಗಿ :ವಖ್ಫ್ ಅದಾಲತ್ ಕಾಟಾಚಾರಕ್ಕೆ ಮಾಡುತ್ತಿಲ್ಲ. ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ
ವಖ್ಫ್ ಅದಾಲತ್ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಮುಖ್ಯಮಂತ್ರಿ ಯವರ ಸೂಚನೆ ಮೇರೆಗೆ ಪ್ರತಿ ಜಿಲ್ಲೆಯಲ್ಲಿ ವಖ್ಫ್ ಅದಾಲತ್ ನಡೆಸುತ್ತಿದ್ದು ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಉಡಾಫೆ ಧೋರಣೆ ತೋರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಖಾತೆ, ಒತ್ತುವರಿ ತೆರವು, ಖಾಬರಸ್ಥಾನ ವಿಚಾರಗಳಿಗೆ ಸಂಬಂಧಿಸಿದ ಮನವಿ ಗಳ ಬಗ್ಗೆ ಇನ್ನೊಂದು ತಿಂಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಗಡುವು ನೀಡಿದರು.
ಜಿಲ್ಲಾ ವಖ್ಫ್ ಅಧಿಕಾರಿಗಳು ಆಸ್ತಿ ಸಂರಕ್ಷಣೆ ಹಾಗೂ ಒತ್ತುವರಿ ತೆರವು ವಿಷಯದಲ್ಲಿ ಅಸಡ್ಡೆ ತೋರುತ್ತಿದ್ದು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದರು.
ಜಿಲ್ಲಾ ವಖ್ಫ್ ಅಧಿಕಾರಿಗಳು ನಿರಂತರವಾಗಿ ಜಿಲ್ಲಾಡಳಿತ ಜತೆ ಸಂಪರ್ಕದಲ್ಲಿದ್ದು ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಬೇಕು. ವಖ್ಫ್ ಆಸ್ತಿ ದೇವರ ಆಸ್ತಿ. ಇದನ್ನು ರಕ್ಷಣೆ ಮಾಡುವುದು ಪುಣ್ಯದ ಕೆಲಸ ಎಂದು ತಿಳಿಸಿದರು.
ವಖ್ಫ್ ಅದಾಲತ್ ನಿಂದ ವರ್ಷ ಗಳಿಂದ ನೆನೆಗುದಿಗೆ ಬಿದ್ದಿದ್ದ ಸಾಕಷ್ಟು ಸಮಸ್ಯೆ ಗಳು ಬಗೆಹರಿದಿವೆ ಎಂದು ಹೇಳಿದರು.
ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಸಿ ಇ ಒ ಜಿಲಾನಿ ಮೊಕಾಶಿ , ಕಲಬುರಗಿ ಜಿಲ್ಲಾಧಿಕಾರಿ ಫೌ ಸಿಯಾ ತರನ್ನಮ್, ಎಸ್ ಪಿ ಶ್ರೀನಿವಾಸುಲು, ಯಾದಗಿರಿ ಜಿಲ್ಲಾಧಿಕಾರಿ ಸುಶೀಲ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಖ್ಫ್ ಅದಾಲತ್ ನಲ್ಲಿ ಸಲ್ಲಿಕೆಯಾದ ಮನವಿ ಗಳನ್ನು ಜಿಲ್ಲಾಧಿಕಾರಿ ಗಳಿಗೆ ನೀಡಿ ತ್ವರಿತ ಕ್ರಮ ಕೈಗೊಳ್ಳಲು ಸಚಿವರು ಸೂಚನೆ ನೀಡಿದರು.
ಒತ್ತುವರಿ ತೆರವು ಸಂಬಂಧ ಕೆಲವು ಪ್ರಕರಣ ಗಳಲ್ಲಿ ವಖ್ಫ್ ಬೋರ್ಡ್ ಪರ ನ್ಯಾಯಾಲಯದ ಆದೇಶಬಂದಿದ್ದು ಪೊಲೀಸ್ ರಕ್ಷಣೆ ಯಲ್ಲಿ ತೆರವು ಮಾಡಿಕೊಡಲು ನಿರ್ದೇಶನ ನೀಡಿದರು. ವಖ್ಫ್ ಅಧಿಕಾರಿಗಳು ನಮ್ಮ ಆಸ್ತಿಗೆ ಕಾಂಪೌಂಡ್ ನಿರ್ಮಿಸಿ ಸಂರಕ್ಷಣೆ ಮಾಡಲು ಸೂಚಿಸಿದರು.