ಬೆಳಗಾವಿ: ರಾಣಿ ಚನ್ನಮ್ಮ ಮೃಗಾಲಯಕ್ಕೆ ಲೋಕೋಪಯೋಗಿ ಜಿಲ್ಲಾಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿ. ಮೃಗಾಲಯದ ಪ್ರಾಣಿಗಳ ಪಾಲನೆ-ಪೋಷಣೆ ಬಗ್ಗೆ ಪರಿಶೀಲನೆ ನಡೆಸಿ, ಮುಂಜಾಗ್ರತಾ ಕ್ರಮ ಕೈಗೊಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೃಷ್ಣ ಮೃಗಗಳು ಕಾಯಿಲೆಯಿಂದ ಮೃತಪಟ್ಟ ಹಿನ್ನಲೆಯಲ್ಲಿ ಮೃಗಾಯಲಕ್ಕೆ ಸಚಿವರು ಮಂಗಳವಾರ ಭೇಟಿ ನೀಡಿ, ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ಚರ್ಚಿಸಿದರು. ಕೃಷ್ಣ ಮೃಗಾಯಲಕ್ಕೆ ಬಂದ ಈ ಕಾಯಿಲೆ ಬೇರೆ ಬೇರೆ ಪ್ರಾಣಿಗಳಿಗೆ ಸಂಕು ತಗಲುವ ಸಾಧ್ಯತೆ ಇದ್ದರೆ ಮುಂಜಾಗ್ರತವಾಗಿ ವೈದ್ಯಕೀಯ ಚಿಕಿತ್ಸೆ ನೀಡಬಹುದು ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದರು, ಈ ಕಾಯಿಲೆ ಬೇರೆ ಪ್ರಾಣಿಗಳ ಮೇಲೆ ಪರಿಣಾಮ ಬೀರುವ ಯಾವುದೇ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಸಚಿವರಿಗೆ ಸ್ಪಷ್ಟನೆ ನೀಡಿದರು.
ಬೆಂಗಳೂರಿನಿಂದ ನುರಿತ ವೈದ್ಯ ತಜ್ಞರ ತಂಡ ಮೃಗಾಯದಲ್ಲಿ ಕೃಷ್ಣಮೃಗಗಳ ಚಿಕಿತ್ಸೆ ನೀಡಿದೆ. ಈ ಕಾಯಿಲೆ ಬಗ್ಗೆ ಲಾಬ್ ನಿಂದ ವರದಿ ಕೂಡ ಪಡೆಯಲಾಗಿದೆ. ಸಧ್ಯ ಇರುವ ಹುಲಿ, ಸಿಂಹಗಳ ಸೇರಿದಂತೆ ಇನ್ನೂಳಿದ ಪ್ರಾಣಿಗಳ ಮೇಲೆ ಕಟ್ಟುನಿಟ್ಟಿನ ನಿಗಾವಹಿಸಿ ಪ್ರಾಣಿಗಳ ಆರೋಗ್ಯ ಕಾಪಾಡಲು ಎಲ್ಲಾ ಕ್ರಮಗಳನ್ನು ಕೈಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.
ಈ ಕಾಯಿಲೆ ಹೆಚ್ಚಾಗದಂತೆ ನಿಯಂತ್ರಿಸಲು ವೈದ್ಯ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಕಾಯಿಲೆ ಹತ್ತೋಟಿಗೆ ತರಲು ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗಿದೆ. ಕಾಯಿಲೆ ಹತ್ತೋಟಿಗೆ ಕೂಡ ಬಂದಿದೆ ಎಂದು ತಿಳಿಸಿದರು.
ಈ ವೇಳೆ ಬೆಳಗಾವಿ ಎಸಿಎಪ್ ನಾಗರಾಜ ಬಾಳೇಹೂಸೂರ, ಕರ್ನಾಟಕ ಮೃಗಾಯದ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ಸುನೀಲ ಪನವಾರ್, ಮಂಜುನಾಥ ಚವ್ಹಾನ್ , ಡಿಎಪ್‌ಓ ಕ್ರಾಂತಿ ಎನ್. ಇ, ವೈದ್ಯರಾದ ಪ್ರಯಾಗ್ ಹಾಗೂ ಮೃಗಾಲಯದ ಸಿಬ್ಬಂದಿ ಇತರರು ಇದ್ದರು.


