ಹುಕ್ಕೇರಿ: ಭಜಂತ್ರಿ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಹೊಂದಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ಬೆಣಿವಾಡ ಗ್ರಾಮದಲ್ಲಿ ಕೊರಮ (ಭಜಂತ್ರಿ) ಸಮಾಜದ ನೂತನ ದೇವಸ್ಥಾನ ಕಟ್ಟಡವನ್ನು ಉದ್ಘಾಟಸಿ, ಶ್ರೀ ದುರ್ಗಾದೇವಿ, ಶ್ರೀ ಕರೆಮ್ಮಾದೇವಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಾಕಷ್ಟು ಜನಪರ, ಹಿಂದುಳಿದವರ ಅಭಿವೃದ್ಧಿಗಾಗಿ ಅನೇಕು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಭಜಂತ್ರಿ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ನಾನು ಕೂಡ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಭಜಂತ್ರಿ ಸಮುದಾಯದ ನುಲಿಯ ಚಂದಯ್ಯನವರು 12ನೇ ಶತಮಾನದ ವಚನಕಾರರಾಗಿದ್ದು, ಬಸವಣ್ಣನವರ ಸಾಮಾಜಿಕ, ಧಾರ್ಮಿಕ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಾಯಕದಲ್ಲಿ ದೇವರನ್ನು ಕಾಣುವ ತತ್ವವನ್ನು ಬೋಧಿಸಿದರು. ಅವರ ವಚನಗಳು ಕಾಯಕ, ದಾಸೋಹ, ಮತ್ತು ಸಾಮಾಜಿಕ ಸಮಾನತೆಯ ಬಗ್ಗೆ ಬೆಳಕು ಚೆಲ್ಲುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ಅವುಜೀಕರ ಆಶ್ರಮದ ಕ್ಯಾರಗುಡ್ಡ ಶ್ರೀ ಅಭಿನವ ಮಂಜುನಾಥ್ ಮಹಾರಾಜರು, ಮುಖಂಡರಾದ ಅಶೋಕ ಪಾಟೀಲ್, ರಿಷಭ್ ಪಾಟೀಲ್, ಜಿ.ಬಿ.ಪಾಟೀಲ್, ತೇಜರಾಜ ಪಾಟೀಲ್ ಸೇರಿದಂತೆ ನೂರಾರು ಮುಖಂಡರಿದ್ದರು.