2.5 ಕೋಟಿ ವೆಚ್ಚದಲ್ಲಿ ನೂತನ  ಪೊಲೀಸ್ ಠಾಣೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಸತೀಶ್‌ ಜಾರಕಿಹೊಳಿ

Ravi Talawar
2.5 ಕೋಟಿ ವೆಚ್ಚದಲ್ಲಿ ನೂತನ  ಪೊಲೀಸ್ ಠಾಣೆ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಸತೀಶ್‌ ಜಾರಕಿಹೊಳಿ
WhatsApp Group Join Now
Telegram Group Join Now
ಕಾಕತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳ ಲೋಕಾರ್ಪಣೆ
ಬೆಳಗಾವಿ:  ತಾಲೂಕಿನ ಕಾಕತಿಯಲ್ಲಿ 2.5  ಕೋಟಿ ರೂ. ವೆಚ್ಚದಲ್ಲಿ  ನೂತನವಾಗಿ ನಿರ್ಮಿಸಲಾಗುತ್ತಿರುವ ಪೊಲೀಸ್ ಠಾಣೆ ಕಟ್ಟಡ  ಕಾಮಗಾರಿಗೆ ಸಚಿವ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿದರು.
ನಂತರ ಕಾಕತಿಯಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ನೂತನ ಬಸ್ ತಂಗುದಾಣವನ್ನು  ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಲೋಕಾರ್ಪಣೆಗೊಳಿಸಿದರು.
 ಸ್ಮಾರ್ಟ್ ಸಿಟಿ ವ್ಯವಸ್ಥಾಪಕರಾದ ಸಯೀದಾ ಅಫ್ರೀನಾಬಾನು ಬಳ್ಳಾರಿ ಅವರು ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಪ್ರಥಮಬಾರಿ ಕಾಕತಿ ಗ್ರಾಮದಲ್ಲಿ 2 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ಎರಡು ಶುದ್ಧ ಕುಡಿಯುವ ನೀರಿನ ಘಟಕ, ಸುಸಜ್ಜಿತ ಅತ್ಯಾಧುನಿಕ ಸ್ಮಾರ್ಟ್ ಬಸ್ ತಂಗುದಾಣ, ಕಾಕತಿ ಗ್ರಾಮದಲ್ಲಿನ ರಸ್ತೆ, ಒಳಚರಂಡಿ, 27 ಬೀದಿ ದೀಪಗಳ ಅಭಿವೃದ್ಧಿ ಮಾಡಲಾಗಿದೆ. 24 ಅತ್ಯಾಧುನಿಕ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ‌ ಸಚಿವರ ಆಪ್ತ ಸಹಾಯಕ ಅರವಿಂದ ಕಾರ್ಚಿ,   ಮಹಾಂತೇಶ ಮಗದುಮ್ಮ, ಮಲಗೌಡ ಪಾಟೀಲ ಮಾರುತಿ ಗುಟಗುದ್ದಿ,  ಮಾಜಿ ಜಿಪಂ ಸಿದ್ದುಗೌಡ ಸುಣಗಾರ, ಕಾಕತಿ ಪೊಲೀಸ್‌ ಠಾಣೆ ಸಿಪಿಐ ಸುರೇಶ ಸಿಂಗಿ, ಪಿಎಸ್ ಐ ಮಂಜುನಾಥ ‌ನಾಯಕ, ಮೃತ್ಯುಂಜಯ ಮಠದ, ಪರಶುರಾಮ ನಾರವೇಕರ್, ಹೊಳಿ ನಾರಾಯಣ, ಯಲ್ಲಪ ಮುಚ್ಚಂಡಿ, ಗಂಗಾಧರ ವರಗ, ಕಾಕತಿ ಅಧ್ಯಕ್ಷೇ ವರ್ಷಾ ಮುಚ್ಚಂಡಿಕರ್, ಉಪಾಧ್ಯಕ್ಷರಾದ ರೇಣುಕಾ ಕೊಳಿ ಹಾಗೂ ಇತರರು ಇದ್ದರು.
WhatsApp Group Join Now
Telegram Group Join Now
Share This Article