ಹಿಪ್ಪರಗಿ ಬ್ಯಾರೇಜ್‌ನ ಗೇಟ್ ಅಳವಡಿಕೆಗೆ ಕ್ರಮ- ಸಚಿವ ತಿಮ್ಮಾಪೂರ

Hasiru Kranti
ಹಿಪ್ಪರಗಿ ಬ್ಯಾರೇಜ್‌ನ ಗೇಟ್ ಅಳವಡಿಕೆಗೆ ಕ್ರಮ- ಸಚಿವ ತಿಮ್ಮಾಪೂರ
WhatsApp Group Join Now
Telegram Group Join Now

ಜಮಖಂಡಿ; ತಾಲೂಕಿನ ಹಿಪ್ಪರಗಿ ಬ್ಯಾರೇಜ್‌ನ 22 ನೇ ಗೇಟ್‌ ನೀರಿನ ರಭಸಕ್ಕೆ ಕಿತ್ತು ಹೋಗಿದೆ. ಕೂಡಲೇ ಗೇಟ್‌ ಅಳವಡಿಸಲು ಕ್ರಮ ಜರುಗಿಸಲಾಗುತ್ತದೆ. ರೈತರು ಆತಂಕ ಪಡಬೇಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ತಿಳಿಸಿದರು. ಮಗಳವಾರ ಮಧ್ಯಾನ 1 ಗಂಟೆಯ ಸುಮಾರಿಗೆ ಹಿಪ್ಪರಗಿ ಬ್ಯಾರೇಜ್‌ನ ಗೆಟ್‌ ಕಳಚಿರುವ ಸುದ್ದಿ ತಿಳಿದಾಕ್ಷಣ ಜಿಲ್ಲಾಧಿಕಾರಿಗಳ ತಂಡ ದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಗೇಟ್‌ನ ಅಳವಡಿಕೆಗೆ ಆಂಧ್ರಪ್ರದೇಶದ ತಜ್ಞರ ತಂಡ ಸ್ಥಳಕ್ಕೆ ಆಗಮಿಸಿದೆ ಸುಮಾರು 3 ರಿಂದ ನಾಲ್ಕು ಗಂಟೆಗಳಲ್ಲಿ ನೂತನ ಗೇಟ್‌ ಅಳವಡಿಸುತ್ತೇವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.

ಅಷ್ಟರಲ್ಲಿ 0.65 ಅಥವಾ0.75 ಟಿಎಂಸಿ ಅಷ್ಟು ನೀರು ನದಿಪಾತ್ರಕ್ಕೆ ಹರಿದು ಹೋಗಲಿದೆ. ಸುಮಾರು 5 ಸಾವಿರ ಕ್ಯೂಸೆಕ್‌ ನೀರು ಹರಿಯುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ರೈತರು ಆತಂಕ ಪಡಬೇಕಾದ ಸ್ಥಿತಿ ಇಲ್ಲ. ಮುಖ್ಯ ಇಂಜನೀಯರ್‌ಗಳು, ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು. ಗೇಟ್‌ ಕಳಚಿದೆ ಎಂಬ ಸುದ್ದಿ ಕೇಳಿ ಆತಂಕ ಉಂಟಾಗಿತ್ತು. ಬಹಳಷ್ಟು ಪ್ರಮಾಣದಲ್ಲಿ ನೀರು ಹರಿದು ಹೋದರೆ ಜಲಾಶಯದ ಹಿಂಬಾಗದ ಗ್ರಾಮಗಳ ರೈತರಿಗೆ ತೊಂದರೆ ಆಗಬಹುದು ಎಂಬ ಆತಂಕ ವಿತ್ತು ಆದರೆ ಅಂದು ಕೊಂಡಷ್ಟು ನೀರು ಹರಿದು ಹೋಗುವದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ ಸುಮಾರು 5 ಸಾವಿರ ಕ್ಯೂಸೆಕ್‌ ನೀರು ಹರಿದು ಹೋಗಲಿದೆ ಎಂದು ಹೇಳಿರುವದರಿಂದ ರೈತರು ಆತಂಕ ಪಡಬೇಕಿಲ್ಲ ಎಂದು ತಿಳಿಸಿದರು. ಅಧಿಕಾರಿಗಳಿಗೆ ಆದಷ್ಟು ಬೇಗನೇ ಗೇಟ್‌ ಅಳವಡಿಸುವಂತೆ ಆದೇಶ ನೀಡಿದ್ದೇನೆ ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article